ಅರೆನಗ್ನ ಸ್ಥಿತಿ, ಕೊಳೆತ ರೀತಿಯಲ್ಲಿ ಯುವತಿಯ ದೇಹ ಪತ್ತೆ; ಸಾವಿಗೆ ಕಾರಣ ಮಾತ್ರ ನಿಗೂಢ..Bengaluru

Women Death Bengaluru
Women Death Bengaluru
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು ಆಡುಗೋಡಿಯಲ್ಲಿ ಯುವತಿ ಪೂಜಾ ಸಾವು ಕೇಸ್
  • ಪೂಜಾ ಸಾವಿಗೆ ನಿಖರ ಕಾರಣ ಇನ್ನೂ ನಿಗೂಢ
  • ಮೊಬೈಲ್ ನಲ್ಲಿ ಸಾವಿನ ರಹಸ್ಯ ಇದ್ಯಾ ಎಂದು ಪತ್ತೆಗೆ ಮುಂದಾಗಿರುವ ಪೊಲೀಸರು
ಬೆಂಗಳೂರು: ಆಡುಗೋಡಿಯ ಮುನಿಕೃಷ್ಣ ಲೇಔಟ್​ನಲ್ಲಿನ ಮನೆಯೊಂದರಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದೆ.
34 ವರ್ಷದ ಪೂಜಾ ದತ್ತಾ  ಜಾರ್ಖಂಡ್​ನ ಧನಬಾದ್ ಸಮೀಪದ ಹಿರಾಪುರ ನಿವಾಸಿ. ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಒನ್​ ಆರ್​ಕೆ ಮನೆ ಬಾಡಿಗೆ ಪಡೆದುಕೊಂಡು ವಾಸ ಮಾಡುತ್ತಿದ್ದರು. ಏಪ್ರಿಲ್​ 27ರ ಸಂಜೆ ಮನೆಯಿಂದ ದುರ್ನಾತ ಬರುತ್ತಿದ್ದ ಕಾರಣ, ಅಕ್ಕಪಕ್ಕದ ಮನೆಯವರು ಈ ಬಗ್ಗೆ ಓನರ್ಗೆ ಮಾಹಿತಿ ನೀಡಿದ್ದರು.

ಅರೆ ನಗ್ನ ಸ್ಥಿತಿ, ಕೊಳೆತ ರೀತಿಯಲ್ಲಿ ದೇಹ ಪತ್ತೆ

ಪೂಜಾಗೆ ಕರೆ ಮಾಡಿದರು ಸ್ವಿಚ್​ ಆಫ್​ ಮಾಡಲಾಗಿತ್ತು. ಡೋರ್​ ಲಾಕ್​ ಆಗಿದ್ದ ಕಾರಣ, ಬಾಗಿಲು ಒಡೆದು ಹೋದಾಗ ಆಕೆ, ಅರೆ ನಗ್ನ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಮನೆಯಲ್ಲಿನ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದವು. ಫ್ಯಾನ್ ಚಲನೆಯಲ್ಲಿತ್ತು ಎನ್ನುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಮಾಹಿತಿ ಪಡೆಯುತ್ತಲೇ ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೂಜಾ ಮನೆಗೆ ಆಗಾಗ ಯುವಕನೊಬ್ಬ ಬರುತ್ತಿದ್ದ ಎಂದು ಮಾಲೀಕರು ಹೇಳಿದ್ದಾರೆ. ಅವರು ಯಾರು ಎಲ್ಲಿನವರು, ಸದ್ಯ ಎಲ್ಲಿದ್ದಾನೆ ಎನ್ನುವುದರ ತನಿಖೆ ನಡೆಸಲಾಗುತ್ತದೆ ಎಂದು  ಆಡುಗೋಡಿ ಪೊಲೀಸರು ಹೇಳಿದ್ದಾರೆ. 
1 ಆರ್ ಕೆ ಬಾಡಿಗೆ ಮನೆ ಪಡೆದು ಪೂಜಾ ವಾಸವಿದ್ದಳು. ಸೋಮವಾರ ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಯುವತಿಯ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಆಕೆಯ ಫೋನ್ ಆನ್ ಆದ ಬಳಿಕ ಯಾರು ಬಂದು ಹೋಗ್ತಿದ್ರು ಅನ್ನೋ ಸತ್ಯ ಗೊತ್ತಾಗಲಿದೆ. ಸಿಡಿಆರ್ ಪರಿಶೀಲನೆ ನಡೆಸಲಾಗುತ್ತಿದ್ದು, ಮೊಬೈಲ್​ನಿಂದ ಮಾಹಿತಿ ಏನಾದರೂ ತಿಳಿಯುತ್ತದೆಯೇ ಎಂದು ಕಾದು ನೋಡಬೇಕು.

