ನಗರಸಭೆ ಮಾಜಿ ಅಧ್ಯೆ ಕೆ.ಎಸ್.ರೂಪಾಅನಂತರಾಜು ಮಾತನಾಡಿ, ನನ್ನ ಐದು ವರ್ಷದ ಅವಧಿಯಲ್ಲಿ ನಗರದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಕಾಮಗಾರಿಗಳನ್ನು ನಮ್ಮ ವಾರ್ಡಿನಲ್ಲಿ ಮಾಡಿಸಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ಸುಮಾರು 30 ಲ ರೂ.ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ ಎಂದರು. ನಗರಸಭೆ ಮಾಜಿ ಅಧ್ಯ ಲಕ್ಷಿ$್ಮನಾರಾಯಣಪ್ಪ, ಮಾಜಿ ಸದಸ್ಯರಾದ ಕೆ.ಎಸ್.ಅನಂತರಾಜು, ರಾಜಕುಮಾರ್ , ಪೌರಾಯುಕ್ತ ಕೆ.ಜಿ.ರಮೇಶ್, ಸಂತೋಷ್, ಗಂಗಾಧರ್, ಸೀತಾರಾಮ್, ಪಾಪಣ್ಣ, ರಂಗನಾಥ್, ನರೇಂದ್ರ, ಗೋಪಾಲ್ ರೆಡ್ಡಿ, ಬ್ಯಾಂಕ್ ಸ್ವಾಮಿ, ಕೊರಿಯರ್ ರವಿ, ಗೌರಿ ರಮೇಶ್, ನಾಗಭೂಷಣ್, ರಾಮರೆಡ್ಡಿ, ಜಬಿವುಲ್ಲಾ ಹಾಗೂ ನಾಗರಿಕರು ಇದ್ದರು.