ಪ್ರತಿಭಟನೆ ಕುರಿತು ಮಂಗಳವಾರ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ. ಈ ಸಭೆಗೆ ಲೋಕೋಪಯೋಗಿ ಇಲಾಖೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ), ಕರ್ನಾಟಕ ಹೌಸಿಂಗ್ ಬೋರ್ಡ್ (ಕೆಎಚ್ಬಿ ) ಹಾಗೂ ಸ್ಲಂಬೋರ್ಡ್ ವ್ಯಾಪ್ತಿಯ ಗುತ್ತಿಗೆದಾರರು ಆಗಮಿಸಲಿದ್ದಾರೆ. ಕಾಮಗಾರಿ ನಿರ್ವಹಿಸಿದ್ದ 37 ಸಾವಿರ ಕೋಟಿ ರೂ. ಬಿಲ್ಗಳಿಗೆ ಬಾಕಿ ಹಣ ಬಿಡುಗಡೆ ಸೇರಿ ಇತರ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸಲಾಗುವುದು. ಪ್ರತಿಭಟನೆಯಲ್ಲಿ ಯಾವ್ಯಾವ ಇಲಾಖೆಯಲ್ಲಿ ಹೇಗೆಲ್ಲಾ ಭ್ರಷ್ಟ್ರಾಚಾರ ನಡೆಯಲಿದೆ ಎಂಬುದರ ಬಗ್ಗೆ ಸಾಕ್ಷಿ ಸಮೇತ ವಿವರವನ್ನು ಬಹಿರಂಗಪಡಿಸಲಾಗುವುದು ಎಂದು ಸಂಘ ಮೂಲಗಳು ತಿಳಿಸಿವೆ.