ವಲಸಿಗರಿಗೆ ವಲಿಯುವುದೇ ಅಧ್ಯಕ್ಷ ಗಾದಿ?

ಕೆಂಭಾವಿ ಪುರಸಭೆ.
ಕೆಂಭಾವಿ ಪುರಸಭೆ.
Published on

ಪ್ರಮುಖ ಮುಖ್ಯಾಂಶಗಳು

  • ಕೆಂಭಾವಿ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ೨೨ರಂದು
  • ಈಗ ಎಲ್ಲರ ಚಿತ್ತ ಚುನಾವಣೆಯತ್ತ
ಕೆಂಭಾವಿ : ಆಡಳಿತ ಪಕ್ಷದ ಸದಸ್ಯರೇ ಅವಿಶ್ವಾಸ ನಿರ್ಣಯದ ಮೂಲಕ ಅಧ್ಯಕ್ಷರನ್ನು ಪದಚ್ಯುತಿಗೊಳಿಸಿ ಕೆಳಗಿಳಿಸಿದ್ದ ಪಟ್ಟಣದ ಪುರಸಭೆಯಲ್ಲಿ ಮತ್ತೆ ಅಧ್ಯಕ್ಷ ಗಾದಿಯ ಚಟುವಟಿಕೆಗಳು ಗರಿಗೆದರಿದ್ದು ಜು.೨೨ರಂದು ನಡೆಯುವ ಅಧ್ಯಕ್ಷರ ಚುನಾವಣೆಯತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ.
ಈಗಾಗಲೇ ಪುರಸಭೆಯಲ್ಲಿ ಅಧ್ಯಕ್ಷರ ಹುದ್ದೆ ಹಲವು ಮಜಲು ದಾಟಿದ್ದು, ಆಡಳಿತ ಪಕ್ಷದ ಸದಸ್ಯರಲ್ಲೇ ಅಸಮಾಧಾನ ಉಂಟಾಗಿ ಕೊನೆಗೆ ಈ ಮೊದಲು ಇದ್ದ ಪ್ರಿಯಾ ಪೊಲೀಸ್ ಪಾಟೀಲ್ ಅವರನ್ನು ಅವಿಶ್ವಾಸ ನಿರ್ಣಯ ಕೈಗೊಳ್ಳುವ ಮೂಲಕ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸುವಲ್ಲಿ ಆಡಳಿತ ಪಕ್ಷ ಸ-Àಲತೆ ಕಂಡಿತ್ತು.
ಈಗ ಆ ಎಲ್ಲ ಪ್ರಕ್ರಿಯೆ ಪೂರ್ಣಗೊಂಡು ಮತ್ತೆ ಹೊಸ ಸಂಚಲನ ಆರಂಭವಾಗಿದ್ದು, ಖಾಲಿ ಇರುವ ಅಧ್ಯಕ್ಷರ ಚುನಾವಣೆಗೆ ಜಿಲ್ಲಾ ಚುನಾವಣೆ ಆಯೋಗ ಜು.೨೨ರಂದು ದಿನಾಂಕ ನಿಗದಿಪಡಿಸಿ ಎಲ್ಲ ಸದಸ್ಯರಿಗೆ ಈಗಾಗಲೇ ನೋಟಿಸ್ ತಲುಪಿಸಲಾಗಿದೆ.
ಒಟ್ಟು ೨೩ ಸದಸ್ಯ ಬಲದ ಪುರಸಭೆಯಲ್ಲಿ ೧೯ ಜನ ಸದಸ್ಯರು ಕಾಂಗ್ರೆಸ್ ಪಕ್ಷದವರಾಗಿದ್ದು, ಮೊದಲನೆ ಅವಽಗೆ ಈಗಾಗಲೇ ಇಬ್ಬರು ಅಧ್ಯಕ್ಷರ ಗಾದಿಗೆ ಏರಿದ್ದು ಪಕ್ಷದ ಒಳ ಒಪ್ಪಂದದ ಪ್ರಕಾರ ಅಽಕಾರ ಹಂಚಿಕೆ ಮಾಡಲಾಗಿದೆ. ಪ್ರಸ್ತುತ ನಡೆಯುವ ಅಧ್ಯಕ್ಷರ ಚುನಾವಣೆ ಮೇಲೆ ಪಕ್ಷದ ಸದಸ್ಯರ ಕಣ್ಣು ನೆಟ್ಟಿದ್ದು ಈಗಾಗಲೇ ಹಲವು ಸುತ್ತಿನ ಒಳ ಸಭೆಗಳು, ಮುಖಂಡರ ಭೇಟಿ ಸೇರಿ ಹಲವು ಚಟುವಟಿಕೆಗಳು ಬಿರುಸುಗೊಂಡಿವೆ.
