

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಇತಿಹಾಸ ಮರೆತವರುವರ್ತಮಾನ ತಿಳಿದುಕೊಳ್ಳಲುಸಾಧ್ಯವಿಲ್ಲ.ಇತಿಹಾಸ ಗೌರವಿಸದವರುಇತಿಹಾಸ ಸೃಷ್ಟಿಸಲಾರರು.ಆದ್ದರಿಂದಇತಿಹಾಸದ ಬೆಳಕಿನಲ್ಲಿ ಭವಿಷ್ಯಹುಡುಕಬೇಕು ಎಂದು ಸಿದ್ದಗಂಗಾಮಠದ ಕಿರಿಯ ಶ್ರೀ ಶಿವಸಿದ್ದೇಶ್ವರಸ್ವಾಮೀಜಿ ಅಭಿಪ್ರಾಯಿಸಿದ್ದಾರೆ.
ವಿಜಯನಗರದಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿಶ್ರೀ ಬಸವೇಶ್ವರ ಸೇವಾ ಸಮಿತಿ,ಅಕ್ಕನ ಬಳಗ,ಅಖಿಲ ಭಾರತವೀರಶೈವ ಲಿಂಗಾಯತ ಮಹಾಸಭೆ(ಅಭಾವೀಮ)ರಾಜಾಜಿನಗರಘಟಕದ ಸಂಯುಕ್ತ ಆಶ್ರಯದಲ್ಲಿಹಮ್ಮಿಕೊಂಡಿದ್ದ ಅಕ್ಕಮಹಾದೇವಿ,ಬಸವ ಜಯಂತಿ ಹಾಗೂವಿವಿಧ ಪ್ರಶಸ್ತಿ ಪ್ರದಾನ ಸಮಾರಂಭದಸಾನ್ನಿಧ್ಯ ವಹಿಸಿ ಆಶೀರ್ವಚನನೀಡಿದರು.
ಇಂದಿನಆಧುನಿಕ ಶಿಕ್ಷಣ ಕ್ರಮದಲ್ಲಿಮೌಲ್ಯಾಧಾರಿತ ಮತ್ತು ಕೌಶಲಾಧಾರಿತಶಿಕ್ಷಣ ಕ್ರಮಗಳನ್ನು ಗುರುತಿಸಲಾಗುತ್ತದೆ.ವಿದ್ಯಾರ್ಥಿಗಳಜೀವನ ಪರಿಪೂರ್ಣವಾಗಲು ಈ ಎರಡುಕೂಡಾ ಅವಶ್ಯಕ.ಅಂತಹ ಮೌಲ್ಯವನ್ನುಅಳವಡಿಸಿಕೊಳ್ಳಲು ಮಹಾತ್ಮರಸ್ಮರಣೆ, ಜಯಂತಿಗಳಅವಶ್ಯಕತೆ ಇದೆ.ಆ ನಿಟ್ಟಿನಲ್ಲಿಅಕ್ಕಮಹಾದೇವಿ,ಬಸವಣ್ಣನವರಜಯಂತಿ ಕಾರ್ಯಕ್ರಮ ಅರ್ಥಪೂರ್ಣವಾಗಿದೆ.‘ಮಹಾತ್ಮರನ್ನುನೆನೆಯುವುದೇ ಘನಮುಕ್ತಿ ನೋಡಾ’ಎಂಬ ಶರಣರ ವಾಣಿಯಂತೆ,ಕಾಲದ ಮರೆಯಲ್ಲಿಹೆಜ್ಜೆಗುರುತುಗಳನ್ನು ಬಿಟ್ಟುಹೋಗಿರುವ ಶರಣರನ್ನು ಈ ರೂಪದಲ್ಲಿನೆನೆದು ಅವರ ಮೌಲ್ಯಗಳನ್ನುಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಇಂತಹ ಕಾರ್ಯಕ್ರಮಗಳನಿಜವಾದ ಯಶಸ್ಸು ಕೇವಲ ಬಸವಣ್ಣನವರಮೂರ್ತಿ,ಭಾವಚಿತ್ರಕ್ಕೆನಮನ ಸಲ್ಲಿಸುವುದರಿಂದ ಆಗುವುದಿಲ್ಲ.ಬದಲಾಗಿ ಅವರತತ್ವ ಚಿಂತನೆಗಳನ್ನು ಅನುಷ್ಠಾನಕ್ಕೆತರುವುದರಿಂದ ಸಾಧ್ಯವಾಗಲಿದೆಎಂದು ಸ್ವಾಮೀಜಿ ವಿವರಿಸಿದರು.
ಕಾರ್ಯಕ್ರಮದಲ್ಲಿಅಧ್ಯಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆತೇಜಸ್ವಿನಿ ಅನಂತಕುಮಾರ್ ಅವರಿಗೆಅಕ್ಕಮಹಾದೇವಿ ಪ್ರಶಸ್ತಿ,ಬಿಡಿಎ ಕಾರ್ಯದರ್ಶಿಶಿವಕುಮಾರ್ ಅವರಿಗೆ ಕಾಯಕರತ್ನಪ್ರಶಸ್ತಿ ನೀಡಿ ಗೌರವಿಸಲಾಯಿತು.ಬೇಲಿ ಮಠದಶ್ರೀಶಿವರುದ್ರ ಸ್ವಾಮೀಜಿಸಾನ್ನಿಧ್ಯ ವಹಿಸಿದ್ದರು.ಮಾಜಿ ಮೇಯರ್ಗಂಗಾಂಬಿಕೆ ಮಲ್ಲಿಕಾರ್ಜುನ್,ಅಭಾವೀಮ ಉಪಾಧ್ಯಕ್ಷಬಿ.ಎಸ್.ಸಚ್ಚಿದಾನಂದಮೂರ್ತಿ, ಹಿರಿಯನ್ಯಾಯವಾದಿ ಚಂದ್ರಮೌಳಿ,ಅಭಾವೀಮ ಯುವಘಟಕದ ಅಧ್ಯಕ್ಷ ಮನೋಹರ ಅಬ್ಬಿಗೆರೆ,ಕನ್ನಡಪರ ಹೋರಾಟಗಾರಪಾಲನೇತ್ರ,ಬಸವೇಶ್ವರ ಸೇವಾಸಮಿತಿ ಅಧ್ಯಕ್ಷ ವಿಶ್ವನಾಥಯ್ಯ,ಕಾಸಿಯಾ ಅಧ್ಯಕ್ಷಲಿಂಗಣ್ಣ ಬಿರಾದರ್ ಮತ್ತಿತರರುಕಾಯಕ್ರಮದಲ್ಲಿ ಪಾಲ್ಗೊಂಡಿದ್ದರು.
21ನೇ ಶತಮಾನದಲ್ಲೂ ಮಹಿಳೆಯರಿಗೆ ಸರಿಯಾದ ಸಮಾನತೆ ದೊರೆಯುತ್ತಿಲ್ಲ. ಆದರೆ 12ನೇ ಶತಮಾನದಲ್ಲಿಯೇ ಅಕ್ಕಮಹಾದೇವಿ ಅನುಭವ ಮಂಟಪದಲ್ಲಿ ಕುಳಿತು ಆತ್ಮಾನುಸಂಧಾನದ ಜೊತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಪಡೆದುಕೊಂಡಿದ್ದರು. ಅಧಮ್ಯ ಚೇತನ ಸಂಸ್ಥೆಗೆ ನಾಡಿನ ಮಠ-ಮಂದಿರಗಳ ಸೇವೆಯೇ ಪ್ರೇರಣೆ.
ವಚನಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ; ಒಳಿತು ಮಾಡಲಾಗದಿದ್ದರೂ ಕೆಡಕನ್ನಂತು ಯಾರೂ ಮಾಡಲು ಸಾಧ್ಯವಿಲ್ಲ. ವಚನಗಳು ಇತರೆ ಭಾಷೆಗಳಿಗೆ ಅನುವಾದಗೊಂಡು ಇತರರು ಅಧ್ಯಯನ ಮಾಡುತ್ತಿರುವುದೇ ವಚನ ಸಾಹಿತ್ಯದ ಸಾರವನ್ನು ತಿಳಿಸುತ್ತಿದೆ.