accident CRIME ಬುಕ್ಕಾಪಟ್ಟಣ: ಹುಳಿಯಾರು ಮಾರ್ಗದಿಂದ ಮೈನ್ಸ್ ತುಂಬಿಕೊಂಡು ಬರುತ್ತಿದ್ದ ಲಾರಿ ಹಾಗೂ ಶಿರಾ ಕಡೆಯಿಂದ ಗೋಧಿ ತುಂಬಿಕೊಂಡು ಬರುತ್ತಿದ್ದ ಲಾರಿ ಡಿಕ್ಕಿಯಾದ ಪರಿಣಾಮ ಗೋಧಿ ರಸ್ತೆಯಲ್ಲಿ ಬಿದ್ದಿದ್ದು, ಇದನ್ನು ತುಂಬಿಕೊಳ್ಳಲು ಜನ ಮುಗಿಬಿದ್ದ ಟನೆ ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಹೂವಿಲ್ ದೊರೆ ಬಳಿ ನಡೆಯಿತು. ಮೈನ್ಸ್ ಲಾರಿ ಪಲ್ಟಿಯಾಗಿ ರಸ್ತೆ ಪಕ್ಕದಲ್ಲಿ ಆಂಜನೇಯ ದೇವಸ್ಥಾನದ ಆವರಣಕ್ಕೆ ಬಿದ್ದಿದೆ. ಚಾಲಕನಿಗೆ ಗಾಯಗಳಾಗಿದ್ದು, ಶಿರಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆ ತುಂಬಾ ಬಿದಿದ್ದ ಗೋಧಿಯನ್ನು ಗ್ರಾಮಸ್ಥರು ಪೊರಕೆಯಲ್ಲಿ ಗುಡಿಸಿ ತಮ್ಮ ಚೀಲಗಳಲ್ಲಿ ತುಂಬಿಕೊಳ್ಳುತ್ತಿದ್ದರು. ಲಾರಿ ನಿಲ್ಲಿಸದೆ ತಪ್ಪಿಸಿಕೊಂಡು ಹೋಗುತ್ತಿದ್ದ ಮತ್ತೊಬ್ಬ ಚಾಲಕನನ್ನು ಎತ್ತಿನಹೊಳೆ ಪೈಪ್ ಕಾರ್ಖಾನೆಯ ಬಳಿ ತಡೆದು ಪೊಲೀಸರಿಗೆ ಒಪ್ಪಿಸಲಾಗಿದೆ.