‘ಭಾರತೀಯ ವಯಸ್ಕರಲ್ಲಿ ಅಶ್ಲೀಲ ವಿಡಿಯೊ ವೀಕ್ಷಣೆ: ಮಾನಸಿಕ ಸಂಬಂಧಗಳು ಮತ್ತು ಮುನ್ಸೂಚಕಗಳು’ ಶೀರ್ಷಿಕೆಯಡಿ ಸಂಶೋಧನಾ ಪ್ರಬಂಧವನ್ನು ಎಂ. ರಾಜಶೇಖರ್, ಮನೋಜ್ ಕುಮಾರ್ ಶರ್ಮಾ ಮತ್ತು ಸೆಂಥಿಲ್ ಅಮುಧನ್ ಸಿದ್ಧಪಡಿಸಿದ್ದಾರೆ. ಇದು ಜಿಯೋಸೈಕಿಯಾಟ್ರಿ ಜರ್ನಲ್‌ನಲ್ಲಿ ಪ್ರಕಟವಾಗಿದೆ. ನಾನಾ ಕಾರಣಗಳಿಂದ ವಯಸ್ಕರಲ್ಲಿ ಖಿನ್ನತೆ, ಆತಂಕ, ಒತ್ತಡಗಳು ಉಂಟಾಗುತ್ತಿದ್ದು, ಅವು ಅಶ್ಲೀಲ ವೀಡಿಯೊ ವೀಕ್ಷಣೆಗೆ ಅವರನ್ನು ಪ್ರಚೋದಿಸುತ್ತಿದೆ. ಅಲ್ಲದೆ ಇದಕ್ಕೆ ಪೂರಕವಾದ ಅಶ್ಲೀಲ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗುತ್ತಿದ್ದು, ಅದಕ್ಕೆ ವಯಸ್ಕರು ಪ್ರೇರೇಪಿತರಾಗುತ್ತಿದ್ದಾರೆ ಎನ್ನುತ್ತಾರೆ ಸಂಶೋಧಕರು.