ಮದ್ದೂರು: ತಾಲೂಕಿನ ಯರಗನಹಳ್ಳಿಯಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ನಟರಾಜ್ ಮಂಚಯ್ಯ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯ ಜರುಗಿತು.
ಮುಂಜಾನೆಯಿಂದಲೇ ದೇವರ ವಿಗ್ರಹಕ್ಕೆ ಹಾಗೂ ಬೃಂದಾವನಕ್ಕೆ ಅಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಗ್ರಾಮ ಸೇರಿದಂತೆ ತಾಲೂಕಿನ ವಿವಿಧೆಡೆಯಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಗ್ರಾಮದ ಮುಖಂಡರಾದ ನಟರಾಜು, ರಾಮಚಂದ್ರು, ಯರಗನಹಳ್ಳಿ ಮಹಾಲಿಂಗು, ಸಚಿನ್, ಗುರುಪ್ರಸಾದ್, ಅರ್ಚಕ ಯದು ಸೇರಿದಂತೆ ಹಲವರು ಹಾಜರಿದ್ದರು.