ಇಂದು, ನಾಳೆ ವಿಜಯವಾಣಿ ಪ್ರಾಪರ್ಟಿ ಎಕ್ಸ್​ಪೋ: 25ಕ್ಕೂ ಹೆಚ್ಚು ರಿಯಲ್ ಎಸ್ಟೇಟ್ ಕಂಪನಿಗಳು ಭಾಗಿ: ಸಾರ್ವಜನಿಕರಿಗೆ ಉಚಿತ ಪ್ರವೇಶ | Property Expo

'ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ವೇಗವಾಗಿ ಬೆಳೆಯುತ್ತಿರುವ ಲಿಕಾನ್ ಸಿಟಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿವೇಶನ, ಅಪಾರ್ಟ್‌ಮೆಂಟ್, ಎಲ್ಲಾ ಮತ್ತು ಫಾರ್ಮ್‌ಲ್ಯಾಂಡ್ ಖರೀದಿಸಲು ಹುಡುಕುತ್ತಿದ್ದೀರಾ? ಹಾಗಿದ್ದರೆ, ಗ್ರಾಹಕರು ಹಾಗೂ ರಿಯಾಲ್ಟಿ ಕಂಪನಿಗಳ ನಡುವಿನ ಸೇತುವೆಯಾಗಿರುವ ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ಆಯೋಜಿಸಿರುವ ಪ್ರಾಪರ್ಟಿ ಎಕ್ಸ್‌ಪೋಗೆ ಭೇಟಿ ನೀಡಬಹುದು.
ಇಂದು, ನಾಳೆ ವಿಜಯವಾಣಿ ಪ್ರಾಪರ್ಟಿ ಎಕ್ಸ್​ಪೋ: 25ಕ್ಕೂ ಹೆಚ್ಚು ರಿಯಲ್ ಎಸ್ಟೇಟ್ ಕಂಪನಿಗಳು ಭಾಗಿ: ಸಾರ್ವಜನಿಕರಿಗೆ ಉಚಿತ ಪ್ರವೇಶ | Property Expo
Published on: 

ಬೆಂಗಳೂರು: ಗ್ರಾಹಕರು ಹಾಗೂ ರಿಯಾಲ್ಟಿ ಕಂಪನಿಗಳನ್ನು ಒಂದೇ ವೇದಿಕೆ ಅಡಿ ತರುವ ಉದ್ದೇಶದಿಂದ ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ಆಯೋಜಿಸಿರುವ 2 ದಿನಗಳ ಪ್ರಾಪರ್ಟಿ ಎಕ್ಸ್‌ಪೋಗೆ ಶನಿವಾರ ಚಾಲನೆ ಸಿಗಲಿದೆ. ಜಯನಗರದ 2ನೇ ಬ್ಲಾಕ್‌ನಲ್ಲಿರುವ ಅಶೋಕ ಪಿಲ್ಲರ್ ಸಮೀಪದ ಚಂದ್ರಸಾಗರ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಎಕ್ಸ್‌ಪೋ ನಡೆಯಲಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎ.ಹ್ಯಾರಿಸ್ ಶನಿವಾರ ಬೆಳಗ್ಗೆ ಎಕ್ಸ್‌ಪೋಗೆ ಚಾಲನೆ ನೀಡಲಿದ್ದಾರೆ.

'ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ವೇಗವಾಗಿ ಬೆಳೆಯುತ್ತಿರುವ ಲಿಕಾನ್ ಸಿಟಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿವೇಶನ, ಅಪಾರ್ಟ್‌ಮೆಂಟ್, ಎಲ್ಲಾ ಮತ್ತು ಫಾರ್ಮ್‌ಲ್ಯಾಂಡ್ ಖರೀದಿಸಲು ಹುಡುಕುತ್ತಿದ್ದೀರಾ? ಹಾಗಿದ್ದರೆ, ಗ್ರಾಹಕರು ಹಾಗೂ ರಿಯಾಲ್ಟಿ ಕಂಪನಿಗಳ ನಡುವಿನ ಸೇತುವೆಯಾಗಿರುವ ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ಆಯೋಜಿಸಿರುವ ಪ್ರಾಪರ್ಟಿ ಎಕ್ಸ್‌ಪೋಗೆ ಭೇಟಿ ನೀಡಬಹುದು. ವಿವಿಧ ರಿಯಾಲ್ಟಿ ಕಂಪನಿಗಳು ಎಕ್ಸ್‌ಪೋದಲ್ಲಿ ಮಳಿಗೆ ತೆರೆದಿದ್ದು ಗ್ರಾಹಕರಿಗೆ ವಿಲ್ಲಾ, ಅಪಾರ್ಟ್‌ಮೆಂಟ್ ಕುರಿತು ಸಮಗ್ರ ಮಾಹಿತಿ ಸಿಗಲಿದೆ.

