ಕನಕಾಂಬರ ಹೂವಿನ ಸೀರೆ ಅಲಂಕಾರದಿಂದ ಕಂಗೊಳಿಸುತ್ತಿರುವ ಶ್ರೀ ತ್ರಿಪುರ ಸುಂದರಿ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮೂರನೇ ಆಷಾಢ ಶುಕ್ರವಾರ
ಶ್ರೀ ತ್ರಿಪುರ ಸುಂದರಿ ಅಮ್ಮ
ಮೂಗೂರು: ಮೂರನೇ ಆಷಾಢ ಶುಕ್ರವಾರ ಪ್ರಯುಕ್ತ ಗ್ರಾಮದ ಪ್ರಸಿದ್ಧ ಶ್ರೀ ತ್ರಿಪುರ ಸುಂದರಿ ಅಮ್ಮನವರನ್ನು ಕನಕಾಂಬರ ಹೂವಿನ ಸೀರೆಯಿಂದ ಅಲಂಕರಿಸಿದ್ದು, ಸಾವಿರಾರು ಭಕ್ತರು ಕಣ್ತುಂಬಿಕೊಂಡರು.
ತ್ರಿಪುರ ಸುಂದರಿ, ಶ್ರೀ ದೇಶೇಶ್ವರ ಸ್ವಾಮಿಯ ಪಾರ್ವತಿ ದೇವಿ ಹಾಗೂ ರಾಕಸಮ್ಮನವರಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ದೇವಾಸ್ಥಾನವನ್ನು ವಿಶೇಷವಾಗಿ ಹೂವಿನಿಂದ ಅಲಂಕರಿಸಲಾಗಿತ್ತು. ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಿತು. ವಿವಿಧೆಡೆಯಿಂದ ಭಕ್ತವೃಂದ ತಂಡೋಪತಂಡವಾಗಿ ಆಗಮಿಸಿತ್ತು. ಸರದಿ ಸಾಲಿನಲ್ಲಿ ನಿಂತು ಅಮ್ಮ ನವರ ದರ್ಶನ ಪಡೆದ ಭಕ್ತರು ಪ್ರಾರ್ಥನೆ ಸಲ್ಲಿಸಿದರು.
ಗ್ರಾಮದ ಎಂ.ಬಿ.ಶ್ರೀಕಂಠಸ್ವಾಮಿ ಕುಟುಂಬಸ್ಥರು ಪೂಜೆಯ ಸೇವಾರ್ಥದಾರರಾಗಿದ್ದು, ದೇಗುಲದ ಬಳಿ ಭಕ್ತರಿಗೆ ಪ್ರಸಾದ ವಿತರಿಸಿದರು. ಈ ನಡುವೆ ತಾಲೂಕು ಆಡಳಿತ ಸಕಲ ಸಿದ್ಧತೆ ಕೈಗೊಳ್ಳದ ಹಿನ್ನೆಲೆಯಲ್ಲಿ ಕುಡಿಯುವ ನೀರು ಹಾಗೂ ಶೌಚಗೃಹಕ್ಕೆ ಭಕ್ತರು ಪರದಾಡುವಂತಾಗಿತ್ತು.