

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಆಯುರ್ವೇದ ಕೇವಲಒಂದು ಚಿಕಿತ್ಸಾ ಪದ್ಧತಿಯಾಗಿರದೆಪ್ರಾಚೀನ ಜೀವನ ಕ್ರಮವಾಗಿದ್ದು,ಆ ಕುರಿತು ಜನರಲ್ಲಿಜಾಗೃತಿ ಮೂಡಿಸಿ,ಸ್ವಾಸ್ಥ್ಯಯುತಜೀವನದ ಬಗ್ಗೆ ಮಾಹಿತಿ ಒದಗಿಸುವಪ್ರಮುಖ ಗುರಿಯೊಂದಿಗೆ ಕಜೆಆಯುವೇದಿಕ್ ಚಾರಿಟಬಲ್ ಫೌಂಡೇಶನ್ಹಮ್ಮಿಕೊಂಡಿರುವ 2ನೇವಿಶ್ವ ಆಯುರ್ವೇದ ಸಮ್ಮೇಳನವುಡಿ.25ರಿಂದಆರಂಭವಾಗಲಿದೆ.
ಅರಮನೆಮೈದಾನದ ಗೇಟ್ ನಂ.6ರ ‘ದಿ ರಾಯಲ್ಸೆನೆಟ್ ಮತ್ತು ದಿ ಗ್ರ್ಯಾಂಡ್ಕ್ಯಾಸ್ಟಲ್’ ಆವರಣದಲ್ಲಿ ಸಮ್ಮೇಳನಆಯೋಜಿಸಲಾಗಿದೆ.ಈ ಕುರಿತುಸುದ್ದಿಗೋಷ್ಠಿಯಲ್ಲಿ ವಿವರನೀಡಿದ ಸಮ್ಮೇಳನದ ಆಯೋಜಕ ಡಾ.ಗಿರಿಧರಕಜೆ, ಆಯುರ್ವೇದಸಮ್ಮೇಳನದಲ್ಲಿ ಜನರ ಬದುಕಿಗೆಬೇಕಾದ ಎಲ್ಲ ಮಾಹಿತಿ ದೊರೆಯಲಿದೆ.ಸ್ವಾಸ್ಥ್ಯರಕ್ಷಣೆಗೆ ಆಯುರ್ವೇದ ಪೂರಕವಾಗಿದ್ದು,ರೋಗ ಬಂದ ನಂತರಚಿಕಿತ್ಸೆಗಳನ್ನು ಎಲ್ಲ ವೈದ್ಯಕೀಯಪದ್ಧತಿಯಲ್ಲೂ ಹೇಳಿದ್ದಾರೆ.ಆದರೆ ಆಯುರ್ವೇದವುರೋಗ ಬರದಂತೆ ತಡೆಯುವುದು ಮತ್ತುನಿವಾರಿಸುವುದನ್ನು ಹೇಳಿದೆ.ನಾವು ಸ್ವೀಕರಿಸುವಆಹಾರ ಮತ್ತು ಅದರ ಗುಣಮೌಲ್ಯಗಳನ್ನುತಿಳಿದು ಋತುಮಾನಕ್ಕನುಗುಣವಾಗಿಸರಿಯಾದ ಪ್ರಮಾಣದಲ್ಲಿ ಸ್ವೀಕರಸುವುದರಪ್ರಯೋಜನಗಳ ಕುರಿತು ಸಮ್ಮೇಳನದಲ್ಲಿಮಾಹಿತಿ ನೀಡಲಾಗುವುದು.ಪಾರಂಪರಿಕ ಆಹಾರದಮಹತ್ವ, ಆಯುರ್ವೇದಹಿನ್ನೆಲೆಯಲ್ಲಿ ಅದರ ಪರಿಣಾಮಗಳನ್ನುತಿಳಿಸುವ ಪ್ರಯತ್ನ ನಡೆಯಲಿದೆಎಂದರು.