ಜಯನಗರದ 2ನೇ ಬ್ಲಾಕ್‌ನಲ್ಲಿರುವ ಅಶೋಕ ಪಿಲ್ಲ‌ರ್ ಸಮೀಪದ ಚಂದ್ರಸಾಗರ ಕಲ್ಯಾಣ ಮಹಲ್‌ನ ಹವಾನಿಯಂತ್ರಿಕತ ಸಭಾಂಗಣದಲ್ಲಿ ಶನಿವಾರ (ಅ. 31) ಬೆಳಗ್ಗೆ 11.30ಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರು ಎಕ್ಸ್‌ಪೋಗೆ ಚಾಲನೆ ನೀಡಲಿದ್ದಾರೆ. ಭಾನುವಾರ (ನ.1) ತೆರೆ ಬೀಳಲಿದೆ.

  • ನಿವೇಶನ, ವಿಲ್ಲಾ, ಅಪಾರ್ಟ್‌ಮೆಂಟ್ , ಫಾರ್ಮ್‌ಲ್ಯಾಂಡ್ ಮಾಹಿತಿ

  • ಸಾರ್ವಜನಿಕರಿಗೆ ಉಚಿತ ಪ್ರವೇಶ, ಪಾರ್ಕಿಂಗ್ ಸೌಲಭ್ಯ

ಎಕ್ಸ್‌ಪೋದಲ್ಲಿ ವಿವಿಧ ರಿಯಾಲ್ಟಿ ಕಂಪನಿಗಳು ಪ್ರಾತ್ಯಕ್ಷಿಕೆ ಮಳಿಗೆಗಳನ್ನು ಪ್ರತಿಷ್ಠಾಪಿಸಿ ನಿವೇಶನ, ವಿಲ್ಲಾ, ಅಪಾರ್ಟ್ ಮೆಂಟ್ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಿವೆ. ವಿವಿಧ ಬ್ಯಾಂಕ್‌ಗಳು ಹಣಕಾಸು ನೆರವು ಒದಗಿಸಲಿವೆ. ಪೀಠೋಪಕರಣ ಉದ್ಯಮ, ಬ್ಬಿಣ ಹಾಗೂ ಸಿಮೆಂಟ್ ಕಂಪನಿಗಳು, ಮನೆಯ ಹೊರಾಂಗಣ, ಒಳಾಂಗಣ ದಿನ್ಯಾಸ ತಜ್ಞರು, ಕಟ್ಟಡ ಸಾಮಗ್ರಿ ವಿತರಕರು ಕೂಡ ಪಾಲ್ಗೊಳ್ಳಲಿದ್ದಾರೆ.

ಎಕ್ಸ್‌ಪೋ ನಡೆಯುವ ಸ್ಥಳವು ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಹೊಂದಿರುತ್ತದೆ. ವೇಶ ದ್ವಾರದಲ್ಲಿ ಆಕರ್ಷಕ ಸ್ವಾಗತ ಕಮಾನು ನಿರ್ಮಿಸಲಾಗಿದೆ. ಸ್ಟಾಲ್‌ಗಳ ಪ್ರವೇಶದಲ್ಲಿ ಸುಂದರ ಕಟೌಟ್ ನಿರ್ಮಾಣವಾಗಿದೆ. ಎಲ್ಲ ಮಳಿಗೆಗಳಲ್ಲಿ ಆಯಾ ೦ಪನಿಗಳು ಕೈಗೆತ್ತಿಕೊಂಡಿರುವ ವಸತಿ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಗಲಿವೆ. ಎಕ್ಸ್‌ಪೋಗೆ ಉಚಿತ ಪ್ರವೇಶ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.ಕಾರು ಸೇರಿ ಇತರ ವಾಹನಗಳಿಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದೆ.

