ವೇರ್​ಹೌಸ್​ ಗೋದಾಮು ಬೆಂಕಿಗಾಹುತಿ / NELAMANGAL

ಬೆಂಗಳೂರು ಉತ್ತರ ತಾಲೂಕಿನ ಅಡಕಿಮಾರನಹಳ್ಳಿಯಲ್ಲಿ ಸಂಭವಿಸಿದ ಬೆಂಕಿ ಅವಡ ವೇಳೆ ಬೆಂಕಿ ನಂದಿಸಲು ಯತ್ನಿಸುತ್ತಿರುವ ಅಗ್ನಿ ಶಾಮ ಸಿಬ್ಬಂದಿ.
ಬೆಂಗಳೂರು ಉತ್ತರ ತಾಲೂಕಿನ ಅಡಕಿಮಾರನಹಳ್ಳಿಯಲ್ಲಿ ಸಂಭವಿಸಿದ ಬೆಂಕಿ ಅವಡ ವೇಳೆ ಬೆಂಕಿ ನಂದಿಸಲು ಯತ್ನಿಸುತ್ತಿರುವ ಅಗ್ನಿ ಶಾಮ ಸಿಬ್ಬಂದಿ.
Published on
ನೆಲಮಂಗಲ : ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯಲ್ಲಿ ಬುಧವಾರ ರಾತ್ರಿ 10 ಗಂಟೆಗೆ ಸುಮಾರಿಗೆ ಖಾಸಗಿ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು, ಸಂಪೂರ್ಣ ಭಸ್ಮವಾಗಿದೆ.
ಬೆಂಗಳೂರಿನ ಬಸವೇಶ್ವರ ನಿವಾಸಿ ಪದ್ಮರಾಜ್​ ಎಂಬುವರ ಗೋದಾಮನ್ನು 15 ವರ್ಷಗಳಿಂದ ಖಾಸಗಿ ಕಂಪನಿ ಬಾಡಿಗೆ ಪಡೆದು ಅಡುಗೆ ಎಣ್ಣೆ ಸೇರಿ ವಿವಿಧ ಆಹಾರ ಪದಾರ್ಥಗಳನ್ನು ಶೇಖರಿಸಿಟ್ಟಿತ್ತು. ರಾತ್ರಿ 10ರ ಸುಮಾರಿಗೆ ವೇರ್​ಹೌಸ್​ನಲ್ಲಿ ಬ್ಯಾಟರಿಯಿಂದ ಶಾರ್ಟ್​ ಸಕ್ಯೂರ್ಟ್​ ಆಗಿ ಬೆಂಕಿ ಕಾಣಿಸಿಕೊಂಡಿದ್ದು, ಗೋದಾಮಿನ ವಿವಿಧ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಹೊರಗೆ ಓಡಿ ಬಂದಿದ್ದಾರೆ. ನೋಡ ನೋಡುತ್ತಿದ್ದಂತೆ ಬೆಂಕಿ ಆವರಿಸಿಕೊಂಡಿದೆ. ಅವಡದಲ್ಲಿ ಕೋಟ್ಯಂತರ ಮೌಲ್ಯದ ಆಹಾರ ಪದಾರ್ಥಗಳು ಆಹುತಿಯಾಗಿವೆ ಎಂದು ಅಂದಾಜಿಸಲಾಗಿದೆ.
ನೆಲಮಂಗಲ, ಪೀಣ್ಯ, ಸುಂಕದಕಟ್ಟೆ ಹಾಗೂ ನಾಗರಭಾವಿ ಅಗ್ನಿಶಾಮಕ ಠಾಣೆಗಳ ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಆದರೆ, ಬೆಂಕಿಯ ಜ್ವಾಲೆಗೆ ಇಡೀ ಗೋದಾಮು ಸಂಪೂರ್ಣ ಸುಟ್ಟು ಕರಕಲಾಗಿದೆ.
ಕತ್ತಲೆಯಲ್ಲ್ಲಿ ಕವಿದ ಹೊಗೆಯ ಕಾಮೋರ್ಡ: ಬೆಂಕಿಯ ಕೆನ್ನಾಲಿಗೆ ಸಂಪೂರ್ಣವಾಗಿ ಗೋದಾಮು ಆವರಿಸುತ್ತಿದ್ದಂತೆ ಕತ್ತಲೆಯಲ್ಲೂ ಆಕಾಶದೆತ್ತರಕ್ಕೆ ದಟ್ಟವಾದ ಬೆಂಕಿಯ ಹೊಗೆ ವ್ಯಾಪಿಸಿದ್ದರಿಂದ ಕಾಮೋರ್ಡ ಕವಿದಂತಾಗಿತ್ತು. ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲೇ ಅವಚಡ ಸಂಭವಿಸಿದ್ದು, ಜ್ವಾಲೆ ಇಡೀ ಗೋದಾಮು ಆವರಿಸಿದ್ದರಿಂದ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನ ಸವಾರರಿಗೂ ಬೆಂಕಿಯ ಬಿಸಿ ತಟ್ಟುವಂತಹ ಅನುಭವವಾಯಿತು.
ವಾಹನ ದಟ್ಟಣೆ : ಅವಡದಿಂದಾಗಿ ಕೆಲ ಕಾಲ ರಾಷ್ಟ್ರೀಯ ಹೆದ್ದಾರಿ -48ರಲ್ಲಿ ಸಂಚಾರ ಸಿಕ್ಕು ಉಂಟಾಗಿತ್ತು. ಪ್ರಯಾಣಿಕರು ಮತ್ತು ಸಾರ್ವಜನಿಕರು ಸ್ಥಳದಲ್ಲಿ ನಿಂತು ಮೊಬೈಲ್​ನಲ್ಲಿ ವಿಡಿಯೋ ಮಾಡುತ್ತಿರುವುದರಿಂದ ವಾಹನದಟ್ಟಣೆಗೆ ಎಡೆ ಮಾಡಿಕೊಟ್ಟಿತ್ತು. ಮಾದನಾಯಕನಹಳ್ಳಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೇರ್​ ಹೌಸ್​ ಹೊತ್ತು ಉರಿಯುತ್ತಿರೋ ದೃಶ್ಯ ಕಂಡು ಭಯವಾಗಿತ್ತು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಸಿಬ್ಬಂದಿ, ಬೆಂಕಿ ಅವಘಡದಿಂದ ಪಾರಾಗಿದ್ದು, ಬಹುದೊಡ್ಡ ದುರಂತವೇ ತಪ್ಪಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net