ರೈತರ ಮತ್ತು ಅರಣ್ಯ ಇಲಾಖೆಯ ಮದ್ಯೆ ಮತ್ತೆ ಮುಂದುವರೆದ ಸಂಘರ್ಷ

ಚಿತ್ರ ೨೫ ಕೆ.ಎಲ್.ಆರ್. ೦೧ ಶ್ರೀನಿವಾಸಪುರ ತಾಲ್ಲೂಕಿನ ದೊಡಮಲದೊಡ್ಡಿ ಗ್ರಾಮದ ರೈತರ ಜಮೀನುಗಳಿಗೆ ಅರಣ್ಯ ಇಲಾಖೆಯವರು ತಮಗೆ ಸೇರುತ್ತದೆ ಎಂದು ಗಡಿ ಗುರ್ತಿಸಲು ಹೋದ ಸಂದರ್ಭದಲ್ಲಿ ಅರಣ್ಯ ಇಲಾಖೆ ಮತ್ತು ರೈತರ ಮದ್ಯೆ ವಾಗ್ವಾದ ನಡೆಯುತ್ತಿರುವುದು.
ಚಿತ್ರ ೨೫ ಕೆ.ಎಲ್.ಆರ್. ೦೧ ಶ್ರೀನಿವಾಸಪುರ ತಾಲ್ಲೂಕಿನ ದೊಡಮಲದೊಡ್ಡಿ ಗ್ರಾಮದ ರೈತರ ಜಮೀನುಗಳಿಗೆ ಅರಣ್ಯ ಇಲಾಖೆಯವರು ತಮಗೆ ಸೇರುತ್ತದೆ ಎಂದು ಗಡಿ ಗುರ್ತಿಸಲು ಹೋದ ಸಂದರ್ಭದಲ್ಲಿ ಅರಣ್ಯ ಇಲಾಖೆ ಮತ್ತು ರೈತರ ಮದ್ಯೆ ವಾಗ್ವಾದ ನಡೆಯುತ್ತಿರುವುದು.
Published on
ರೈತರ ಮತ್ತು ಅರಣ್ಯ ಇಲಾಖೆಯ ಮದ್ಯೆ ಸಂಘರ್ಷ ಮತ್ತೆ ಮುಂದುವರೆದಿದ್ದು ಬುಧವಾರ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ದೊಡಮಲದೊಡ್ಡಿ ಗ್ರಾಮದ ರೈತರ ಜಮೀನುಗಳಿಗೆ ಅರಣ್ಯ ಇಲಾಖೆಯವರು ತಮಗೆ ಸೇರುತ್ತದೆ ಎಂದು ಗಡಿ ಗುರ್ತಿಸಲು ಹೋದ ಸಂದರ್ಭದಲ್ಲಿ ಅರಣ್ಯ ಇಲಾಖೆ ಮತ್ತು ರೈತರ ಮದ್ಯೆ ವಾಗ್ವಾದ ನಡೆದಿದ್ದು ೧೦ ಕ್ಕೂ ಹೆಚ್ಚು ರೈತರ ವಿರುದ್ದ ಅರಣ್ಯ ಇಲಾಖೆಯವರು ಪೊಲೀಸರಿಗೆ ದೂರುನೀಡಿದ್ದಾರೆ.
ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಎಸ್.ಐ.ಟಿ ತಂಡ ರಚನೆಯಾದ ನಂತರ ಜಂಟಿ ಸರ್ವೆ ನಡೆಸುವ ತನಕ ರೈತರ ಜಮೀನುಗಳ ತಂಟೆಗೆ ಹೋಗಬಾರದು ಎಂದು ಅರಣ್ಯ ಇಲಾಖೆಗೆ ಖಡಕ್ ಸೂಚನೆ ನೀಡಿದ್ದರು.
ಆದರೆ ಕೆಲವು ದಿನಗಳಿಂದ ಮೌನ ವಹಿಸಿದ್ದ ಅರಣ್ಯ ಇಲಾಖೆಯವರು ಬುಧವಾರ ಏಕಾಏಕಿ ದೊಡಮಲದೊಡ್ಡಿ ಬಳಿ ರೈತರ ಜಮೀನುಗಳು ಅರಣ್ಯ ಇಲಾಖೆಗೆ ಸೇರುತ್ತವೆ ಎಂದು ಗಡಿ ಗುರ್ತಿಸುವ ಕೆಲಸಕ್ಕೆ ಮುಂದಾಗುವ ಸಂದರ್ಭದಲ್ಲಿ ರೈತರ ಮತ್ತು ಅರಣ್ಯ ಇಲಾಖಾಧಿಕಾರಿಗಳ ನಡುವೆ ಸಂಘರ್ಷ ನಡೆದು ಪೊಲೀಸರು ಮಧ್ಯಪ್ರವೇಶದ ನಂತರ ವಾತಾವರಣ ತಿಳಿಗೊಳಿಸಿದ್ದಾರೆ. ಅರಣ್ಯ ಇಲಾಖೆಯವರು ತಾಲ್ಲೂಕಿನ ಕೆಲವು ಗ್ರಾಮಗಳ ಬಳಿ ಸರ್ವೆ ಮತ್ತು ಗಡಿ ಗುರ್ತಿಸುವ ಕೆಲಸಕ್ಕೆ ಮುಂದಾಗಿದ್ದಾರೆ, ಶ್ರೀನಿವಾಸಪುರ ತಾಲ್ಲೂಕಿನ ಶಿವಪುರ ಗ್ರಾಮದ ಬಳಿ ಸರ್ವೇ ಕಾರ್ಯ ಮುಂದುವರೆಸಿದ್ದು ಗ್ರಾಮದ ಅಂಚಿನವರೆಗೂ ಅರಣ್ಯ ಇಲಾಖೆಯವರು ಗಡಿ ಗುರ್ತಿಸಿರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ದ್ವಂದ್ವ ಹೇಳಿಕೆಗಳು:
ದೊಡಮಲದೊಡ್ಡಿ ಗ್ರಾಮಸ್ಥರು ಮತ್ತು ಶಿವಪುರ ಗ್ರಾಮಸ್ಥರು ಗುರುವಾರ ತೊಟ್ಲಿ ಗ್ರಾಮದ ದೇವಸ್ಥಾನ ಕಾರ್ಯಕ್ರಮಕ್ಕೆ ಶ್ರೀನಿವಾಸಪುರ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಆಗಮಿಸಿದ್ದ ವೇಳೆ ರೈತರು ಮನವಿ ಸಲ್ಲಿಸಿ ಆತಂಕವನ್ನು ವ್ಯಕ್ತಪಡಿಸಿ ಜಂಟಿ ಸರ್ವೆ ನಡೆಸುತ್ತೇವೆ ಎಂದು ಹೇಳಿದ್ದರೂ ಸಹ ಅರಣ್ಯ ಇಲಾಖೆಯವರು ಏಕಾಏಕಿ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.
