ನಿರಂತರ ಹೋರಾಟಕ್ಕೆ ಸಿಕ್ಕ ಜಯ

ಕೆಂಭಾವಿಯ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಬುಧವಾರ ಕರೆದಿದ್ದ ಚಿಂತನಾ ಸಭೆಯಲ್ಲಿ ನೂರಾರು ಕಾರ್ಮಿಕರಿಗೆ ಸ್ಮಾರ್ಟ್​ ಕಾರ್ಡ್​ ವಿತರಿಸಲಾಯಿತು. ಗುರು ದೊಡಮನಿ, ಗುರುರಾಜ ಅಂಗಡಿ, ಶರಣು ಇತರರಿದ್ದರು.
ಕೆಂಭಾವಿಯ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಬುಧವಾರ ಕರೆದಿದ್ದ ಚಿಂತನಾ ಸಭೆಯಲ್ಲಿ ನೂರಾರು ಕಾರ್ಮಿಕರಿಗೆ ಸ್ಮಾರ್ಟ್​ ಕಾರ್ಡ್​ ವಿತರಿಸಲಾಯಿತು. ಗುರು ದೊಡಮನಿ, ಗುರುರಾಜ ಅಂಗಡಿ, ಶರಣು ಇತರರಿದ್ದರು.
Published on
ಕೆಂಭಾವಿ: ಕೆಲ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಾರ್ಮಿಕರ ಸ್ಮಾರ್ಟ್​ ಕಾರ್ಡ್​ ಪಡೆಯಲು ನಮ್ಮ ಕರ್ನಾಟಕ ಸೇನೆ ಕೆಂಭಾವಿ ಹೋಬಳಿ ಕಾರ್ಮಿಕ ಟಕ ನಡೆಸಿದ ನಿರಂತರ ಹೋರಾಟಕ್ಕೆ ಕೊನೆಗೂ ಜಯ ಲಭಿಸಿದೆ ಎಂದು ಸೇನೆಯ ಕಟ್ಟಡ ಕಾರ್ಮಿಕ ಟಕದ ಉಪಾಧ್ಯಕ್ಷ ಗುರು ದೊಡ್ಮನಿ ಹೇಳಿದರು.
ಪಟ್ಟಣದ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಬುಧವಾರ ಕರೆದಿದ್ದ ಚಿಂತನಾ ಸಭೆಯಲ್ಲಿ ನೂರಾರು ಕಾರ್ಮಿಕರಿಗೆ ಸ್ಮಾರ್ಟ್​ ಕಾರ್ಡ್​ವಿತರಿಸಿ ಮಾತನಾಡಿದ ಅವರು, ಸರ್ಕಾರದ ಸೌಲಭ್ಯಗಳು ಪ್ರತಿಯೊಬ್ಬ ಅರ್ಹ ಕಾರ್ಮಿಕನಿಗೂ ತಲುಪುವಂತಾಗಲು ಸಂಟನೆ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
ಹೋಬಳಿ ಕಾರ್ಮಿಕ ಟಕದ ಅಧ್ಯಕ್ಷ ಗುರುರಾಜ ಅಂಗಡಿ ಮಾತನಾಡಿ, ಕಾರ್ಮಿಕರ ಹಕ್ಕಾದ ಈ ಸ್ಮಾರ್ಟ್​ ಕಾರ್ಡ್​ಗಳಿಗಾಗಿ ನಾವು ತಾಲೂಕು ಮತ್ತು ಜಿಲ್ಲಾ ಕಾರ್ಮಿಕ ಇಲಾಖೆಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಅಧಿಕಾರಿಗಳ ವಿಳಂಬದಿಂದ ವರ್ಷಗಟ್ಟಲೇ ನನೆಗುದಿಗೆ ಬಿದ್ದಿದ್ದ ಈ ಕೆಲಸಕ್ಕಾಗಿ ನಾವು ಅಂತಿಮವಾಗಿ ಜಿಲ್ಲಾ ಮಟ್ಟದಲ್ಲಿ ಬೃಹತ್​ ಹೋರಾಟದ ಎಚ್ಚರಿಕೆ ನೀಡಿದ ನಂತರವೇ ಇಲಾಖೆ ಎಚ್ಚೆತ್ತುಕೊಂಡು ಕಾರ್ಡ್​ ನೀಡಿದ್ದು, ಇದು ಕಾರ್ಮಿಕರ ಒಗ್ಗಟ್ಟಿನ ಜಯವಾಗಿದೆ ಎಂದರು.
ಹೋಬಳಿ ಟಕದ ಅಧ್ಯಕ್ಷ ಶರಣು ಎಸ್​. ದೇವರಮನಿ, ರಫೀಕ್​ ಮುಜವಾರ, ತಿಪ್ಪನಟಿಗಿ ಹನುಮಂತ, ಮುರ್ತುಜಾ ಸುರಪುರ ಇದ್ದರು. ಈ ವೇಳೆ ಕಟ್ಟಡ ಕಾರ್ಮಿಕರಿಗೆ ಸ್ಮಾರ್ಟ್​ ಕಾರ್ಡ್​ ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net