ಕಷ್ಟದ ಸಮಯದಲ್ಲೂ ಸತ್ಯದ ಮಾರ್ಗದಲ್ಲಿ ನಡೆಯಿರಿ truth

ಕಷ್ಟದ ಸಮಯದಲ್ಲೂ ಸತ್ಯದ ಮಾರ್ಗದಲ್ಲಿ ನಡೆಯಿರಿ truth
ಕಷ್ಟದ ಸಮಯದಲ್ಲೂ ಸತ್ಯದ ಮಾರ್ಗದಲ್ಲಿ ನಡೆಯಿರಿ truth
Published on
ಬೂದಿಕೋಟೆ: ಕಷ್ಟದ ಸಮಯದಲ್ಲಿ ಸತ್ಯದ ಮಾರ್ಗದಲ್ಲಿ ನಡೆದು ಮುಂಬರುವ ದಿನಗಳು ಸುಗಮಕ್ಕೆ ಆದಿ ಮಾಡಿಕೊಡಲಿದೆ ಹಾಗಾಗಿ ಪ್ರತಿಯೊಬ್ಬರೂ ಸತ್ಯ ಮಾರ್ಗದಲ್ಲಿ ನಡೆಯುವಂತಾಗಬೇಕು ಎಂದು ಎಂಎಲ್ಸಿ ಜಿ.ಟಿ ಶ್ರೀನಿವಾಸ್​ ಹೇಳಿದರು.truth 
ಹೋಬಳಿಯ ನಲ್ಲಗುಟ್ಟಹಳ್ಳಿ ಬಳಿ ಇರುವ ಜೀವನ್​ ಪ್ರಗತಿ ಗೋಲ್ಡನ್​ ಇಂಟರ್​ನ್ಯಾಷನಲ್​ ಶಾಲೆಯಿಂದ ಹಮ್ಮಿಕೊಂಡಿದ್ದ ರಾಜ ಸತ್ಯವತ ಶನಿಪ್ರಭಾವ ಎಂಬ ಪೌರಾಣಿಕ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿ, ಶನಿ ಪ್ರಭಾವ ಎಂಬ ಪೌರಾಣಿಕ ನಾಟಕದಲ್ಲಿ ಸಾಕಷ್ಟು ವಿಚಾರಗಳು ಅಡಗಿವೆ ಇದನ್ನು ಪ್ರತಿಯೊಬ್ಬರೂ ವೀಕ್ಷಿಸಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ನಿಷ್ಠೆ, ಪ್ರಾಮಾಣಿಕತೆಗೆ ಯಾವಾಗಲೂ ಜಯ ಸಿಗುತ್ತದೆ ಎಷ್ಟೇ ಕಷ್ಟಗಳು ಬಂದರೂ ಕಷ್ಟಗಳ ನಂತರ ಮನುಷ್ಯನ ಜೀವನದ ಆದಿ ಸುಗಮವಾಗಿರಲಿದೆ ಎಂದರು.
ಸೋರೆಗೌಡನಕೋಟೆ ಸಮಾಜ ಸೇವಕ ಶ್ರೀನಿವಾಸ್​, ಅಮರೇಶ್​, ಗೋವಿಂದಪ್ಪ, ಕೇತಗಾನಹಳ್ಳಿ ಬೆಮೆಲ್​ ಚಂದ್ರಣ್ಣ, ಹಾಗೂ ರಂಗಭೂಮಿ ಕಲಾವಿದರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net