ಮಹಿಳೆಯ ಹಠಕ್ಕೆ ಕಂಡಕ್ಟರ್ ಮತ್ತು ಬಸ್ನಲ್ಲಿದ್ದ ಸಹ ಪ್ರಯಾಣಿಕರು ಬೇಸತ್ತಿದ್ದಾರೆ. ಟಿಕೆಟ್ ಪಡೆದು, ಪ್ರಯಾಣಿಸುವಂತೆ ಹೇಳಿದರೆ, ಪಡೆಯೋದಿಲ್ಲ ಎಂದು ಹಠಕ್ಕೆ ಬಿದ್ದು ಬಸ್ನಿಂದ ಕೆಳಗಿಳಿಯಲು ನಿರಾಕರಿಸಿದ್ದಾಳೆ. ಮಹಿಳೆಯ ದುರ್ವತನೆಗೆ ಸಹ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದು, ಬಸ್ನಿಂದ ಕೆಳಗಿಳಿಯುವಂತೆ ಒತ್ತಾಯಿಸಿದರೂ ಯಾವುದೇ ಪ್ರಯೋಜನೆ ಆಗಿಲ್ಲ. ಕಡೆಗೆ ಮಹಿಳೆಯ ಬದಲಿಗೆ ಸಹ ಪ್ರಯಾಣಿಕರೊಬ್ಬರು ಟಿಕೆಟ್ ಪಡೆದು ಜಟಾಪಟಿಗೆ ತೆರೆ ಎಳೆದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.