ದತ್ತೂರಿಯಲ್ಲಿ ಅಪಾಯಕಾರಿ ಟ್ರಾಪೇನ್ ಆಲ್ಕಲಾಯ್ಡ್‌ಗಳು (Tropane Alkaloids), ಸ್ಕೊಪೊಲಮೈನ್ (Scopolamine), ಹಯೋಸೈಮೈನ್ (Hyoscyamine) ಮತ್ತು ಅಟ್ರೊಪಿನ್ (Atropine) ನಂತಹ ವಿಷಕಾರಿ ರಾಸಾಯನಿಕಗಳು ಅಡಗಿವೆ. ಇವುಗಳನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಿದರೂ ಮಾನವನ ನರಮಂಡಲದ (Central Nervous System) ಮೇಲೆ ತೀವ್ರ ಪರಿಣಾಮ ಬೀರುತ್ತದೆ. ದತ್ತೂರಿಯ ಬೀಜ ಅಥವಾ ಹಣ್ಣನ್ನು ಯಾವುದೇ ರೂಪದಲ್ಲಿ ಸೇವಿಸಿದರೂ ಪಾರ್ಶ್ವವಾಯು (Paralysis), ಕೋಮಾ ಅಥವಾ ಶ್ವಾಸಕೋಶದ ವೈಫಲ್ಯ ಉಂಟಾಗಿ ಪ್ರಾಣವೇ ಹೋಗುವ ಭಾರಿ ಅಪಾಯವಿದೆ ಎನ್ನಲಾಗಿದೆ. ಈ ಕಾರಣಗಳಿಂದ, ಇದನ್ನು ಸೇವನೆಗೆ ಯೋಗ್ಯವಲ್ಲ ಎಂದು ಗುರುತಿಸಲಾಗಿದ್ದು, ಆಹಾರ ವಸ್ತುವಾಗಿ ಮಾರಾಟ ಮಾಡುವುದನ್ನು ಆಹಾರ ಮತ್ತು ಆರೋಗ್ಯ ಇಲಾಖೆಗಳು ಕಟ್ಟುನಿಟ್ಟಾಗಿ ನಿಷೇಧಿಸಿದೆ,(ಏಜೆನ್ಸೀಸ್).