ವಲಸೆ ಬಂದವರಿಗೆ ಲಭಿಸುವುದೇ ಜಾಕ್‌ಪಾಟ್: ಹೌದು ಇಂಥದೊAದು ಮಾತು ಈಗ ಮುಂಚೂಣಿಯಲ್ಲಿದೆ. ಪುರಸಭೆ ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ೮ ರಲ್ಲಿ ಜಯಗಳಿಸಿ ನಂತರ ಇಬ್ಬರು ಪಕ್ಷೇತರ ಸದಸ್ಯರು ಸೇರ್ಪಡೆಗೊಂಡು ೧೦ಕ್ಕೆ ಸದಸ್ಯರ ಸಂಖ್ಯೆ ಏರಿತು. ಅಧ್ಯಕ್ಷ/ಉಪಾಧ್ಯಕ್ಷರ ಚುನಾವಣೆ ಘೋಷಣೆಯಾದ ಬಳಿಕ ಬದಲಾದ ರಾಜಕೀಯ ಚಟುವಟಿಕೆಯಲ್ಲಿ (ಕುದುರೆ ವ್ಯಾಪಾರದಲ್ಲಿ) ೯ ಜನ ಬಿಜೆಪಿ ಪಕ್ಷದ ಸದಸ್ಯರು ಅಽಕೃತವಾಗಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ನಂತರ ಸದಸ್ಯರ ಬಲ ೧೯ಕ್ಕೇರಿತು.
ಮೊದಲು ಸ್ವಪಕ್ಷೀಯ ಸದಸ್ಯರೇ ಅಧ್ಯಕ್ಷಗಿರಿ ಅನುಭವಿಸಿದರೆ ಎರಡನೆಯವರಾಗಿದ್ದ ಪ್ರಿಯಾ ಪೊಲೀಸ್ ಪಾಟೀಲ್ ಅವರು ಪಕ್ಷೇತರರಾಗಿ ಬಂದು ಅಧ್ಯಕ್ಷ ಗಾದಿಗೇರಿದರು. ಈಗ ಕುತೂಹಲ ಘಟ್ಟ ತಲುಪಿದ್ದು ಬಿಜೆಪಿ ಪಕ್ಷದಿಂದ ಬಂದ ಸದಸ್ಯರಿಗೆ (ಈಗ ಅಽಕೃತ ಕಾಂಗ್ರೆಸ್ ಸದಸ್ಯರು) ಉಳಿದ ಅವಽಗೆ ಅಧ್ಯಕ್ಷ ಪಟ್ಟ ಕಟ್ಟಲು ಪಕ್ಷದಲ್ಲಿ ಮಾತುಕತೆ ನಡೆದಿದೆ ಎನ್ನಲಾಗಿದ್ದು ಹಾಗೊಂದು ವೇಳೆ ಆಡಳಿತ ಪಕ್ಷದಲ್ಲಿ ಮಾತುಕತೆ -Àಲಪ್ರದವಾದರೆ ವಲಸೆ ಬಂದವರಿಗAತೂ ಜಾಕ್‌ಪಾಟ್ ಖಚಿತ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಇದೇ ತಿಂಗಳ ೨೨ರಂದು ನಡೆಯುವ ಅಧ್ಯಕ್ಷರ ಚುನಾವಣೆ ನಂತರ ಎಲ್ಲ ಬೆಳವಣಿಗೆಗಳಿಗೆ ತೆರೆ ಬೀಳಲಿದೆ ಎಂಬ ಮಾತು ಪಕ್ಷದ ವಲಯದಲ್ಲಿ ಜೋರಾಗಿ ಕೇಳಿಬರುತ್ತಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net