ದೂರವಾಣಿ ಮೂಲಕ ಶಾಸಕರು ಜಿಲ್ಲಾಧಿಕಾರಿ ಎಂ.ಆರ್ ರವಿ ರವರನ್ನು ಸಂಪರ್ಕಿಸಿದಾಗ ಎಸ್.ಐ.ಟಿ ತಂಡ ರಚನೆ ಮಾಡಲಾಗಿದೆ. ಆದರೆ ಇನ್ನೂ ಜವಾಬ್ದಾರಿ ನೀಡಿಲ್ಲ. ಎಸ್.ಐ.ಟಿ ತಂಡ ಮತ್ತು ಅರಣ್ಯ ಇಲಾಖೆಯವರು ಜಂಟಿಯಾಗಿ ಸರ್ವೆ ನಡೆಸಿದಲ್ಲಿ ಅರಣ್ಯಕ್ಕೆ ಸೇರುತ್ತದೆಯೋ ಅಥವಾ ಕಂದಾಯ ಇಲಾಖೆಗೆ ಸೇರುತ್ತದೋ ಎಂಬುದು ಗೂತ್ತಾಗುತ್ತದೆ. ಅರಣ್ಯ ಇಲಾಖೆಯವರು ನಮ್ಮ ಅನುಮತಿ ಇಲ್ಲದೆ ತೆರಳಿದ್ದಾರೆ ಎಂದು ತಿಳಿಸಿದರು.
ಡಿ.ಎಫ್.ಒ ಸರಿನಾ ಸಿಕ್ಕಲಿಗರ್ ರವರನ್ನು ಶಾಸಕರು ದೂರವಾಣಿ ಮೂಲಕ ಸಂಪರ್ಕಿಸಿದಾಗ ಎಸ್.ಐ.ಟಿ ತಂಡಕ್ಕೆ ಮಾಹಿತಿ ನೀಡಬೇಕಾಗಿದೆ. ಅದಕ್ಕಾಗಿ ನಮ್ಮ ಇಲಾಖೆಗೆ ಸೇರುವ ಸ್ಥಳಗಳನ್ನು ಗುರ್ತಿಸುವ ಕೆಲಸ ಮಾಡಲಾಗುತ್ತಿದೆ. ರೈತರನ್ನು ಒಕ್ಕಲೆಬ್ವಿಸುವ ಕೆಲಸ ಮಾಡುತ್ತಿಲ್ಲ, ಮುಳ್ಳು ತಂತಿ ಅಳವಡಿಸುವ ಕೆಲಸವನ್ನೂ ಸದ್ಯಕ್ಕೆ ಮಾಡುತ್ತಿಲ್ಲ ಎಂದು ಸ್ವಷ್ಟನೆ ನೀಡಿದ್ದಾರೆ.
ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿರುವ ರೈತರು ಈಗ ಗಡಿ ಗುರ್ತಿಸಲಾಗುವುದು ಎಂದು ಹೇಳುತ್ತಾರೆ. ನಂತರ ರಾತ್ರೋ ರಾತ್ರಿ ಬಂದು ತಂತಿ ಅಳವಡಿಸಿ ಬೆಳೆಗಳನ್ನು ನಾಶ ಮಾಡಲು ಮುಂದಾಗುತ್ತಾರೆ. ಜಂಟಿ ಸರ್ವೆ ನಡೆಯುವ ತನಕ ಅರಣ್ಯ ಇಲಾಖೆಯವರು ನಮ್ಮ ಜಮೀನುಗಳ ಪ್ರವೇಶ ಮಾಡಬಾರದು ಎಂದು ಶಾಸಕರ ಬಳಿ ಒತ್ತಾಯಪಡಿಸಿ ಗುರುವಾರ ಅರಣ್ಯ ಇಲಾಖೆಯವರ ಕೆಲಸಗಳಿಗೆ ಅಡ್ಡಿಪಡಿಸಲಾಗಿದೆ ಎಂದು ರೈತರ ವಿರುದ್ದ ದೂರು ದಾಖಲಿಸಿರುವುದನ್ನು ಕೈಬಿಡಬೇಕು ಎಂದುಮ ಶಾಸಕರ ಬಳಿ ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net