ವೆಂಕಟೇಶ್ವರಸ್ವಾಮಿ ಕರಗ ಸಂಪನ್ನ Karaga

ವೆಂಕಟೇಶ್ವರಸ್ವಾಮಿ ಕರಗ ಸಂಪನ್ನ Karaga
ವೆಂಕಟೇಶ್ವರಸ್ವಾಮಿ ಕರಗ ಸಂಪನ್ನ Karaga
Published on
ಬೂದಿಕೋಟೆ: ಗ್ರಾಮದ ಲಕ್ಷಿ$್ಮವೆಂಕಟೇಶ್ವರಸ್ವಾಮಿ ಕರಗ ಹಾಗೂ ಜಾತ್ರಾ ಮಹೋತ್ಸವವು ಶುಕ್ರವಾರ ಅದ್ದೂರಿಯಾಗಿ ನೆರವೇರಿತು.Karaga
ಕರಗವನ್ನು ಹೊತ್ತಿದ ಪೂಜಾರಿ ಗೋವಿಂದಪಲ್ಲಿಯ ಬಾಲಾಜಿ ಅವರು ದೇವಸ್ಥಾನದ ಮುಂದೆ ಹಾಕಿದ್ದ ವೇದಿಕೆಯಲ್ಲಿ ತಮಟೆ ನಾದಕ್ಕೆ ವಿವಿಧ ಭಂಗಿಗಳಲ್ಲಿ ನೃತ್ಯ ಮಾಡಿ ನೆರೆದಿದ್ದ ಸಾವಿರಾರು ಮಂದಿ ಪ್ರೇಕ್ಷಕರ ಗಮನ ಸೆಳೆದರು.
ಕರಗ ಗ್ರಾಮದ ರೈತರಪೇಟೆ, ದೇಸಿಂಗ್​ರಾಜಪೇಟೆ, ನಗರ್ತರಪೇಟೆ, ಗಾಣಿಗರ ಬೀದಿ ಸೇರಿ ಗ್ರಾಮದ ಎಲ್ಲ ಕಡೆ ಸಂಚರಿಸಿತು. ಪ್ರಸಿದ್ಧ ಕರಗ ವೀಕ್ಷಿಸಲು ಕೋಲಾರ ಜಿಲ್ಲೆ ಮಾತ್ರವಲ್ಲದೆ ತಮಿಳುನಾಡು, ಆಂಧ್ರ ಪ್ರದೇಶ ಸೇರಿ ನಾನಾ ಭಾಗಗಳಿಂದ ಸಾವಿರಾರು ಮಂದಿ ನೆರೆದಿದ್ದರು. ವೀರಕುಮಾರರು ಕತ್ತಿಗಳನ್ನು ಹಿಡಿದು ಗೋವಿಂದ ನಾಮಸ್ಮರಣೆ ಮಾಡುತ್ತಾ ಕರಗಕ್ಕೆ ದಾರಿ ಮಾಡಿಕೊಡುತ್ತಾ ಮುಂದೆ ಸಾಗುತ್ತಿದ್ದರೆ ಕರಗವನ್ನು ಹೊತ್ತ ಪೂಜಾರಿ ಅವರನ್ನು ಹಿಂಬಾಲಿಸಿದರು. ಗ್ರಾಮದಲ್ಲಿ ಮನೆಗಳ ಮುಂದೆ ಸುಮಂಗಲಿಯರು ಮತ್ತು ಭಕ್ತರು ಕರಗಕ್ಕೆ ಪೂಜೆ ಸಲ್ಲಿಸಿ ಮಲ್ಲಿಗೆ ಹೂವನ್ನು ಚೆಲ್ಲಿ ಪೂಜಾರಿಗೆ ಮಡಿಲು ತುಂಬಿ ಹರಕೆ ತೀರಿಸಿದರು.
ಕರಗದ ಅಂಗವಾಗಿ ಗ್ರಾಮದಲ್ಲಿ ಸಾಮ್ರಾಟ್​ ಸುಯೋಧನ ಎಂಬ ಪೌರಾಣಿಕ ನಾಟಕ ಆಯೋಜಿಸಲಾಗಿತ್ತು. ಜಾತ್ರೆಯ ಅಂಗವಾಗಿ ಶ್ರೀ ಲಕ್ಷಿ$್ಮವೆಂಕಟೇಶ್ವರಸ್ವಾಮಿ, ವೇಣುಗೋಪಾಲಸ್ವಾಮಿ ಮತ್ತು ಕೋದಂಡರಾಮಸ್ವಾಮಿ ದೇವರುಗಳ ಪುಷ್ಪಪಲ್ಲಕ್ಕಿ ಬಹಳ ವಿಜೃಂಭಣೆಯಿಂದ ನೆರವೇರಿತು.
ಸಂಸದ ಮಲ್ಲೇಶ್​ ಬಾಬು, ಮಾಜಿ ಸಂಸದ ಎಸ್​.ಮುನಿಸ್ವಾಮಿ, ಪುರಸಭೆ ಸದಸ್ಯ ಕಪಾಲಿ ಶಂಕರ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net