ಚಿರತೆ ದಾಳಿಗೆ ಮಹಿಳೆ ಬಲಿ

Woman killed in leopard attack
Woman killed in leopard attack
Published on
ತುರುವೇಕೆರೆ:: ತಾಲೂಕಿನ ಅರೇಮಲ್ಲೇನಹಳ್ಳಿಯ ಸಮೀಪದ ತೋಟವೊಂದರಲ್ಲಿ ಭಾನುವಾರ ಹಸು ಮೇಯಿಸುತ್ತಿದ್ದ ಮಹಿಳೆ ಮೇಲೆ ಚಿರತೆ ದಾಳಿ ಮಾಡಿ ಸಾಯಿಸಿದೆ.
ಅರೇಮಲ್ಲೇನಹಳ್ಳಿಯ ಸುಜಾತಾ(40) ಮೃತೆ. ಭಾನುವಾರ ಬೆಳಗ್ಗೆ ದನ ಹಾಗೂ ಮೇಕೆಗಳನ್ನು ಮೇಯಿಸಲು ತೆರಳಿದ್ದರು. ರಾತ್ರಿಯಾದರೂ ಮನೆಗೆ ಬಾರದ್ದರಿಂದ ಪತಿ ಬೈರೇಗೌಡ ಪತ್ನಿಯನ್ನು ಹುಡುಕಿಕೊಂಡು ಜಮೀನಿನತ್ತ ತೆರಳಿದಾಗ ಚಿರತೆ ಮಹಿಳೆಯ ಕುತ್ತಿಗೆಗೆ ಕಚ್ಚಿ ಸಾಯಿಸಿರುವ ಟನೆ ಬೆಳಕಿಗೆ ಬಂದಿದೆ. ಮಹಿಳೆಗೆ ಪತಿ, ಪುತ್ರ, ಪುತ್ರಿ ಇದ್ದಾರೆ.
ಸಾಂತ್ವನ ಹೇಳಿದ ಜಿಲ್ಲಾಧಿಕಾರಿ: ಜಿಲ್ಲಾಧಿಕಾರಿ ಶುಭಕಲ್ಯಾಣ್​ ಸೋಮವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಸುಜಾತಾ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಂತರ ಸರ್ಕಾರದ ಭದ್ರಂ ಯೋಜನೆಯಿಂದ 20 ಲಕ್ಷ ರೂ. ಪರಿಹಾರ ಸಿಗಲಿದ್ದು, ಸದ್ಯಕ್ಕೆ 5 ಲಕ್ಷ ರೂ. ಪರಿಹಾರದ ಚೆಕ್​ಅನ್ನು ಶಾಸಕ ಎಂ.ಟಿ.ಕೃಷ್ಣಪ್ಪ ಸಮ್ಮುಖದಲ್ಲಿ ಕುಟುಂಬಕ್ಕೆ ನೀಡಿದರು. ಮಹಿಳೆಯ ಪುತ್ರ ಧನುಷ್​ಗೌಡನ ವಿದ್ಯಾಭ್ಯಾಸಕ್ಕೆ 5 ವರ್ಷಗಳವರೆಗೆ ಪ್ರತಿ ತಿಂಗಳು 4 ಸಾವಿರ ರೂ. ಸಹಾಯ ಧನ ನೀಡಲಾಗುವುದು. ಜತೆಗೆ ಪುತ್ರಿ ತೇಜಸ್ವಿನಿಗೆ ಕಂಪ್ಯೂಟರ್​ ಆಪರೇಟರ್​ಕೆಲಸ ನೀಡಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ತಾಲೂಕಿನಲ್ಲಿ 35ಕ್ಕೂ ಹೆಚ್ಚು ಚಿರತೆಗಳು ಇವೆ ಎಂಬ ಮಾಹಿತಿ ಇದೆ. ಚಿರತೆ ದಾಳಿಗೆ ಮಹಿಳೆ ಬಲಿಯಾಗಿರುವುದು ನೋವಿನ ಸಂಗತಿ. ತಕ್ಷಣ ಅರಣ್ಯ ಇಲಾಖೆ ಎಚ್ಚೆತ್ತು ನರ ಭಕ್ಷಕ ಚಿರತೆ ಸೆರೆ ಹಿಡಿಯಬೇಕು ಎಂದರು.
ಟಾಸ್ಕ್​ ೋರ್ಸ್​ ರಚನೆ : ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ, ತಾಲೂಕಿನಲ್ಲಿ 30ಕ್ಕೂ ಹೆಚ್ಚು ಚಿರತೆಗಳು ಇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಿರತೆಗಳ ಹಾವಳಿ ತಡೆಗೆ ಹಾಗೂ ಚಿರತೆ ಹಿಡಿಯಲು ಅರಣ್ಯ, ಕಂದಾಯ, ತಾಪಂ, ಶಿಕ್ಷಣ ಇಲಾಖೆಯಿಂದ ಟಾಸ್ಕ್​ ೋರ್ಸ್​ ರಚಿಸಲಾಗಿದೆ.ಜನರಿಗೆ ಸಂಜೆ ಹಾಗೂ ರಾತ್ರಿ ಒಬ್ಬರೇ ಓಡಾಡದಂತೆ ಅರಿವು ಮೂಡಿಸುವುದು, ಚಿರತೆಗಳು ಹೆಚ್ಚಾಗಿರುವ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಚಿರತೆಗಳ ಸೆರೆಗೆ ಅರಿವಳಿಕೆ ತಜ್ಞರು, ಶೂಟರ್​ ವೈದ್ಯರು ಆಗಮಿಸಲಿದ್ದಾರೆ. ನಂತರ ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್​, ಉಪ ವಿಭಾಗಾಧಿಕಾರಿ ಸಪ್ತಶ್ರೀ, ಸಿಪಿಐ ಲೋಹಿತ್​, ತಹಸೀಲ್ದಾರ್​ ಕುಂ.ಇ.ಅಹಮದ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net