ವಿಶೇಷವಾಗಿಧನ್ವಂತರಿ ಪೂಜೆ ಮತ್ತು ಮಹಾಯಜ್ಞನಡೆಯಲಿದೆ.ಆಯುರ್ವೇದಗಿಡಮೂಲಿಕೆಗಳ ಪ್ರಸ್ತಾಪ ಹೊಂದಿರುವಶ್ರೀರುದ್ರ ಪಠಣ,ಆಯುರ್ವೇದಶಿಕ್ಷಣದ ಸಾರವಾಗಿರುವ ಅಷ್ಟಾಂಗಹೃದಯ ಗ್ರಂಥ ಪಠಣ,ಇತರೆ ಎಲ್ಲವೈದ್ಯಕೀಯ ಪದ್ಧತಿಗಳ ಮೂಲಕ ಜನರಸೇವೆ ಮಾಡುತ್ತಿರುವ ಸಾಧಕರಿಗೆ‘ಸಮಾನ ಗೌರವ ಸಮ್ಮಾನ್’ ಪ್ರಶಸ್ತಿ,ಆಯುರ್ವೇದದಲ್ಲಿಉನ್ನತ ಸಾಧನೆ ಮಾಡಿದ ಸಾಧಕರಿಗೆ‘ಆಯುರ್ವೇದ ವಿಶ್ವರತ್ನ’ ಪ್ರಶಸ್ತಿನೀಡಿ ಸನ್ಮಾನಿಸಲಾಗುವುದು.ಈಗಾಗಲೇ ಕಾರ್ಯಕ್ರಮದಕುರಿತು ಜಾಗೃತಿ ಮೂಡಿಸಲು ಕಳೆದಒಂದು ತಿಂಗಳಿನಿಂದ ಆಯುರ್ವೇದರಥಯಾತ್ರೆ, ಬೈಕ್ಜಾಥಾ ವಿಂಟೇಜ್ ಕಾರ್ ಜಾಥಾ,ವಾಕಥಾನ್ ಮತ್ತಿತರಕಾರ್ಯಕ್ರಮ ಮಾಡಲಾಗಿದ್ದು,ಕಾರ್ಯಕ್ರಮಕ್ಕೆಲಕ್ಷಾಂತರ ಜನ ಆಗಮಿಸುವ ನಿರೀಕ್ಷೆಇದೆ ಎಂದು ಕಜೆ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿಸಮ್ಮೇಳದ ಪ್ರಮುಖ ಪಾಲುದಾರರಾದಹಿಮಾಲಯ ವೆಲ್‌ನೆಸ್ ಸೆಂಟರ್‌ನಡಾ. ಅಶೋಕ್,ಧೂತಪಾಪೇಶ್ವರಆಯುರ್ವೇದ ಕಂಪನಿಯ ಅಭಿಷೇಕ ಮತ್ತುಅಜಿತ್ ಉಪಸ್ಥಿತರಿದ್ದರು.
ವೈವಿಧ್ಯಮಯ ಕಾರ್ಯಕ್ರಮಗಳಿಗೆ ವೇದಿಕೆಆಯುರ್ವೇದ ಸಮ್ಮೇಳನ ನಡೆಯುವ ನಾಲ್ಕು ದಿನಗಳು ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತಜ್ಞರಿಂದ ರೋಗಗಳ ಬಗ್ಗೆ ಉಪನ್ಯಾಸ, ಪ್ರಬಂಧ ಮಂಡನೆ, ವಸ್ತುಪ್ರದರ್ಶನ ಪಾರಂಪರಿಕ ಆಹಾರದ ಮಹತ್ವ ತಿಳಿಸಲು ಪಾಕೋತ್ಸವ, ಆಹಾರ ಮೇಳ, 200ಕ್ಕೂ ಹೆಚ್ಚು ಸ್ವದೇಶಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು, ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧವಾಗಿರುವ ಆಳ್ವಾಸ ತಂಡದ ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನ, ಲೇಸರ್ ಶೋ, ತಾಳವಾದ್ಯ, ಗೋಡ್ಕಿಂಡಿ ತಂಡದ ಕೊಳಲುವಾದನ, ಚಂಡೆಮದ್ದಳೆ, ಹುಲಿವೇಷ ನೃತ್ಯ, ಜಾದು ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳು ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಇರಲಿದೆ.