ಬೀದಿ ಬದಿ ವ್ಯಾಪಾರಸ್ಥರ ಹೊಟ್ಟೆ ಹೊಡೆಯಬೇಡಿ

ಚಿತ್ರ ೧೦ ಕೆ.ಎಲ್.ಆರ್. ೦೪ : ಜಿಲ್ಲಾ ಕಾಂಗ್ರೇಸ್ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ಬೀದಿಬದಿ ವ್ಯಾಪಾರಸ್ಥರ ಸಮಾವೇಶದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಬೀದಿಬದಿ ವ್ಯಾಪಾರಿಗಳ ವಿಭಾಗದ ರಾಜ್ಯಾಧ್ಯಕ್ಷ ಡಾ. ಸಿ.ಇ.ರಂಗಸ್ವಾಮಿ, ಮಹಿಳಾ ರಾಜ್ಯಾಧ್ಯಕ್ಷೆ ಕಾವ್ಯಶ್ರೀ, ಜಿಲ್ಲಾಧ್ಯಕ್ಷ ವಿ.ಮಂಜುನಾಥ ಮುಂತಾದವರು ಇದ್ದರು.
ಚಿತ್ರ ೧೦ ಕೆ.ಎಲ್.ಆರ್. ೦೪ : ಜಿಲ್ಲಾ ಕಾಂಗ್ರೇಸ್ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ಬೀದಿಬದಿ ವ್ಯಾಪಾರಸ್ಥರ ಸಮಾವೇಶದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಬೀದಿಬದಿ ವ್ಯಾಪಾರಿಗಳ ವಿಭಾಗದ ರಾಜ್ಯಾಧ್ಯಕ್ಷ ಡಾ. ಸಿ.ಇ.ರಂಗಸ್ವಾಮಿ, ಮಹಿಳಾ ರಾಜ್ಯಾಧ್ಯಕ್ಷೆ ಕಾವ್ಯಶ್ರೀ, ಜಿಲ್ಲಾಧ್ಯಕ್ಷ ವಿ.ಮಂಜುನಾಥ ಮುಂತಾದವರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಕೋಲಾರ
ಬೀದಿಬದಿ ವ್ಯಾಪಾರಸ್ಥರು ಬಿಸಿಲು, ಮಳೆ ಎನ್ನದೆ ಧೂಳಿನಲ್ಲಿ ಕುಳಿತು ಕಷ್ಟಪಟ್ಟು, ಬೆವರು ಸುರಿಸಿ ವ್ಯಾಪಾರ ಮಾಡುತ್ತಾರೆ. ಅವರು ಯಾರ ಮೇಲೆಯೂ ಅವಲಂಭಿತರಾಗಿರುವುದಿಲ್ಲ. ಅವರಲ್ಲಿ ಜಾತಿ-ಧರ್ಮ ಇಲ್ಲ. ಅಂತಹವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡಬಾರದು ಎಂದು ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಬೀದಿಬದಿ ವ್ಯಾಪಾರಿಗಳ ವಿಭಾಗದ ರಾಜ್ಯಾಧ್ಯಕ್ಷ ಡಾ. ಸಿ.ಇ.ರಂಗಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಬುಧವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೀದಿಬದಿ ವ್ಯಾಪಾರಿಗಳ ವಿಭಾಗದ ವತಿಯಿಂದ ಬೀದಿ ಬದಿ ವ್ಯಾಪಾರಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ರಸ್ತೆಗಳಲ್ಲಿ ವ್ಯಾಪಾರ ಮಾಡುವಾಗ ಸಾರ್ವಜನಿಕರಿಗೆ ತೊಂದರೆಯಾಗುವ ಕೆಲಸ ಮಾಡಬೇಡಿ. ಪ್ಲಾಸ್ಟಿಕ್ ಬಳಸಿ ಆಹಾರ ತಯಾರಿಸಬೇಡಿ. ಹಣ್ಣುಗಳಿಗೆ ಕಲ್ಲರ್ ಹಾಕಬೇಡಿ, ಜನಸಾಮಾನ್ಯರು ತಿಂದರೆ ಅರೋಗ್ಯ ಕೆಡುತ್ತದೆ. ನೀವು ವ್ಯಾಪಾರ ಮಾಡುವ ಸ್ಥಳದಲ್ಲಿ ಅನೇಕ ಅಪಘಾತಗಳು ಆಗುತ್ತಿವೆ ಎಂದು ಮುಖ್ಯ ರಸ್ತೆಗಳಲ್ಲಿ ನಿಮ್ಮ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ವ್ಯಾಪಾರ ಮಾಡುವ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಿ. ಸರ್ಕಾರ ನಿಮ್ಮ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ನೀಡುತ್ತಿದೆ. ಅವುಗಳನ್ನ ಸರಿಯಾಗಿ ಸದ್ಭಳಕೆ ಮಾಡಿಕೊಳ್ಳಿ ಎಂದರು.
