ಸಂಗೀತಕ್ಕೆ ವಿರೂಪಾಕ್ಷಯ್ಯ ಸ್ವಾಮೀಜಿ ಕೊಡುಗೆ ಅಪಾರ

ಹುಲಸೂರು ತಾಲೂಕಿನ ಗೋರ್ಟಾದ ಸಂಗೀತ ರುದ್ರೇಶ್ವರ ದೇವಾಲಯ ಪರಿಸರದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಗೀತ ರುದ್ರೇಶ್ವರ ಜಾತ್ರಾ ಮಹೋತ್ಸವ, ಸಂಗೀತ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲಿಂ. ವಿರೂಪಾ  ರಾಷ್ಟ್ರೀಯ ಪ್ರಶಸ್ತಿಯನ್ನು ರಾಜೇಂದ್ರಸಿಂಗ್​ ಪವಾರ್​ ಮತ್ತು ರೇವಪ್ಪ ಪಾಂಚಾಳ ಅವರಿಗೆ ರಾಜ್ಯಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಪೂಜ್ಯ ಕರುಣಾದೇವಿ ಮಾತಾ, ಡಾ.ರಾಜಶೇಖರ ಸ್ವಾಮೀಜಿ, ಡಾ.ಸಿದ್ದರಾಮಯ್ಯ ಸ್ವಾಮಿ, ಸಂಗಮೇಶ ಬಿರಾದಾರ, ಶ್ರೀ ಕರಬಸಪ್ಪ ಅಕ್ಕಣ್ಣ  ಇತರರಿದ್ದರು
ಹುಲಸೂರು ತಾಲೂಕಿನ ಗೋರ್ಟಾದ ಸಂಗೀತ ರುದ್ರೇಶ್ವರ ದೇವಾಲಯ ಪರಿಸರದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಗೀತ ರುದ್ರೇಶ್ವರ ಜಾತ್ರಾ ಮಹೋತ್ಸವ, ಸಂಗೀತ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲಿಂ. ವಿರೂಪಾ ರಾಷ್ಟ್ರೀಯ ಪ್ರಶಸ್ತಿಯನ್ನು ರಾಜೇಂದ್ರಸಿಂಗ್​ ಪವಾರ್​ ಮತ್ತು ರೇವಪ್ಪ ಪಾಂಚಾಳ ಅವರಿಗೆ ರಾಜ್ಯಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಪೂಜ್ಯ ಕರುಣಾದೇವಿ ಮಾತಾ, ಡಾ.ರಾಜಶೇಖರ ಸ್ವಾಮೀಜಿ, ಡಾ.ಸಿದ್ದರಾಮಯ್ಯ ಸ್ವಾಮಿ, ಸಂಗಮೇಶ ಬಿರಾದಾರ, ಶ್ರೀ ಕರಬಸಪ್ಪ ಅಕ್ಕಣ್ಣ ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಜಿಲ್ಲಾಧ್ಯ ಸೋಮನಾಥ ಪಾಟೀಲ್​ ಬಣ್ಣನೆ
  • ಗೋರ್ಟಾದಲ್ಲಿ ರುದ್ರೇಶ್ವರ ಜಾತ್ರೋತ್ಸವ
ಹುಲಸೂರು: ದೇಶದ ವೇದ ಸಂಗೀತ ಪರಂಪರೆಗೆ ಲಿಂ.ವಿರೂಪಾಕ್ಷಯ್ಯ ಸ್ವಾಮೀಜಿ ಅವರ ಕೊಡುಗೆ ಅಪೂರ್ವ ಮತ್ತು ಸಾರ್ವಕಾಲಿಕ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್​ ಹೇಳಿದರು.
ತಾಲೂಕಿನ ಗೋರ್ಟಾ ಗ್ರಾಮದ ಸಂಗೀತ ರುದ್ರೇಶ್ವರ ದೇವಾಲಯದ ಪರಿಸರದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಗೀತ ರುದ್ರೇಶ್ವರ ಜಾತ್ರೋತ್ಸವ, ಕಕ ಪ್ರಾಂತೀಯ 7ನೇ ಸಂಗೀತ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಚಾರಿತ್ರಿಕ ಸಾಂಸ್ಕೃತಿಕ ನೆಲೆಯಾದ ಗೋರ್ಟಾ ಸಂಗೀತ ರುದ್ರ ತವರು ಮನೆಯಾಗಿದೆ. ಲಿಂ.ವಿರೂಪಾಕ್ಷಯ್ಯನವರು ವೇದದ ರುದ್ರ ಮಂತ್ರಗಳಿಗೆ ಸಂಗೀತವನ್ನು ಕೊಡಸಿ ದೇಶಾದ್ಯಂತ ತಮ್ಮ ರುದ್ರ ಸಂಗೀತ ಕಾರ್ಯಕ್ರಮವನ್ನು ನೀಡಿ ನಾಡಿಗೆ ಗೌರವ ತಂದಿದ್ದಾರೆ ಎಂದರು.
