ನಾಳೆ ವಿರಾಟ ಹಿಂದೂ ಸಮಾವೇಶ ಆಯೋಜನೆ

ಇಂಡಿ ನಗರದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಸುಗೌಡ ಬಿರಾದಾರ ಮಾತನಾಡಿದರು. ಕಾಸುಗೌಡ ಬಿರಾದಾರ, ಸಿದ್ರಾಮಪ್ಪ ದೇಸಾಯಿ, ಹನುಮಂತಗೌಡ ಪಾಟೀಲ, ಪ್ರಕಾಶ ಬಿರಾದಾರ, ಅನೀಲ ಜಮಾದಾರ, ಜಿ.ಎಸ್. ಜೋಶಿ, ಆನಂದ ಕುಲಕರ್ಣಿ, ರಾಮಚಂದ್ರ ಕಾವಿ ಮತ್ತಿತರರಿದ್ದಾರೆ.
ಇಂಡಿ ನಗರದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಸುಗೌಡ ಬಿರಾದಾರ ಮಾತನಾಡಿದರು. ಕಾಸುಗೌಡ ಬಿರಾದಾರ, ಸಿದ್ರಾಮಪ್ಪ ದೇಸಾಯಿ, ಹನುಮಂತಗೌಡ ಪಾಟೀಲ, ಪ್ರಕಾಶ ಬಿರಾದಾರ, ಅನೀಲ ಜಮಾದಾರ, ಜಿ.ಎಸ್. ಜೋಶಿ, ಆನಂದ ಕುಲಕರ್ಣಿ, ರಾಮಚಂದ್ರ ಕಾವಿ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಹಿಂದೂ ಸಂಘಟನೆಗಳ ಮುಖಂಡ ಕಾಸುಗೌಡ ಬಿರಾದಾರ ಹೇಳಿಕೆ
  • ವಿವಿಧ ಮಠದ ಶ್ರೀಗಳು ಭಾಗಿ
ಇಂಡಿ: ನಗರದಲ್ಲಿ ಹಿಂದೂ ಸಮ್ಮೇಳನ ಸಂಚಲನಾ ಸಮಿತಿ ಇಂಡಿ ವತಿಯಿಂದ ಮಾ.6ರಂದು ವಿರಾಟ ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಸಂಘಟನೆಗಳ ಮುಖಂಡ ಕಾಸುಗೌಡ ಬಿರಾದಾರ ತಿಳಿಸಿದ್ದಾರೆ.
ನಗರದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೃಹತ್ ಹಿಂದೂ ಸಮಾವೇಶಕ್ಕೆ ಜಮಖಂಡಿ ತಾಲೂಕು ಮೈಗೂರಿನ ಗುರುಪ್ರಸಾದ ಶ್ರೀಗಳು, ಜೇವರ್ಗಿ ಆಂದೂಲ ಶ್ರೀ, ಕರುಣೇಶ್ವರ ಮಠದ ಸಿದ್ಧಲಿಂಗ ಶಿವಾಚಾರ್ಯರು, ಹಿರೇಮಣೂರ ವೇದೇಶ ತೀರ್ಥ ವಿದ್ಯಾಪೀಠ ಉಪಕುಲಪತಿ ಪಂ. ಸರ್ವೇಶಚಾರ್ಯ, ಪ್ರಾಂತ ಕಾರ್ಯವಾಹಕರು ಕರ್ನಾಟಕ ಉತ್ತರ ಪ್ರಾಂತದ ರಾಘವೇಂದ್ರ ಕಾಗವಾಡ ವಕ್ತಾರರಾಗಿ ಪಾಲ್ಗೊಳ್ಳುವರು.
ಶಿವಾಜಿ ವೃತ್ತದಿಂದ ಮಹಾವೀರ ವೃತ್ತ, ಡಾ. ಬಿ.ಆರ್. ಅಂಬೇಡ್ಕರ ವೃತ್ತ, ಬಸವೇಶ್ವರ ವೃತ್ತ, ಸ್ವಾಮಿ ವಿವೇಕಾನಂದ ವೃತ್ತದ ಮಾರ್ಗವಾಗಿ ಸಿಂದಗಿ ರಸ್ತೆಯಲ್ಲಿನ ಶಾಂತೇಶ್ವರ ಮಂಗಲ ಕಾರ್ಯಾಲಯ ಪಕ್ಕದ ಸದಾಶಿವ ನಗರದ ಖಾಲಿ ಇರುವ ಜಾಗದಲ್ಲಿ ಬೃಹತ್ ಹಿಂದೂ ಸಮ್ಮೇಳನ ನಡೆಯಲಿದೆ.
ಭೀಮಾಶಂಕರ ಮುರಗುಂಡಿ ಸಂಚಲನ ಸಮಿತಿ ಅಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದರು.
ಸಿದ್ರಾಮಪ್ಪ ದೇಸಾಯಿ ಮಾತನಾಡಿ, ಅಂದಿನ ಹಿಂದೂ ಸಮಾವೇಶಕ್ಕೆ ನಗರ, ಗ್ರಾಮೀಣ ಭಾಗದ ಹಿಂದೂ ಬಾಂಧವರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶ ಯಶಸ್ವಿಗೊಳಿಸಲು ಮನವಿ ಮಾಡಿದರು.
ಸುದ್ದಿಗೋಷ್ಠಿ ನಂತರ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಸಮಾವೇಶದ ನಿಮಿತ್ತ ಬೃಹತ್ ಶೋಭಾಯಾತ್ರೆ, ಮಾರ್ಗದುದ್ದಕ್ಕೂ ರಂಗೋಲಿ ಹಾಕಿ ತೋರಣ ಕಟ್ಟಿ ಸ್ವಾಗತಿಸುವುದು, ಮಕ್ಕಳಿಗೆ ದೇಶ ಭಕ್ತರ, ಮಹಾಪುರುಷರ ಛದ್ಮವೇಶ ಹಾಕಿಸುವುದು, ನಿವಾಸಿಗಳ ಮನೆ, ಅಂಗಡಿಗಳ ಮುಂದೆ ಮಹಾಪುರುಷರ ಭಾವಚಿತ್ರ ಅಳವಡಿಸುವುದು ಕುರಿತು ಚರ್ಚೆ ನಡೆಯಿತು.
ಹನುಮಂತಗೌಡ ಪಾಟೀಲ, ಪ್ರಕಾಶ ಬಿರಾದಾರ, ಅನೀಲ ಜಮಾದಾರ, ಜಿ.ಎಸ್. ಜೋಶಿ, ಆನಂದ ಕುಲಕರ್ಣಿ, ರಾಮಚಂದ್ರ ಕಾವಿ, ನಾಗನಾಥ ಹಂಚಾಟೆ, ಪುರಸಭೆ ಮಾಜಿ ಅಧ್ಯಕ್ಷ ಯಮನಾಜಿ ಸಾಳುಂಕೆ, ಸಂತೋಷ ಗವಳಿ, ಕೆ.ವಿ. ಪಾಟೀಲ, ರಾಮಸಿಂಗ್ ಕನ್ನೊಳ್ಳಿ, ಸುಭಾಶ ಪಾಟೀಲ, ಬಾಳು ಮುಳಜಿ, ವಿವೇಕ ಹಂಜಗಿ, ಸೋಮು ನಿಂಬರಗಿಮಠ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net