ಶಿಸ್ತು ಬದ್ಧ ಜೀವನ ಕ್ರಮ ಕೈಗೊಳ್ಳಿ: ಪ್ರದೀಪ ಗುಡ್ಡದ ಸಲಹೆ

ಶಿಸ್ತು ಬದ್ಧ ಜೀವನ ಕೈಗೊಳ್ಳಿ :ಪ್ರದೀಪ ಗುಡ್ಡದ ಸಲಹೆ
ಶಿಸ್ತು ಬದ್ಧ ಜೀವನ ಕೈಗೊಳ್ಳಿ :ಪ್ರದೀಪ ಗುಡ್ಡದ ಸಲಹೆ
Published on

ಪ್ರಮುಖ ಮುಖ್ಯಾಂಶಗಳು

  • ಶಿಸ್ತು ಬದ್ಧ ಜೀವನ ಕೈಗೊಳ್ಳಿ: ಪ್ರದೀಪ ಗುಡ್ಡದ ಸಲಹೆ
  • ಆರ್ ಎಲ್ ಎಸ್ ಕಾಲೇಜಿನಲ್ಲಿ ಕಾರ್ಯಾಗಾರ
  • ಕಾರ್ಯಾಗಾರ ಸದುಪಯೋಗ ಪಡಿಸಿಕೊಳ್ಳಿ:ಡಾ.ಜ್ಯೋತಿ ಕವಳೆಕರ

ಶಿಸ್ತು ಬದ್ಧ ಜೀವನ ಕ್ರಮವನ್ನು ಕೈಗೊಳ್ಳಿ
| ಚಾಣಕ್ಯ ಕರಿಯರ್ ಅಕಾಡೆಮಿ ನಿರ್ದೇಶಕ ಪ್ರದೀಪ ಸಲಹೆ | ಕಾರ್ಯಾಗಾರ

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಓದು,ಕಠಿಣ ಪರಿಶ್ರಮ ಹಾಗೂ ಶಿಸ್ತುಬದ್ಧ ಜೀವನ ಕ್ರಮವನ್ನು ತೆಗೆದುಕೊಂಡರೆ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಧಾರವಾಡ ಚಾಣಕ್ಯ ಕರಿಯರ್ ಅಕಾಡೆಮಿ ನಿರ್ದೇಶಕ ಪ್ರದೀಪ ಗುಡ್ಡದ ಸಲಹೆ ನೀಡಿದರು.
ಇಲ್ಲಿನ ಕೆಎಲ್‌ಐ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಗಣಿತಶಾಸ್ತ್ರದ ವಿಭಾಗ ಮತ್ತು ಐಕ್ಯೂಎಸಿ ಹಾಗೂ ಪ್ಲೇಸ್‌ಮೆಂಟ್ ಸೆಲ್ ಸಹಕಾರದಲ್ಲಿ ಸಾಮರ್ಥ್ಯ ಸಾಧನೆ ವೃತ್ತಿ ಜೀವನದ ಯಶಸ್ಸಿನ ಹೆಬ್ಬಾಗಿಲು ಎಂಬ ವಿಷಯದ ಕುರಿತು ಈಚೆಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪಠ್ಯದ ಜತಗೆ ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳನ್ನು ಓದಬೇಕು. ಗ್ರಂಥಾಲಯದಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಅಂಕ ಗಳಿಕೆಯ ಜತಗೆ ಕೌಶಲ ವೃದ್ಧಿಸಿಕೊಳ್ಳಬೇಕು ಎಂದು ಐಎಎಸ್ ಸೇರಿದಂತೆ ನಾಗರಿಕ ಸೇವಾ ಪರೀಕ್ಷೆಗಳ ಕುರಿತು ಮಾರ್ಗದರ್ಶನ ನೀಡಿದರು. ಕ್ಯಾಲೆಂಡರ್ ಆಧಾರಿತ ಸಾಮರ್ಥ್ಯದ ಪ್ರಶ್ನೆಗಳನ್ನು ಚರ್ಚಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ವೃತ್ತಿಜೀವನದ ಮಾರ್ಗವಾಗಿ ಪರಿಗಣಿಸಿ ವಹಿಸಲಾಗಿದೆ.
ಉಪನ್ಯಾಸಕ ಸಿದ್ದು ಯಲವಾರ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರಿಮಾಣಾತ್ಮಕ ಸಾಮರ್ಥ್ಯ ಮತ್ತು ತಾರ್ಕಿಕ ಚಿಂತನೆಯ ಮಹತ್ವ ವಿವರಿಸಿದರು. ಸರಾಸರಿ, ಸಂಖ್ಯಾ ಸರಣಿಗಳು ಮತ್ತು ತಾರ್ಕಿಕ ವಿಚಾರಗಳಿಗೆ ಸಂಬಧಿಸಿದ ಸಮಸ್ಯೆಗಳನ್ನು ಪರಿಹರಿಸುವ ತಂತ್ರಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಡಾ ಪರಿವರ್ತಿಸಲು ಪ್ರೇರಣೆ, ಸೂಕ್ತ ಮಾರ್ಗದರ್ಶನ ಮತ್ತು ಆತ್ಮವಿಶ್ವಾಸ ಅತ್ಯಗತ್ಯ ಎಂದರು.
ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಸುಧಾ ಸರಿಕರ, ಕಾಲೇಜಿನ ಪರೀಕ್ಷಾ ನಿಯಂತ್ರಕಿ ಡಾ.ವಿಜಯಲಕ್ಷ್ಮಿ ಪಾಟೀಲ, ಡಾ. ವಿನಯಕುಮಾರ ಎಂ., ಐಸಿಯುಎಸಿ ಸಂಯೋಜಕಿ ಪ್ರೊ.ಮಿಥಿಲಾ ದಳವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net