ಬಹುತೇಕ ಪ್ರದೇಶಗಳು ಹೂಡಿಕೆದಾರರ ಸ್ನೇಹಿ

ರಾಜಧಾನಿ ಸುತ್ತಮುತ್ತ ವಸತಿಯೋಗ್ಯ ಪ್ರದೇಶಗಳು ಪ್ರಧಾನ ತಾಣಗಳಾಗಿ ಪರಿವರ್ತನೆಯಾಗಿದ್ದು, ಹೂಡಿಕೆದಾರರಿಗೆ ಅನುಕೂಲವಾಗುತ್ತಿದೆ. ಉತ್ತಮ ಮೂಲಸೌಕರ್ಯಗಳು, ನುರಿತ ಕಾರ್ಮಿಕರು ಹಾಗೂ ಐಟಿ ಸೆಕ್ಟರ್ ಇರುವುದರಿಂದ ಯಲ್ ಎಸ್ಟೇಟ್ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ. ನಗರದ ಹುತೇಕ ಪ್ರದೇಶಗಳು ಹೂಡಿಕೆದಾರರ ಸ್ನೇಹಿಯಾಗುತ್ತಿವೆ. ದೀರ್ಘಕಾಲ ಸೂಡಿಕೆದಾರರಿಗೆ ದೇವನಹಳ್ಳಿ ಸೂಕ್ತ ತಾಣವಾಗಿದೆ. ಐಟಿ- ಬಿಟಿ ಆರ್ಥಿಕ ವಲಯ ಸೇರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವುದು ರೇಡಿಕೆ ಹೆಚ್ಚಳಕ್ಕೆ ಕಾರಣ, ಬಳ್ಳಾರಿ, ಯಲಹಂಕ, ಸಹಕಾರನಗರ, ಅಮೃತಹಳ್ಳಿ, ಕ್ಕೂರು, ಹೆಣ್ಣೂರು ರಸ್ತೆ, ಥಣಿಸಂದ್ರ ರಸ್ತೆಯಲ್ಲಿ ಈಗಾಗಲೇ ಸಾಕಷ್ಟು ವಸತಿ ಮುಚ್ಚಯಗಳು ತಲೆಎತ್ತಿವೆ. ಮೆಟ್ರೋ ಕಾಮಗಾರಿ ಜತೆಗೆ ಮೂಲಸೌಕರ್ಯ .ಳಗೊಂಡ ಯೋಜನೆಗಳು ಜಾರಿಗೆ ಬಂದಿವೆ. ಇದರಿಂದಾಗಿ ದೇವನಹಳ್ಳಿ ಮತ್ತು ದರ ಸುತ್ತಮುತ್ತ ಪ್ರದೇಶಗಳ ಜಮೀನುಗಳಿಗೆ ಬೇಡಿಕೆ ಬಂದಿವೆ.

ಅನುಕೂಲಗಳೇನು?

  • ರಾಜಧಾನಿ ಸುತ್ತಮುತ್ತ ಪ್ರಾಪರ್ಟಿ ಮೇಲೆ ಬಂಡವಾಳ ಹೂಡಿದರೆ ಕೆಲವೇ ವರ್ಷಗಳಲ್ಲಿ ಲಾಭ ದುಪ್ಪಟ್ಟು

  • ನಗರದ ಸುತ್ತಮುತ್ತ ಗೇಟೆಡ್ ಕಮ್ಯೂನಿಟಿ ಸೌಲಭ್ಯದ ನೂರಾರು ಲೇಔಟ್ ನಿರ್ಮಾಣ

  • ಬಹುತೇಕ ಲೇಔಟ್‌ಳಲ್ಲಿ ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯ ವಾತಾವರಣ

