

ಕಲಬುರಗಿ: ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿ ಜೀವರಾಶಿಗೆ ಹಕ್ಕುಗಳನ್ನು ಕಲ್ಪಿಸಿದ್ದು, ನಮ್ಮ ಭಾಗದ ಪಾಲು ನಾವು ಪಡೆಯಲು ಸಂಟಿತರಾಗಬೇಕು ಎಂದು ಶಾಸಕ ಡಾ.ಅವಿನಾಶ ಜಾಧವ್ ಹೇಳಿದರು. ರಾಜಾಪುರದ ಶ್ರೀ ಬೀರಲಿಂಗೇಶ್ವರ ವಸತಿನಿಲಯ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ 32ನೇ ವಿಶ್ವ ಆದಿವಾಸಿಗಳ ದಿನಾಚರಣೆಯಲ್ಲಿ ಮಾತನಾಡಿ, ಆದಿವಾಸಿ ಅಲೆಮಾರಿಗಳಾದ ಕಾಡು ಕುರುಬ, ಗೊಂಡ ಕುರುಬ, ಜೇನು ಕುರುಬ ರಾಜಗೊಂಡ ಇತ್ಯಾದಿ ಪದಗಳಿಂದ ಕರೆಯಲ್ಪಡುವ ಸಮುದಾಯಕ್ಕೆ ಸಂವಿಧಾನ ಬದ್ಧ ಹಕ್ಕು ದೊರೆಯಲು ಸಮಾಜ ಸಂಟನೆಗೆ ಆದ್ಯತೆ ನೀಡಬೇಕು. ನಿಮ್ಮ ಮನೆಯ ಮಗನಾಗಿ ಸಮಾಜದ ಒಳಿತಿಗೆ ನಿಮ್ಮೊಂದಿಗೆ ಶ್ರಮಿಸುವೆ. ಕಾನೂನಾತ್ಮಕವಾಗಿ ತಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವೆ ಎಂದು ತಿಳಿಸಿದರು. ಕೆಪಿಸಿಸಿ ಉಪಾಧ್ಯ ಸುಭಾಷ ರಾಠೋಡ್ ಮಾತನಾಡಿ, ಬಂಜಾರ ಸಮಾಜದಂತೆ ಆದಿವಾಸಿ ಬುಡಕಟ್ಟು ಸಮಾಜವಿದೆ. ಸಾಮಾಜಿಕ, ಶೈಣಿಕ, ರಾಜಕೀಯವಾಗಿ ಸಂವಿಧಾನ ಮೀಸಲಾತಿ ದೊರೆಯಬೇಕು ಎಂದು ಅಭಿಪ್ರಾಯಪಟ್ಟರು. ತಿಂಥಣಿಯ ಶ್ರೀ ಲಿಂಗ ಬೀರದೇವರು ಕಾರ್ಯಕ್ರಮ ಉದ್ಘಾಟಿಸಿದರು. ಮಹಾಂತೇಶ ಕೌಲಗಿ, ಗೌತಮ ವಿ.ಪಾಟೀಲ್, ಮಲ್ಲಿಕಾರ್ಜುನ ಭಂಕೂರ, ಗೋಪಾಲ ಎಂ.ಪಿ., ನಾಗೇಶ ಮುಚ್ಚಖೇಡ, ಸಿದ್ದಪ್ಪ ಎಸ್.ರುಸ್ತಂಪುರ, ಯಲಗೊಂಡ ಹಿರೇಕುರುಬ, ಗೋಪಾಲರಾವ ಕಟ್ಟಿಮನಿ, ಕುಪೇಂದ್ರ ಬರಗಲಿ, ಪರಮೇಶ್ವರ ಅಲಗೊಡು, ಪ್ರಕಾಶ ಕುರ್ನಳ್ಳಿ, ಶಿವಕುಮಾರ ಮುನಗಲ್, ತುಕಾರಾಮ, ರೇವಣಸಿದ್ದಪ್ಪ ಅಣಕಲ್, ಹಣಮಂತ ಕೆ. ಪೂಜಾರಿ, ಹನುಮಂತ ಬೆಂಕಿ, ಅರ್ಜುನ್ ಕಮಕನೂರ, ಅರ್ಜುನ ಹತ್ತಿ, ರವೀಂದ್ರ ಪೂಜಾರಿ ದಸ್ತಪುರ, ಡಾ.ಭೀಮಣ್ಣ ಮೇಟಿ, ವಿಜಯಲ್ಮ ಮುಗಳಿ, ಸುರೇಶ ವೈದ್ಯರಾಜ, ಸತೀಶ ಪೂಜಾರಿ, ಬಂಡಪ್ಪ ಅಣವಾರ, ಬಂಗಾರಪ್ಪ, ಸಾಗರ ಆನಂದಿ , ಮೌನೇಶ ಬೆಡಪಳ್ಳಿ, ಯಮನೂರು ವಕೀಲರು, ಭೀಮರಾವ ಯಾದಗಿರಿ, ಸೋಮಶೇಖರ ಕರಕಟ್ಟಿ ಇತರರಿದ್ದರು.