ಗೋರ್ಟಾದಲ್ಲಿ ಹುತಾತ್ಮ ಸ್ಮಾರಕ ನಿರ್ಮಾಣವಾಗಲು ಶ್ರೀ ಡಾ.ರಾಜಶೇಖರ ಶಿವಾಚಾರ್ಯರ ಪಾತ್ರ ಮಹತ್ವದಾಗಿದೆ ಎಂದರು.
ಲಿಂ.ವಿರೂಪಾ ಸಮ್ಮಾನ್​ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಖ್ಯಾತ ಹಾರ್ಮೋನಿಯಂ ಸಂಗೀತ ಕಲಾವಿದ ರಾಜೇಂದ್ರಸಿಂಗ್​ ಪವಾರ್​ ಮಾತನಾಡಿ, ನಾಡಿನ ಸಂಗೀತ ಕ್ಷೇತ್ರಕ್ಕೆ ಲಿಂ.ವಿರೂಪಾಯ್ಯ ಸ್ವಾಮೀಜಿ ಕೊಡುಗೆ ಸಾಕಷ್ಟು ಇದೆ. ಅವರ ರುದ್ರ ಸಂಗೀತ ಕೇಳಿ ಪ್ರಭಾವಿತರಾಗಿ ಬೆಳೆದಿದ್ದಾರೆ. ರುದ್ರಕ್ಕೆ ಸಂಗೀತ ಕೊಡಸಿದ ದೇಶದ ಮೊದಲ ಕಲಾವಿದರು. ಅವರು 60ರ ದಶಕದಲ್ಲಿ ಗೋರ್ಟಾದಲ್ಲಿ ಶಾರದಾ ಸಂಗೀತ ವಿದ್ಯಾಲಯವನ್ನು ಪ್ರಾರಂಭಿಸಿ ನೂರಾರು ಜನರಿಗೆ ಸಂಗೀತ ಧಾರೆ ಎರೆದಿದ್ದಾರೆ ಎಂದರು.
ದೇವಸ್ಥಾನ ಪಂಚ ಕಮಿಟಿ ಉಪಾಧ್ಯಕ್ಷ ಡಾ.ಸಿದ್ದರಾಮಯ್ಯ ಸ್ವಾಮಿ, ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಡಾ.ರಾಜಶೇಖರ ಶಿವಾಚಾರ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶ್ರೀಶೈಲದ ಶ್ರೀ ಅಕ್ಕಮಹಾದೇವಿ ಚೈತನ್ಯ ಪೀಠದ ಅಧಿಪತಿ ಮಹಾ ಯೋಗಿ ಕರುಣಾದೇವಿ ಮಾತಾ, ರಾಜ್ಯ ಪ್ರಶಸ್ತಿ ಪುರಸತ ರೇವಪ್ಪ ಪಾಂಚಾಳ, ಪ್ರಭು ಸಾವಳಗಿ, ಹನುಮಂತಪ್ಪ ಮರಕುಂದ, ಸಂಗಮೇಶ ಬಿರಾದಾರ, ಗಂಗಾಧರ ಶಾಸಿ, ಭೂದಾನಿ ಕಮಳಾಬಾಯಿ ಅಕ್ಕಣ್ಣ ಕರಬಸಪ್ಪ, ಪೊ.ರುದ್ರೇಶ್ವರ ಸ್ವಾಮಿ, ಚನ್ನಬಸಪ್ಪ ಪತಂಗೆ, ಶ್ರೀಮಂತ ರಾಜೇಶ್ವರೆ, ಶಿವರಾಜ ಮಠಪತಿ, ಮಹಾಂತಯ್ಯ ಸ್ವಾಮಿ, ಚಂದ್ರಕಾಂತ ಚನ್ನಳ್ಳಿ, ಕಾಶಿಲಿಂಗ ಮಠಪತಿ, ಗಂಗಾಧರ ಶಾಸಿ, ನಾಗಶೆಟ್ಟಿ ಪಾಟೀಲ, ಶಿವರಾಜ ಬಿರಾದಾರ, ಬಸವರಾಜ ಪೊಲೀಸ್​ ಪಾಟೀಲ, ಪ್ರಭು ತರನಳ್ಳಿ ಇದ್ದರು. ಗಂಗಾಧರ ಶಾಸಿ ಹಾಗೂ ಬಸವರಾಜ ಹಾಲಹಳ್ಳಿ ನಿರೂಪಣೆ ಮಾಡಿದರು.
"

ಲಿಂ.ವಿರೂಪಾಕ್ಷಯ್ಯ ಸ್ವಾಮೀಜಿಯವರ ಜೀವನ ಸಂದೇಶವನ್ನು ಚಿರಕಾಲ ಎಲ್ಲೆಡೆ ಪ್ರಚಾರ ಪ್ರಸಾರವಾಗಲಿ ಎಂಬ ಉದ್ದೇಶದಿಂದ ಪ್ರತಿವರ್ಷ ಜಾತ್ರೆ ಹಾಗೂ ಸಮ್ಮೇಳನ ಮಾಡುತ್ತಿದ್ದೇವೆ. ಕಲಾವಿದರು ಇದರ ಲಾಭ ಪಡೆದುಕೊಳ್ಳಬೇಕು.

— > ಶ್ರೀ ಡಾ. ರಾಜಶೇಖರ ಶಿವಾಚಾರ್ಯರು ಗೋರ್ಟಾ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net