1989ರಲ್ಲಿ ನಿರ್ಮಾಣವಾಗಿರುವ ಈ ನೀರಿನ ಟ್ಯಾಂಕ್ 50,000 ಲೀಟರ್ ಜಲ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಕಾಲ ಕಾಲಕ್ಕೆ ತಕ್ಕಂತೆ ಸುಣ್ಣ, ಬಣ್ಣ ಮತ್ತು ಸ್ವಚ್ಛತಾ ಕಾರ್ಯಗಳನ್ನು ಕಂಡೇ ಇಲ್ಲ. ಕಟ್ಟಿದಾಗ ಹೇಗಿತ್ತೋ ಹಾಗೆಯೇ ಇಂದಿಗೂ ಇದೆ. ಹಾಗಾಗಿ ಟ್ಯಾಂಕ್‌ನ ಸಿಮೆಂಟ್ ಚಕ್ಕೆಗಳು ಹಲವು ವರ್ಷಗಳಿಂದ ಉದುರಿ ಬೀಳುತ್ತಲೇ ಇದೆ. ಇನ್ನು ಟ್ಯಾಂಕ್ ಬಿರುಕು ಬಿಟ್ಟಿದ್ದು, ಕಂಬಿಗಳು ತುಕ್ಕು ಹಿಡಿದು ಹಾಳಾಗಿವೆ. ಆರು ಕಂಬಗಳು ಟ್ಯಾಂಕ್‌ಗೆ ಆಧಾರವಾಗಿದ್ದು, ಅವೂ ಸಹ ಶಿಥಿಲಗೊಂಡಿವೆ. ಇನ್ನೊಂದಿಷ್ಟು ಸಮಯ ಸಾಗಿದರೆ ಟ್ಯಾಂಕ್ ಸಂಪೂರ್ಣ ಕುಸಿದು ಬೀಳುವ ಎಲ್ಲ ಸಾಧ್ಯ ದಟ್ಟವಾಗಿದೆೆ.