ಪತ್ನಿಗೆ ಉಸಿರಾಟ ತೊಂದರೆ: ಆಕ್ಸಿಜನ್ ಸಿಲಿಂಡರ್ ಹಿಡಿದು 176 KM ಪ್ರಯಾಣಿಸಿ ದೇವರ ದರ್ಶನ ಪಡೆದ ದಂಪತಿ! Oxygen cylinder
ಆಕ್ಸಿಜನ್ ಸಿಲಿಂಡರ್ ಹಿಡಿದು ದೇವರ ದರ್ಶನ ಪಡೆದ ದಂಪತಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪತ್ನಿಗೆ ಉಸಿರಾಟ ತೊಂದರೆ ಇದ್ದರೂ ಆಕ್ಸಿಜನ್ ಸಿಲಿಂಡರ್ ಹಿಡಿದು ದೇವರ ದರ್ಶನ
176 ಕಿ.ಮೀ ಸಂಚರಿಸಿ ಚಿಂಚಲಿ ಮಾಯಕ್ಕ ದೇವಿ ದರ್ಶನ ಪಡೆದ ದಂಪತಿ
ದೇವಿ ದರ್ಶನ ಮಾಡಿದಾಗ ಮಾತ್ರ ನಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ದಂಪತಿ
ಬೆಳಗಾವಿ: ಪತ್ನಿಗೆ ಉಸಿರಾಟ ತೊಂದರೆ ಇದ್ದರೂ ಆಕ್ಸಿಜನ್ ಸಿಲಿಂಡರ್ ( Oxygen cylinder ) ಜೊತೆಗೆ 176 ಕಿ.ಮೀ ಸಂಚರಿಸಿ ಚಿಂಚಲಿ ಮಾಯಕ್ಕ ದೇವಿ ದರ್ಶನ ಪಡೆಯುವ ಮೂಲಕ ದಂಪತಿ ಎಲ್ಲರ ಗಮನ ಸೆಳೆದಿದ್ದಾರೆ.
ಮಹಾರಾಷ್ಟ್ರದ ಪಂಢರಪುರದ ದಂಪತಿ ಕಳೆದ 15 ವರ್ಷಗಳಿಂದ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕ ದೇವಿ ದರ್ಶನಕ್ಕೆ ಆಗಮಿಸುತ್ತಿದ್ದರು. ಆದರೆ ಈ ಬಾರಿ ಪತ್ನಿಗೆ ಶ್ವಾಸಕೋಶ ಸಮಸ್ಯೆ ಉಂಟಾಗಿದೆ.
ವೈದ್ಯರ ಸೂಚನೆ ಮೇರೆಗೆ ಆಕ್ಸಿಜನ್ ಜೊತೆಗೆ ಅನಾರೋಗ್ಯ ಪೀಡಿತ ಪತ್ನಿಗೆ ದೇವಿ ದರ್ಶನ ಮಾಡಿಸಿದ್ದಾರೆ. ಎಷ್ಟೇ ತೊಂದರೆ ಇದ್ದರೂ ದೇವಿ ದರ್ಶನ ಮಾಡಿದಾಗ ಮಾತ್ರ ನಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಈ ಕಾರಣಕ್ಕೆ ಆಗಮಿಸಿದ್ದೆನೆ ಎಂದು ದಂಪತಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸದ್ಯ ದಂಪತಿ, ಆಕ್ಸಿಜನ್ ಸಿಲಿಂಡರ್ ಜತೆಗೆ ದೇವರ ದರ್ಶನ ಪಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಣ್ಣ ಸಣ್ಣ ವಿಚಾರಕ್ಕೂ ಕಿತ್ತಾಡಿಕೊಂಡು ದೂರವಾಗುವ ದಂಪತಿಗಳಿರುವ ಈ ಕಾಲದಲ್ಲಿ ಈ ದಂಪತಿ ನಿಜಕ್ಕೂ ಸ್ಫೂರ್ತಿಯಾಗಿದ್ದಾರೆ ಎಂಬ ಕಾಮೆಂಟ್ಗಳು ಬರುತ್ತಿವೆ.