ಪೊಲೀಸರು ಏನಂದ್ರು?

ಪೂಜಾ  ಸಾವು ಸಂಭವಿಸಿ ಮೂರು ದಿನವಾಗಿರಬಹುದು. ಸದ್ಯ ಮೃತದೇಹ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ  ಪ್ರಾಥಮಿಕ ಮಾಹಿತಿಯಲ್ಲಿ ರೀತಿ ಪೂಜಾ  ಸಾವಿಗೆ ಪ್ರಾಥಮಿಕ ಮಾಹಿತಿ ಗೊತ್ತಾಗಲಿದೆ. ವರದಿಗಾಗಿ ಕಾಯುತ್ತಿದ್ದೇವೆ. ಯಾವುದೇ ಸೂಸೈಡ್ ನೋಟ್​ ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಮನೆ ಗೋಡೆ ಮೇಲೆಲ್ಲ ಚೀಟಿ, ಅಂಗಳದಲ್ಲಿ ಕಸ

ಪೂಜಾ ಮನೆಯ ಗೋಡೆ ಹಾಗೂ ಅಂಗಳ ಕಸದಿಂದ ಕೂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ಬರೆದ ಚೀಟಿಯ ಆಧಾರ ಆಕೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ. ಜೊತೆಗೆ ಗೋಡೆ ಮೇಲೆಲ್ಲ ಚಿತ್ರ ಬರೆದದಿಕೊಂಡು ಬೀ ಗುಡ್​ ಪೂಜಾ ದತ್ತಾ ಎಂದು ಬರೆದುಕೊಂಡಿದ್ದಾಳೆ. ಸುಮಾರು ಐದಾರು ಮೂಟೆಯಷ್ಟು ಪೇಪರ್​ ಸಿಕ್ಕಿದೆ ಎಂದು ಹೇಳಲಾಗಿದೆ. 

ಮನೆ ಮಾಲೀಕರು ಹೇಳಿದ್ದೇನು?

ಕಳೆದ ಮೂರು ವರ್ಷದಿಂದ ನಮ್ಮ ಬಾಡಿಗೆ ಮನೆಯಲ್ಲಿ ಆ ಹುಡುಗಿ ಇದ್ದಳು. ಆಕೆಗೆ ಹಿಂದಿ ಬರುತ್ತಿತ್ತು ಅಷ್ಟೇ. ಆಕೆಯನ್ನು ಕಾಣಲು ಆಗಾಗ ಒಬ್ಬ ಹುಡುಗ ಬರುತ್ತಿದ್ದ. ಅದನ್ನು ಬಿಟ್ಟರೆ ಬೇರೆಯಾರು ಬರ್ತಿರಲಿಲ್ಲ.  ಆ ಹುಡುಗನ ಜೊತೆ ಆಕೆ ಪ್ರತಿ ನಿತ್ಯ ಜಗಳವಾಡುತ್ತಿದ್ದಳು. ಜಗಳಕ್ಕೆ ಕಾರಣ ಏನು ಅಂತ ಮಾತ್ರ ಗೊತ್ತಾಗ್ತಿರಲಿಲ್ಲ ಎಂದು ಆಕೆ ಹೇಳಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net