ಗಡಿ ಜಿಲ್ಲೆ ಬೀದರನಲ್ಲಿ ಉಪ ರಾಷ್ಟ್ರಪತಿಗಳಿಗೆ ಭರ್ಜರಿ ಸ್ವಾಗತ
,
Published on:
Copied
Follow Us
ಬೀದರ್ : ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಹಿರೇಮಠ ಸಂಸ್ಥಾನದ ಹಿರಿಯ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಗಡಿ ಜಿಲ್ಲೆಗೆ ಆಗಮಿಸಿದ ಉಪ ರಾಷ್ಟ್ರಪತಿ ರಾಧಾಕೃಷ್ಣನ್.
ನಗರದ ವಿಮಾನ ನಿಲ್ದಾಣದಲ್ಲಿ ಅವರನ್ನು ಜಿಲ್ಲಾಡಳಿತ ಸ್ವಾಗತಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸ್ವಾಗತಿಸಿ ಗೌರವಿಸಿದರು.
ಭಾಲ್ಕಿ ಪಟ್ಟಣದ ಡಾ.ಚನ್ನಬಸವಾಶ್ರಮದ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ರಾಧಾಕೃಷ್ಣನ್, ರಾಜ್ಯಪಾಲ ಧಾವರ್ ಚಂದ್ ಗೆಹಲೋತ್, ಎಐಐಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಇತರರು ಭಾಗವಹಿಸಲಿದ್ದಾರೆ.