ಶಕ್ತಿ ಯೋಜನೆ ಅನುಷ್ಠಾನ ಪರಿಶೀಲನೆ

ಕಲಬುರಗಿಯ ಬಸ್​ ನಿಲ್ದಾಣಕ್ಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯೆಕ್ಷ ಚಂದ್ರಿಕಾ ಪರಮೇಶ್ವರ್​ ನೇತೃತ್ವದ ತಂಡ ಬುಧವಾರ ಭೇಟಿ ನೀಡಿ ಶಕ್ತಿ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ ನಡೆಸಿತು. ಎಸ್​.ಜಿ. ಗಂಗಾಧರ, ಬಸವಂತಪ್ಪ ಎಂ., ಸಿ.ಎಸ್​. ಹೊಸಮನಿ, ಶಾರದಾದೇವಿ ಇತರರಿದ್ದರು.
ಕಲಬುರಗಿಯ ಬಸ್​ ನಿಲ್ದಾಣಕ್ಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯೆಕ್ಷ ಚಂದ್ರಿಕಾ ಪರಮೇಶ್ವರ್​ ನೇತೃತ್ವದ ತಂಡ ಬುಧವಾರ ಭೇಟಿ ನೀಡಿ ಶಕ್ತಿ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ ನಡೆಸಿತು. ಎಸ್​.ಜಿ. ಗಂಗಾಧರ, ಬಸವಂತಪ್ಪ ಎಂ., ಸಿ.ಎಸ್​. ಹೊಸಮನಿ, ಶಾರದಾದೇವಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ, ಸೂಪರ್​ ಮಾರ್ಕೆಟ್​ ಬಸ್​ನಿಲ್ದಾಣಕ್ಕೆ ಗ್ಯಾರಂಟಿ ಯೋಜನೆ ಜಿಲ್ಲಾ ಸಮಿತಿ ಭೇಟಿ
 ಕಲಬುರಗಿ: ಕೇಂದ್ರ ಹಾಗೂ ಸೂಪರ್​ ಮಾರ್ಕೆಟ್​ ಬಸ್​ ನಿಲ್ದಾಣಗಳಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯೆಕ್ಷ ಚಂದ್ರಿಕಾ ಪರಮೇಶ್ವರ್​ ಹಾಗೂ ಉಪಾಧ್ಯಕ್ಷ ವಿಜಯಕುಮಾರ ಕಟ್ಟಿಮನಿ ನೇತೃತ್ವದಲ್ಲಿ ಸದಸ್ಯರ ತಂಡ ಬುಧವಾರ ಭೇಟಿ ನೀಡಿ ಶಕ್ತಿ ಯೋಜನೆ ಜಾರಿ ಹಾಗೂ ಪ್ರಯಾಣಿಕರ ಮೂಲ ಸೌಲಭ್ಯ ಪರಿಶೀಲನೆ ನಡೆಸಿತು.
ಕೇಂದ್ರ ಬಸ್​ ನಿಲ್ದಾಣದ ಆವರಣದಲ್ಲಿ ಸಿಸಿಟಿವಿ ಕ್ಯಾಮರಾಗಳ ಕಾರ್ಯನಿರ್ವಹಣೆ, ಮಹಿಳೆಯರ ವಿಶ್ರಾಂತಿ ಕೊಠಡಿ, ಶಿಶುಗಳಿಗೆ ಹಾಲುಣಿಸುವ ಕೊಠಡಿ (ಫೀಡಿಂಗ್​ ರೂಮ್​), ಮಹಿಳಾ ಶೌಚಗೃಹಗಳ ವ್ಯವಸ್ಥೆ  ಅವಲೋಕಿಸಿತು. ಜತೆಗೆ ನಿಲ್ದಾಣದ ಕ್ಯಾಂಟೀನ್​ ಮತ್ತು ಬೇಕರಿ ಮಳಿಗೆಗಳಿಗೆ ಭೇಟಿ ನೀಡಿ ಆಹಾರ ಪದಾರ್ಥಗಳ ಗುಣಮಟ್ಟ, ಸ್ವಚ್ಛತೆ ಹಾಗೂ ನೈರ್ಮಲ್ಯದ ಮಾನದಂಡ ಪರಿಶೀಲಿಸಿತು. ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಸೌಲಭ್ಯ ಪಡೆಯುತ್ತಿರುವ ಮಹಿಳಾ ಪ್ರಯಾಣಿಕರೊಂದಿಗೆ ಪದಾಧಿಕಾರಿಗಳು ನೇರ ಸಂವಾದ ನಡೆಸಿ, ಯೋಜನೆ ಉಪಯುಕ್ತತೆಯ ಕುರಿತು ಅಭಿಪ್ರಾಯ ಆಲಿಸಿದರು. 
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗ&1ರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್​.ಜಿ.ಗಂಗಾಧರ, ವಿಭಾಗ&2ರ ವಿಭಾಗೀಯ ನಿಯಂತ್ರಣಾಧಿಕಾರಿ ಬಸವಂತಪ್ಪ ಎಂ., ವಿಭಾಗೀಯ ಸಂಚಾರ ಅಧಿಕಾರಿಗಳಾದ ಸಿ.ಎಸ್​. ಹೊಸಮನಿ, ಶಾರದಾದೇವಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಮಿಯುದ್ದಿನ್​ ಶಾಹೀನ್​, ಟಕ ವ್ಯವಸ್ಥಾಪಕ ಅನಿಲಕುಮಾರ, ನಿಲ್ದಾಣದ ಮೇಲ್ವಿಚಾರಕ ಗಿರೀಶ ಇತರರಿದ್ದರು.
"

ಶಕ್ತಿ ಯೋಜನೆ ಇನ್ನಷ್ಟು ಪರಿಣಾಮಕಾರಿ ಜಾರಿಗೊಳಿಸಲು ಹಾಗೂ ಅರ್ಹ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ಮತ್ತು ಸುಗಮವಾಗಿ ಯೋಜನೆ ತಲುಪಲು ಅಗತ್ಯ ಕ್ರಮ ಕೈಗೊಳ್ಳಬೇಕು.

— > ಚಂದ್ರಿಕಾ ಪರಮೇಶ್ವರ್​, ಜಿಲ್ಲಾಧ್ಯಕ್ಷೆ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net