ಕಾರಿನ ಮೇಲೆ ಕಾಡಾನೆ ದಾಳಿ!

 ದೋಲನಮನೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಜಖಂಗೊಂಡಿರುವ ಕಾರು.
ದೋಲನಮನೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಜಖಂಗೊಂಡಿರುವ ಕಾರು.
Published on

ಪ್ರಮುಖ ಮುಖ್ಯಾಂಶಗಳು

  • ಅರೇಹಳ್ಳಿ ಹೋಬಳಿಯ ದೋಲನಮನೆ ಗ್ರಾಮ
  • ಒಂಟಿ ಕಾಡಾನೆ

ಬೇಲೂರು:

ತಾಲೂಕಿನ ಅರೇಹಳ್ಳಿ ಹೋಬಳಿಯ ದೋಲನಮನೆ ಗ್ರಾಮದಲ್ಲಿ ಒಂಟಿ ಕಾಡಾನೆಯೊಂದು ಕಾರಿನ ಮೇಲೆ ದಾಳಿ ಮಾಡಿದ್ದು, ಸಮಯ ಪ್ರಜ್ಞೆಯಿಂದ ಕಾರಿನಲ್ಲಿದ್ದವರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಎರಡು ದಿನಗಳ ಹಿಂದೆ ಕಾರ್ಯಕ್ರಮವೊಂದಕ್ಕೆ ಹೋಗಿ ಮಧ್ಯರಾತ್ರಿ ವಾಪಸ್ ಬಂದ ಮಹಮ್ಮದ್ ಜಾಹಿದ್ ಕುಟುಂಬ ಸದಸ್ಯರಿದ್ದ ಕಾರನ್ನು ಮನೆ ಸಮೀಪ ಪಾರ್ಕ್ ಮಾಡುವ ವೇಳೇ ಒಂಟಿ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಕಾರಿನ ಡಿಕ್ಕಿ ಹಾಗೂ ಗಾಜು ಹಾನಿಯಾಗಿದೆ. ಕಾರಿನ ಹಿಂಬದಿಯ ಆಸನದಲ್ಲಿ ಕುಳಿತಿದ್ದ ತಾಯಿ, ಅಕ್ಕ ಹಾಗೂ ಮಕ್ಕಳು ಭಯಭೀತರಾಗಿ ಜೋರಾಗಿ ಕೂಗಿಕೊಂಡಿದ್ದಾರೆ.
ದಾಳಿ ನಂತರ ಕೆಲ ಸಮಯ ಕಾರಿನ ಸಮೀಪವೇ ನಿಂತಿದ್ದ ಆನೆ ಮತ್ತೊಮ್ಮೆ ದಾಳಿಗೆ ಮುಂದಾದಾಗ ಕಾರಿನ ಪಾರ್ಕಿಂಗ್ ಲೈಟ್ ಹಾಕಿದ್ದಾರೆ. ಈ ವೇಳೆ ಕಾಡಾನೆ ಸ್ವಲ್ಪ ದೂರ ಸರಿದಿದೆ. ತಕ್ಷಣವೇ ಆನೆ ಕಾರ್ಯಪಡೆಗೆ ಮಾಹಿತಿ ನೀಡಿದ್ದರಿಂದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಯನ್ನು ಕಾಡಿನತ್ತ ಹಿಮ್ಮೆಟ್ಟಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net