ಇಟಿಸಿಎಂ ಪಕ್ಕದಲ್ಲಿನ ರಸ್ತೆಯಲ್ಲಿ ವ್ಯಾಪಾರ ಮಾಡಲು ಫುಡ್ ಕೋರ್ಟ್ ಮಾದರಿ ವೆಂಡಿAಗ್ ವ್ಯವಸ್ಥೆ ಮಾಡುವ ಭರವಸೆ ನಗರಸಭೆ ಆಯುಕ್ತರು ನೀಡಿದ್ದಾರೆ. ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಅರೋಗ್ಯ ಇಲಾಖೆಯವರು ನಗರಸಭೆಯವರು ಬೀದಿಬದಿ ವ್ಯಾಪಾರಸ್ಥರಿಗೆ ತುಂಬಾ ಹಿಂಸೆ ನೀಡುತ್ತಿದ್ದಾರೆ ಎಂಬ ಆರೋಪ ನನ್ನ ಗಮನಕ್ಕೆ ಬಂದಿದೆ. ಹಾಗಾಗಿ ಕಾನೂನಿನ ಬಗ್ಗೆ ಅರಿವು ಪಡೆದುಕೊಳ್ಳಿ. ಬೀದಿ ಬದಿ ವ್ಯಪಾರಿಗಳು ಎಲ್ಲಾರು ಒಗ್ಗಟ್ಟಾಗಿರಿ. ಸಂಘಟನೆ ಬಲವಾದಾಗ, ನಿಮಗೆ ಶಕ್ತಿ ಬರುತ್ತದೆ. ಆಗ ಯಾರು ಏನು ಮಾಡಲು ಸಾಧ್ಯವಿಲ್ಲ. ನಾವು ಸ್ವಯಂ ಉದ್ಯೋಗಸ್ಥರು ಯಾರಿಗೂ ಭಯ ಪಡಬೇಕಾಗಿಲ್ಲ ಎಂದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೀದಿ ಬದಿ ವ್ಯಾಪಾರಿಗಳ ವಿಭಾಗದ ರಾಜ್ಯ ಮಹಿಳಾ ಅಧ್ಯಕ್ಷರಾದ ಕಾವ್ಯಶ್ರೀ, ಜಿಲ್ಲಾ ಅಧ್ಯಕ್ಷರಾದ ವಿ.ಮಂಜುನಾಥ್, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಸೈಯದ್ ಖಾಸಿಂ, ನಗರಸಭೆ ಅಧ್ಯಕ್ಷೆ ಲಕ್ಷ್ಮಿ ದೇವಮ್ಮ, ಎಸ್ ಸಿ ಎಸ್ ಟಿ ಘಟಕ ಅಧ್ಯಕ್ಷ ಜಯದೇವ, ಲಾಲ್ ಬಹಾದ್ದೂರ್ ಶಾಸ್ತ್ರೀ ಸೇರಿದಂತೆ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಬೀದಿ ಬದಿ ವ್ಯಾಪಾರಿಗಳು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net