  • ಕನಸಿನ ಮನೆ ನಿರ್ಮಿಸಿ ಅಹ್ಲಾದಕರ ವಾತಾವರಣದೊಂದಿಗೆ ನೆಮ್ಮದಿಯ ಜೀವನಕ್ಕೆ ಅನುಕೂಲ

  • ಪ್ರೀಮಿಯಂ ನಿವೇಶನಗಳ ಖರೀದಿಗೆ ಅವಕಾಶ

  • ಭೂಸ್ವಾಧೀನ, ಕಾನೂನು ಪರಿಶೀಲನೆ, ಲೇಔಟ್ ಅಭಿವೃದ್ಧಿ, ವಿಲ್ಲಾ, ಅಪಾಟ್ ೯ಮೆಂಟ್‌ಗಳ ನಿರ್ಮಾಣದಲ್ಲಿ ಆಳವಾದ ಜ್ಞಾನ ಹೊಂದಿರುವ ತಜ್ಞರು ಭಾಗಿ

  • ಗುಣಮಟ್ಟ, ಪಾರದರ್ಶಕತೆ, ನಂಬಿಕಸ್ಥ ರಿಯಲ್ ಎಸ್ಟೇಟ್ ಕಂಪನಿಗಳು ಭಾಗಿ

  • ಗ್ರಾಹಕರಿಗೆ ಐಷಾರಾಮಿ ಸೌಲಭ್ಯ ಒದಗಿಸಲಿರುವ ನೂರಾರು ಪ್ರಾಜೆಕ್ಟ್‌ಗಳ ಪರಿಚಯ

  • ಕುಟುಂಬದ ಸದಸ್ಯರ ಆಧಾರದಲ್ಲಿ ಮನೆಗಳನ್ನು ಖರೀದಿಸಲು ಐಟಿ ಉದ್ಯೋಗಿಗಳಿಗೆ ಉತ್ತಮ ಅವಕಾಶ

ಚಿನ್ನದ ನಾಣ್ಯ ಗೆಲ್ಲುವ ಅವಕಾಶ

ಪ್ರಾಪರ್ಟಿ ಎಕ್ಸ್‌ಪೋದ ಎರಡೂ ದಿನವೂ ಲಕ್ಕಿ ಡ್ರಾ ಇದ್ದು, ಪ್ರತಿದಿನವೂ ಚಿನ್ನದ ನಾಣ್ಯಗಳನ್ನು ಗೆಲ್ಲುವ ಅವಕಾಶ ಇರಲಿದೆ. ಲಕ್ಕಿ ಡ್ರಾ ಬಳಿಕ ಸ್ಥಳದಲ್ಲೇ ಅದೃಷ್ಟಶಾಲಿಗಳಿಗೆ ಗೋಲ್ಡನ್ ಕಾಯಿನ್ ವಿತರಿಸಲಾಗುತ್ತದೆ. ಜತೆಗೆ ವಿವಿಧ ಉಡುಗೊರೆಗಳನ್ನೂ ನಾಗರಿಕರು ತಮ್ಮದಾಗಿಸಿಕೊಳ್ಳಬಹುದು.

ಯಾವಾಗ, ಎಲ್ಲಿ?

ದಿನ: ಅ.31 ಹಾಗೂ ನ.1

ಭೇಟಿ ಸಮಯ: ಬೆಳಗ್ಗೆ 10ರಿಂದ ಸಂಜೆ 7ರವರೆಗೆ

-ಸ್ಥಳ: ಚಂದ್ರ ಸಾಗರ ಕಲ್ಯಾಣ ಮಹಲ್, ಟಿ. ಮರಿಯಪ್ಪ ರಸ್ತೆ, ಅಶೋಕ ಸ್ತಂಭ ಬಳಿ, ಜಯನಗರ 2ನೇ ಬ್ಲಾಕ್

ಯಾವ್ಯಾವ ಭಾಗದಲ್ಲಿ ಏನೆಲ್ಲ ವೈಶಿಷ್ಟ್ಯ.?

ವೈಟ್ ಫೀಲ್ಡ್: ವೈಟ್ಫೀಲ್ಡ್‌ನಲ್ಲಿ ಸಾಕಷ್ಟು ಮಾಲ್ ಹಾಗೂ ಹೈಪರ್​​ ಮಾರ್ಕೆಟ್‌ಗಳು ತಲೆಎತ್ತಿವೆ. ಈ ಪ್ರದೇಶ 15 ಲಕ್ಷ ಚದರ ಅಡಿ ಅಭಿವೃದ್ಧಿ ಹೊಂದಿದೆ. ಹೆಸರಾಂತ ರಿಯಾಲ್ಟಿ ಇಂಡಸ್ಟ್ರಿಗಳಿವೆ. ವಸತಿ ಪ್ರದೇಶಗಳಲ್ಲಿ ಸಾಕಷ್ಟು ಪ್ರಾಜೆಕ್ ನಿರ್ಮಾಣ ಹಂತದಲ್ಲಿವೆ. ಹೈಟೆಕ್ ವಿಲ್ಲಾಗಳಿವೆ. 3 ಪ್ರಮುಖ ಇಂಡಸ್ಟ್ರಿಯಲ್ ಅಸೋಸಿಯೇಷನ್ ಈ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಹಳೆಯ ಮದ್ರಾಸ್ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಚೆನ್ನೈ ಎಕ್ಸ್ ಪ್ರೆಸ್ ವೇ ಕಾಮಗಾರಿಗಳು ಅಭಿವೃದ್ಧಿ ಮಂತ್ರಕ್ಕೆ ನಾಂದಿ ಹಾಡಿವೆ.

ಕನಕಪುರ ರಸ್ತೆ: ಬನ್ನೇರುಘಟ್ಟದ ಕಡೆಯಿಂದ ಮೈಸೂರು ರಸ್ತೆಗೆ ತಾಗುವ ಮೊದಲ ವರ್ತುಲ ರಸ್ತೆಯ ಪ್ರದೇಶಗಳು ಅಭಿವೃದ್ಧಿ ಪಥದಲ್ಲಿವೆ. ವರ್ತುಲ ರಸ್ತೆಗಳು ಇತರೆ ರಸ್ತೆಗಳೊಂದಿಗೆ ಸಂಪರ್ಕ ಕಲ್ಪಿಸುತ್ತಿರುವುದು ಉತ್ತಮ ಬೆಳವಣಿಗೆ. ಮಿತಿಗಿಂತ ಹೆಚ್ಚು ಅಭಿವೃದ್ಧಿಗೊಂಡಿದ್ದು, ಬನಶಂಕರಿವರೆಗೂ ಸಂಪರ್ಕ ಕಲ್ಪಿಸಿದೆ. ಹಾಗಾಗಿ, ಅಂದಾಜು 20 ಕಿ.ಮೀ. ವರೆಗೂ ಈ ಅಭಿವೃದ್ಧಿ ವ್ಯಾಪ್ತಿ ಪಸರಿಸಿದೆ. ಈ ಭಾಗಕ್ಕೆ ಮೆಟ್ರೋ ರೈಲು ಯೋಜನೆ, ನೈಸ್ ಕಾರಿಡಾರ್ ವ್ಯವಸ್ಥೆ ಇರುವುದು ಪ್ಲಸ್ ಪಾಯಿಂಟ್.

ಮಾಗಡಿ ರಸ್ತೆ: ಯಶವಂತಪುರ ಅಭಿವೃದ್ಧಿಗೊಂಡಿರುವ ಸ್ಥಳವಾಗಿದೆ. ರಾಜಾಜಿನಗರ-ಮಾಗಡಿ ರಸ್ತೆ ಜಂಕ್ಷನ್ನಲ್ಲಿ ಬಹಳಷ್ಟು ಹೌಸಿಂಗ್ ಪ್ರಾಜೆಕ್ಟ್‌ಗಳು ನಡೆಯುತ್ತಿವೆ. ಈಗಾಗಲೇ ಸಾಕಷ್ಟು ರಿಟೇಲ್ ಔಟ್‌ಲೆಟ್‌ಗಳಿಗಾಗಿ ಸ್ಥಳಗಳನ್ನು ಕಾದಿರಿಸಲಾಗಿದೆ. ವ್ಯಾಪಾರಕ್ಕೆ ಕೇಂದ್ರ ಸ್ಥಾನವಾಗಿರುವುದರಿಂದ ಹಾಗೂ ಮೆಜೆಸ್ಟಿಕ್‌ಗೆ ಸಮೀಪ ವಿರುವುದರಿಂದ ವಸತಿ ಯೋಜನೆಯು ಮೈಸೂರು ರಸ್ತೆಯವರೆಗೂ ವಿಸ್ತರಿಸಿದೆ. ಈಗಾಗಲೇ ಹೆಚ್ಚಿನ ಸಂಖ್ಯೆಯ ಡೆವಲಪರ್‌ಳು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ.

ಮೈಸೂರು ರಸ್ತೆ: ಬೆಂಗಳೂರು- ಮೈಸೂರು ಷಟ್ಟಥ ರಸ್ತೆ ಅಭಿವೃದ್ಧಿಯಿಂದ ವಸತಿ ಬೇಡಿಕೆ ಹೆಚ್ಚಿದೆ. 140 ಕಿ.ಮೀ. ಉದ್ದದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಉನ್ನತೀಕರಣ ರಿಯಲ್ ಎಸ್ಟೇಟ್ ಕ್ಷೇತ್ರದ ಪ್ರಗತಿಗೆ ಮುನ್ನುಡಿ ಬರೆದಿದೆ. ರಸ್ತೆ ಸುಧಾರಣೆ ಮೂಲಕ ಸಂಪರ್ಕ ಜಾಲ ಉತ್ತಮಗೊಂಡಿರುವುದು ವಾಣಿಜ್ಯ ರಿಯಾಲ್ಟಿ ವಿಸ್ತರಣೆಗೆ ಕಾರಣವಾಗಿದೆ. ಮೆಟ್ರೋ ಮಾರ್ಗ, ರಸ್ತೆಗಳ ಅಗಲೀಕರಣ ಹಾಗೂ ಪೆರಿಫೆರಲ್ ರಿಂಗ್ ರಸ್ತೆಯಂತಹ ಉದ್ದೇಶಿತ ಮೂಲಸೌಕರ್ಯ ಯೋಜನೆಗಳಿಂದ ರಿಯಲ್ ಎಸ್ಟೇಟ್ ಕ್ಷೇತ್ರ ಉತ್ತಮ ಪ್ರಗತಿ ಕಾಣಲು ಸಾಧ್ಯವಾಗಿದೆ.

ನೆಲಮಂಗಲ ರಸ್ತೆ: ನೆಲಮಂಗಲ ಮತ್ತು ಸುತ್ತಮುತ್ತಲಿನ ಪ್ರದೇಶದ ಪ್ರಗತಿ ಪಥಕ್ಕೆ ರಸ್ತೆ ಸಂಪರ್ಕ ಹಾಗೂ ಮೆಟ್ರೋ ಸಂಪರ್ಕವೇ ಕಾರಣ. ಪೆರಿಫೆರಲ್ ರಿಂಗ್ ರಸ್ತೆ, ಸೆಟಲೈಟ್ ರಿಂಗ್ ರಸ್ತೆ, ಸಿಗ್ನಲ್ ಫ್ರಿ ಕಾರಿಡಾರ್, ಬೆಂಗಳೂರು- ಮುಂಬೈ ಆರ್ಥಿಕ ಕಾರಿಡಾರ್ ಸೇರಿ ಹಲವು ಯೋಜನೆಗಳು ಹೊರವಲಯದ ರಿಯಾಲ್ಟಿ ಬೇಡಿಕೆಯನ್ನು ಹೆಚ್ಚಿಸಿದೆ. ಅಭಿವೃದ್ಧಿ ಯೋಜನೆಗಳು ಮಾತ್ರವಲ್ಲದೆ ಪೀಣ್ಯದ ಬಹುತೇಕ ಕೈಗಾರಿಕೆಗಳೂ ಇಲ್ಲಿಗೆ ಶಿಫ್ಟ್ ಆಗಿವೆ. ಈ ಎಲ್ಲ ಕಾರಣಗಳಿಂದ ರಿಯಲ್ ಎಸ್ಟೇಟ್ ಚಟುವಟಿಕೆಗಳು ಮತ್ತಷ್ಟು ಬಿರುಸು ಪಡೆದುಕೊಂಡಿವೆ.