ಶನಿವಾರ ಒಂದೇ ದಿನದಲ್ಲಿ ಜಲಾಶಯದ ನೀರಿನ ಮಟ್ಟ ಶೇ.35ರಷ್ಟು ಹೆಚ್ಚಳ ಕಂಡಿದ್ದು, ಬ್ಯಾರೇಜ್ ಮತ್ತೆ ಮೈದುಂಬಿ ನಿಂತಿದೆ. ಬ್ಯಾರೇಜ್‌ಗೆ ಪ್ರಸ್ತುತ ಸುಮಾರು 1.38 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇದರಿಂದ 22 ಕ್ರಸ್ಟ್ ಗೇಟ್‌ಗಳ ಪೈಕಿ 21 ಗೇಟ್‌ಗಳ ಮೂಲಕ ನೀರು ಹೊರ ಹರಿಯುತ್ತಿದೆ. ಕಳೆದ ವಾರದವರೆಗೆ ಬಹುತೇಕ ಒಣಗಿದ್ದ ಬ್ಯಾರೇಜ್ ಈಗ ತುಂಬಿ ಹರಿಯುತ್ತಿರುವ ದೃಶ್ಯ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.