ಕಾರು ಚಾಲಕ ನಾಪತ್ತೆಯಾಗಿದ್ದು ಆತನ ಪತ್ತೆಗೆ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ. ಪೂಜಾಳನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗುತ್ತಿದ್ದ ವೇಳೆ, ಕಾರಿನ ಹಿಂಬದಿ ಸೀಟ್‌ನಲ್ಲಿದ್ದ ಆರೋಪಿಯೊಬ್ಬ ಯಾರೇ ಬಂದರೂ ಕಾರನ್ನು ನಿಲ್ಲಿಸಬೇಡ. ಅಡ್ಡ ಬಂದರೆ ಗುದ್ದಿಕೊಂಡು ಹೋಗುವಂತೆ ಸೂಚಿಸಿದ್ದ. ಹೀಗಾಗಿ ಕಾರು ಚಾಲಕ ಸದ್ದಾಂ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ್ದರ ಪರಿಣಾಮ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಅಪಹರಣಕಾರರು, ನ್ಯಾಯಾಧೀಶರ ವಾಹನ, ಬೈಕ್ ಸೇರಿ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ.