ನಾಳೆಯಿಂದ ವಿಜಯವಾಣಿ ಪ್ರಾಪರ್ಟಿ ಎಕ್ಸ್​ಪೋ: ಹೆಸರಾಂತ ನಿರ್ಮಾಣ ಕಂಪನಿಗಳು, ಬಿಲ್ಡರ್ಸ್ ಭಾಗಿ

ನಾಳೆಯಿಂದ ವಿಜಯವಾಣಿ ಪ್ರಾಪರ್ಟಿ ಎಕ್ಸ್​ಪೋ: ಹೆಸರಾಂತ ನಿರ್ಮಾಣ ಕಂಪನಿಗಳು, ಬಿಲ್ಡರ್ಸ್ ಭಾಗಿ
Published on: 

ಬೆಂಗಳೂರು: ರಾಜಧಾನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರು ತಮ್ಮ ಸ್ವಂತ ಸೂರು ಹೊಂದುವ ಆಕಾಂಕ್ಷಿಗಳ ಕನಸಿನ ಸೈಟ್, ಫ್ಲ್ಯಾಟ್​ ಹಾಗೂ ಫಾರ್ಮ್​​ಲ್ಯಾಂಡ್ ಖರೀದಿಸಲು ಅನುಕೂಲವಾಗುವಂತೆ ಕನ್ನಡದ ನಂ.1 ದಿನಪತ್ರಿಕೆಯಾದ ‘ವಿಜಯವಾಣಿ’ಯು ಶನಿವಾರ (ಅ.31) ಹಾಗೂ ಭಾನುವಾರ (ನ.1) ಎರಡು ದಿನಗಳ ‘ಪ್ರಾಪರ್ಟಿ ಎಕ್ಸ್​ಪೋ - 2026’ ಅನ್ನು ಆಯೋಜಿಸಿದೆ.

ಜಯನಗರದ 2ನೇ ಬ್ಲಾಕ್​ನಲ್ಲಿರುವ ಅಶೋಕ ಪಿಲ್ಲರ್ ಬಳಿ ಯಿರುವ ಚಂದ್ರ ಸಾಗರ ಕಲ್ಯಾಣ ಮಹಲ್​ನ ಹವಾ ನಿಯಂತ್ರಿಕತ ಸಭಾಂಗಣದಲ್ಲಿ ಮೇಳ ನಡೆಯಲಿದೆ. ಈ ಪ್ರಾಪರ್ಟಿ ಎಕ್ಸ್​ಪೋದಲ್ಲಿ ಹೆಸರಾಂತ ನಿರ್ಮಾಣ ಕಂಪನಿಗಳು ಹಾಗೂ ರಿಯಲ್ ಎಸ್ಟೇಟ್ ಸಂಸ್ಥೆಗಳು ಭಾಗಿಯಾಗಲಿವೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಶ್ವಸೂರ್ಯ ಪ್ರಾಪರ್ಟೀಸ್ ಎಕ್ಸ್​ಪೋದ ಟೈಟಲ್ ಸ್ಪಾನ್ಸರ್ ವಹಿಸಿದೆ. ಬ್ಯಾಂಕಿಂಗ್ ಕ್ಷೇತ್ರದ ಟೈಟಲ್ ಸ್ಪಾನ್ಸರ್ ಯೂನಿಯರ್ ಬ್ಯಾಂಕ್ ವಹಿಸಿದ್ದು, ಟ್ರಾವಲ್ ಪಾರ್ಟ್​ನರ್ ಆಗಿ ವಿಜಯಾನಂದ ಟ್ರಾವೆಲ್ಸ್ ಮೇಳದಲ್ಲಿ ಪಾಲ್ಗೊಳ್ಳಲಿವೆ.

ಕೈಗೆಟಕುವ ದರದಲ್ಲಿ ಹಾಗೂ ಸಾಲಸೌಲಭ್ಯದೊಂದಿಗೆ ಉತ್ತಮ ಪ್ರದೇಶಗಳಲ್ಲಿ ಕನಸಿನ ಮನೆ ಹೊಂದುವ ಕುರಿತು ಬಿಲ್ಡರ್​ಗಳು ಸಮಗ್ರ ಮಾಹಿತಿಯನ್ನು ಒದಗಿಸಿ ಕೊಡಲಿದ್ದಾರೆ. ಒಂದೇ ಸೂರಿನಲ್ಲಿ ಸಾರ್ವಜನಿಕರು ತಮ್ಮ ಕನಸಿನ ಮನೆ, ಸೈಟ್, ಅಪಾರ್ಟ್​ವೆುಂಟ್, ಫಾರ್ಮ್​​ಲ್ಯಾಂಡ್ ಹಾಗೂ ವಾಣಿಜ್ಯ ಮಳಿಗೆಗಳನ್ನು ಖರೀದಿಸಲು ಹಾಗೂ ಇತರ ಮಾಹಿತಿಗೆ ಅವಕಾಶ ಕಲ್ಪಿಸಲಾಗಿದೆ.

ಬ್ಯಾಂಕ್ ಸಾಲಸೌಲಭ್ಯದ ಮಾಹಿತಿ ಲಭ್ಯ

ಬಹುತೇಕ ಜನರಿಗೆ ತಮ್ಮ ಕನಸಿನ ಮನೆಯ ವಿನ್ಯಾಸ ಉತ್ತಮವಾಗಿರಬೇಕು. ವಿಭಿನ್ನ ಹಾಗೂ ಹೊಸ ಮಾದರಿಯಲ್ಲಿರಬೇಕೆಂದು ಇಚ್ಛಿಸುವುದುಂಟು. ಈ ಕಾರಣಕ್ಕೆ ನವೀನ ಹಾಗೂ ಸ್ಟೈಲಿಷ್ ವಿನ್ಯಾಸದಲ್ಲಿ ಮನೆ ನಿರ್ವಿುಸಿಕೊಳ್ಳಲು ಹಾಗೂ ತಮ್ಮ ಅಭಿರುಚಿಗೆ ತಕ್ಕಂತೆ ಮನೆಹನ್ನು ಹೊಂದುವ ವಿಚಾರದಲ್ಲಿ ಮಾಹಿತಿ ಸಂಗ್ರಹಿಸಬಹುದಾಗಿದೆ. ಅಪಾರ್ಟ್​ವೆುಂಟ್ ಹಾಗೂ ಅವುಗಳನ್ನು ಖರೀದಿಸಲು ಅನುಸರಿಸಬೇಕಾದ ಕಾನೂನು ಅಂಶಗಳನ್ನು ಎಕ್ಸ್​ಪೋದಲ್ಲಿ ಪಡೆದುಕೊಳ್ಳಬಹುದು. ಎಕ್ಸ್​ಪೋಗೆ ಭೇಟಿ ನೀಡುವವರಿಗೆ ಉಚಿತ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.

ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ ಗೆಲ್ಲುವ ಅವಕಾಶ

ಪ್ರಾಪರ್ಟಿ ಎಕ್ಸ್​ಪೋದ ಎರಡೂ ದಿನವೂ ಲಕ್ಕಿ ಡ್ರಾ ಇದ್ದು, ಪ್ರತಿದಿನವೂ ಚಿನ್ನದ ನಾಣ್ಯಗಳನ್ನು ಗೆಲ್ಲುವ ಅವಕಾಶ ಇರಲಿದೆ. ಲಕ್ಕಿ ಡ್ರಾ ಬಳಿಕ ಸ್ಥಳದಲ್ಲೇ ಅದೃಷ್ಟಶಾಲಿಗಳಿಗೆ ಗೋಲ್ಡನ್ ಕಾಯಿನ್ ವಿತರಿಸಲಾಗುತ್ತದೆ. ಜತೆಗೆ ವಿವಿಧ ರೂಪದ ಉಡುಗೊರೆಗಳನ್ನೂ ನಾಗರಿಕರು ತಮ್ಮದಾಗಿಸಿಕೊಳ್ಳಬಹುದು.

ಬಿಡಿಎ ಅಧ್ಯಕ್ಷರಿಂದ ಉದ್ಘಾಟನೆ

ನಗರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ‘ವಿಜಯವಾಣಿ ಪ್ರಾಪರ್ಟಿ ಎಕ್ಸ್​ಪೋ - 2026’ ಅನ್ನು ಶಾಂತಿನಗರ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರು ಶನಿವಾರ ಬೆಳಗ್ಗೆ 11.30ಕ್ಕೆ ಉದ್ಘಾಟಿಸಲಿದ್ದಾರೆ. ಈ ವೇಳೆ ಇತರ ಗಣ್ಯರು ಹಾಜರಿರುತ್ತಾರೆ.

ಎಕ್ಸ್​ಪೋದಲ್ಲಿ ಭಾಗಿಯಾಗುವ ಕಂಪನಿಗಳಿವು

ಶರಣ್ಯ ಫಾರ್ಮ್ಸ್​, ಸಪ್ತಗಿರಿ ಪ್ರಾಪರ್ಟೀಸ್ ಆಂಡ್ ಡೆವಲಪರ್ಸ್, ಡಿಎಸ್ ಮ್ಯಾಕ್ಸ್, ಕೆಎನ್​ಎಸ್ ಇನ್ಪ್ರಾ, ಫೈನೆಸ್ಟ್ ಪ್ರಾಪರ್ಟೀಸ್, ಆರ್ಥಸಿದ್ಧಿ ವೆಂಚರ್ಸ್, ಟಬೋಸ್ಟೀಲ್, ಸಪ್ತಾಶ್ವ ಡೆವೆಲಪರ್ಸ್, ವಿ2 ಹೋಲ್ಡಿಂಗ್ಸ್, ಇನ್​ಫ್ರೈಡ್, ಸ್ಪೂರ್ತಿ ಡೆವೆಲಪರ್ಸ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಕೃಷಿ ವಿಶ್ವ ಗೃಹ ನಿರ್ಮಾಣ ಸಂಘ, ಎಸ್​ಆರ್​ಆರ್ ಡೆವೆಲಪರ್ಸ್, ಚೌಡೇಶ್ವರಿ ರಿಯಲ್ ಎಸ್ಟೇಟ್, ಅಕಾರಸ್ ರಿಯಾಲ್ಟಿ, ಡಿಎಲ್​ಎಸ್ ಇನ್ಪ್ರಾ, ವೇ ಟು ವರ್ಡ್ ಹಾಗೂ ಬೆನಕ ಗೋಲ್ಡ್.

ಪ್ರಾಪರ್ಟಿ ಎಕ್ಸ್​ಪೋ ಎಂದು, ಎಲ್ಲಿ?

ದಿನ: ಅ.31 (ಶನಿವಾರ) ಹಾಗೂ ನ.1 (ಭಾನುವಾರ)

ಭೇಟಿ ಸಮಯ: ಬೆಳಗ್ಗೆ 10ರಿಂದ ಸಂಜೆ 7ರವರೆಗೆ

ಸ್ಥಳ: ಚಂದ್ರ ಸಾಗರ ಕಲ್ಯಾಣ ಮಹಲ್, ಟಿ.ಮರಿಯಪ್ಪ ರಸ್ತೆ, ಅಶೋಕ ಪಿಲ್ಲರ್ ಬಳಿ, 2ನೇ ಬ್ಲಾಕ್, ಜಯನಗರ.