ಶಿಷ್ಟಾಚಾರ ಪಾಲನೆಗಾಗಿ ಫಲಿತಾಂಶ ವಿಚಾರವಾಗಿ ಪರೀಕ್ಷಾ ಮಂಡಳಿಯು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಆಯೋಗವು ಇಲ್ಲಿಯವರೆಗೂ ಪ್ರತಿಕ್ರಿಯೆ ನೀಡಿಲ್ಲ. ಮಂಗಳವಾರ ಸಂಜೆ ವೇಳೆಗಾದರೂ ಪ್ರತಿಕ್ರಿಯೆ ನೀಡಬಹುದು ಎಂಬ ನಿರೀಕ್ಷೆ ಇದೆ. ಹೀಗಾಗಿ, ಮಂಗಳವಾರ ಅಧಿಕೃತವಾಗಿ ಫಲಿತಾಂಶ ಪ್ರಕಟಣೆ ಕುರಿತು ಸ್ಪಷ್ಟತೆ ಸಿಗಲಿದೆ.