ರೇವಾ ವಿವಿಯಲ್ಲಿ ವಿಶ್ವ ವಾಸ್ತುಶಿಲ್ಪ ದಿನಾಚರಣೆ

ಶಿಕ್ಷಣದಿಂದ ಉದ್ಯಮದೆಡೆಗೆ ಎಂಬ ಧ್ಯೇಯ ಪ್ರತಿಪಾದನೆ
Vice-Chancellor Dr. P. Shyama Raju, Architect Vinu Daniel (founder of Wallmakers), Dr. Vimala Swamy, and others participated in the World Architecture Day celebrations held at REVA University.
ರೇವಾ ವಿಶ್ವ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಾಸ್ತು ಶಿಲ್ಪ ದಿನಾಚರಣೆಯಲ್ಲಿ ಕುಲಪತಿ ಡಾ.ಪಿ.ಶ್ಯಾಮರಾಜು, ವಾಲ್‌ಮೇಕರ್ಸ್ ಸಂಸ್ಥಾಪಕ ಆರ್ಕಿಟೆಕ್ಟೃ್ ವಿನು ಡೇನಿಯಲ್, ಡಾ.ವಿಮಲಾ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.
Published on: 

ಬೆಂಗಳೂರು : ರೇವಾ ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ ವಿಶ್ವ ವಾಸ್ತುಶಿಲ್ಪ ದಿನಾಚರಣೆಯನ್ನು ಆಚರಿಸಲಾಯಿತು. ವಿಶ್ವವಿದ್ಯಾಲಯದ ಶಿಕ್ಷಣದಿಂದ ಉದ್ಯಮದೆಡೆಗೆ ಎಂಬ ಧ್ಯೇಯವನ್ನು ಪ್ರತಿಪಾದಿಸಿ, ವಿದ್ಯಾರ್ಥಿಗಳು ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗದೆ, ಉದ್ಯಮಶೀಲ ಮನೋಭಾವ ಬೆಳೆಸಿಕೊಳ್ಳಲು ಪ್ರೇರೇಪಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೇವಾ ವಿವಿ ಕುಲಪತಿ ಡಾ.ಪಿ.ಶ್ಯಾಮರಾಜು, ವೇಗವಾಗಿ ಬೆಳೆಯುತ್ತಿರುವ ನಗರ ಪ್ರದೇಶಗಳಲ್ಲಿ ಕೃಷಿ ಭೂಮಿ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದು ಸಮಾಜದ ಪ್ರಮುಖ ಸವಾಲಾಗಿದ್ದು, ಈ ಹಿನ್ನೆಲೆಯಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಉದ್ಯಮ ಕ್ಷೇತ್ರಗಳ ಮಹತ್ವ ಹೆಚ್ಚಾಗಿದೆ. ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸುಸ್ಥಿರ ನಿರ್ಮಾಣಕ್ಕೆ ಆದ್ಯತೆ ನೀಡಬೇಕು.

ಕೃತಕ ಬುದ್ಧಿಮತ್ತೆಯ ಬಳಕೆ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ವಾಸ್ತುಶಿಲ್ಪ ಕ್ಷೇತ್ರದಲ್ಲಿಯೂ ಬದಲಾವಣೆಗಳು ನಡೆಯುತ್ತಿವೆ. ಆದರೂ ರೇಖಾಚಿತ್ರ ರಚನೆ, ವಿನ್ಯಾಸ ಚಿಂತನೆ ಮತ್ತು ಪ್ರಾಯೋಗಿಕ ಕಲಿಕೆಯ ಮಹತ್ವ ಕಡಿಮೆಯಾಗುವುದಿಲ್ಲ. ವಿದ್ಯಾರ್ಥಿಗಳು ಯೋಜನಾಧಾರಿತ ಕಲಿಕೆಗೆ ಒತ್ತು ನೀಡಿ, ಸ್ವಂತ ವಿನ್ಯಾಸದ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕಟ್ಟಡ ನಿರ್ಮಾಣದ ಸಾಂಪ್ರದಾಯಿಕ ವಿಧಾನಗಳು ಹಾಗೂ ಆಧುನಿಕ ವಾಸ್ತುಶಿಲ್ಪದ ನಡುವಿನ ಸಂಬಂಧವನ್ನು ವಿವರಿಸಿದರು. ತಮ್ಮ ವೃತ್ತಿಜೀವನದ ಆರಂಭದ ದಿನಗಳನ್ನು ಸ್ಮರಿಸಿದ ಅವರು, ನಿರ್ಮಾಣ ಸ್ಥಳಗಳಲ್ಲಿ ನೇರವಾಗಿ ಕೆಲಸ ಮಾಡಿದ್ದು, ಕಟ್ಟಡ ನಿರ್ಮಾಣ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ತಮ್ಮ ವಾಸ್ತುಶಿಲ್ಪದ ದೃಷ್ಟಿಕೋನ ರೂಪಿಸಿಕೊಳ್ಳಲು ನೆರವಾಯಿತು ಎಂದು ಹೇಳುವ ಮೂಲಕ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.

ವಿಶ್ವ ವಾಸ್ತುಶಿಲ್ಪ ದಿನಾಚರಣೆಯ ಅಂಗವಾಗಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಕಿಟೆಕ್ಚರ್ ವತಿಯಿಂದ ಬೊಂಬೆ ತಯಾರಿಕೆ ಕಾರ್ಯಾಗಾರ ಹಾಗೂ ಆಂಧ್ರಪ್ರದೇಶದ ಸಾಂಪ್ರದಾಯಿಕ ಚರ್ಮದ ನೆರಳು ಬೊಂಬೆಯಾಟ ತೊದಲು ಬೊಮ್ಮಲಾಟ ಪ್ರದರ್ಶನ ಆಯೋಜಿಸಲಾಗಿತ್ತು.

ಜೈಶ್ರೀ ಕಲಾ ಸೃಷ್ಟಿ ಸೊಸೈಟಿಯ ಸಂಸ್ಥಾಪಕ ಮುಖ್ಯ ಬೊಂಬೆಯಾಟಗಾರ ಕಂದಾಯ್ ಅಂಜನಪ್ಪ ಪ್ರದರ್ಶನ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನ ಡೀನ್ ಡಾ. ವಿಮಲಾ ಸ್ವಾಮಿ, ನಿರ್ದೇಶಕ ಆರ್ಕಿಟೆಕ್ಟೃ್ ಸುಧೀರ್ ಆಚಾರ್ಯ, ಮತ್ತಿತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.