ವೇಮನ ತತ್ವ, ಸಿದ್ಧಾಂತ ಪಾಲಿಸಿ

Vemana philosophy, ideology policy
Vemana philosophy, ideology policy
Published on
ಬಾಗೇಪಲ್ಲಿ: ಸಾಹಿತ್ಯದ ಮೂಲಕ ಸಮಾಜದ ಉದ್ದಾರಕ್ಕಾಗಿ ಜೀವನ ಮುಡುಪಾಗಿಟ್ಟಿರುವ ಮಹಾಯೋಗಿ ವೇಮನ ಸಿದ್ಧಾಂತಗಳ ಹಾದಿಯಲ್ಲಿ ಇಂದಿನ ಪೀಳಿಗೆಗೆ ನಡೆಯಬೇಕು ಎಂದು ದಾವಣಗೆರೆ ರೆಡ್ಡಿ ಗುರುಪೀಠದ ಶ್ರೀ ವೇಮಾನಂದ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶ್ರೀ ವೇಮನ ಸೌಹಾರ್ಧ ವಿವಿದ್ದೋಶ ಸಹಕಾರ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿ, ವೇಮನು 17 ನೇ ಶತಮಾನದಲ್ಲಿ ಎದುರಿಸಿರುವ ಸತ್ಯ ಸಂಗತಿಗಳ, ಮನುಷ್ಯನ ಪರಿಪೂರ್ಣ ಜೀವನಕ್ಕೆ ಅಗತ್ಯವಿರುವ ಆಗು&ಹೋಗುಗಳ ಬಗ್ಗೆ ಸತ್ಯಶೋಧನೆ ನಡೆಸಿ ರಚಿಸಿರುವ ಅದ್ಬುತ ಸಾಹಿತ್ಯದ ಮೂಲಕ ಜೀವನ ಬದಲಾವಣೆ ಕುರಿತು ಸಮಾಜಕ್ಕೆ ತಿಳಿಸಿಕೊಟ್ಟಿದ್ದಾರೆ.
ಎಲ್ಲದಕ್ಕೂ ಮೂಲ ಮಣ್ಣು ಅಂತಹ ಮಣ್ಣಿನ ಮೂಲದಿಂದ ಬಂದಿರುವ ಎಲ್ಲವೂ ತನ್ನ ಸ್ವರೂಪವನ್ನು ಪಡೆದುಕೊಂಡ ನಂತರ ಅದಕ್ಕೆ ಒಂದು ಹೆಸರನ್ನು ನಾಮಕರಣ ಮಾಡುತ್ತೇವೆ ಹೊರತು, ಸ್ವರೂಪಕ್ಕೂ ಮೊದಲು ಹೆಸರು ಇರುವುದಿಲ್ಲ. ಕೊನೆಗೆ ಸೇರುವುದು ಮಣ್ಣಿಗೆ ಎಂಬ ಸತ್ಯ ಸಂದೇಶವನ್ನು ಜಗತ್ತಿಗೆ ಸಾರಿದರು. ಮಧ್ಯಕಾಲದ ವ್ಯವಸ್ಥೆಯಲ್ಲಿ ನಾಮಕರಣಗೊಂಡಿರುವ ಜಾತಿ ವ್ಯವಸ್ಥೆ ಎಂದಿಗೂ ಶಾಶ್ವತವಲ್ಲ ಎಂಬುದನ್ನು ನಾವು ತಿಳಿದುಕೊಂಡರೆ ಮನುಷ್ಯನ ಜೀವನ ಪರಿಪೂರ್ಣಗೊಳ್ಳಲಿದೆ ಎಂದರು.
ರೆಡ್ಡಿ ಜನ ಸಂಘದ ರಾಜ್ಯ ಉಪಾಧ್ಯಕ್ಷ ವಿ.ವೆಂಕಟಶಿವಾರೆಡ್ಡಿ ಮಾತನಾಡಿ, ರೆಡ್ಡಿ ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಬೆಂಗಳೂರಿನಲ್ಲಿ ಸ್ಥಾಪನೆಗೊಂಡಿರುವ ರೆಡ್ಡಿ ಜನಸಂಘಕ್ಕೆ ಇಂದಿಗೆ 100 ವರ್ಷಗಳು ಪೂರ್ಣಗೊಂಡಿದೆ. 100 ವರ್ಷಗಳ ಆಡಳಿತ ಅವಧಿಯಲ್ಲಿ ಸಂಘದಲ್ಲಿ ಒಮ್ಮೆಯೂ ಚುನಾವಣೆ ನಡೆದಿಲ್ಲ, ಕರ್ನಾಟಕ ವಿಧಾನಸಭೆ, ವಿಧಾನ ಪರಿಷತ್​ನಲ್ಲಿ ರೆಡ್ಡಿ ಜನಾಂಗಕ್ಕೆ ಸೇರಿದ 28 ಶಾಸಕರು ಇದ್ದಾರೆ. ಅವರ ಸಹಕಾರದಿಂದ ಸಂಘವನ್ನು ಸುಸೂತ್ರವಾಗಿ ನಡೆಸಲಾಗುತ್ತಿದೆ. ರೆಡ್ಡಿ ಸಮುದಾಯದ ಮಕ್ಕಳಿಗೆ ಅಗತ್ಯ ಶಿಕ್ಷಣ ಸೌಲಭ್ಯ ಕಲ್ಪಿಸುವುದರ ಜತೆಗೆ ಸಮುದಾಯದವರಿಗೆ ಸಹಕಾರ ನೀಡುವುದೇ ಸಂಘದ ಉದ್ದೇಶವಾಗಿದೆ ಎಂದರು.
ಶ್ರೀ ವೇಮನ ಸೌಹಾರ್ಧ ವಿವಿದ್ದೋಶ ಸಹಕಾರ ಸಂಘದ ಅಧ್ಯಕ್ಷ ಎಚ್​.ಎನ್​.ಗೋವಿಂದರೆಡ್ಡಿ, ಕಾರ್ಯದರ್ಶಿ ಶ್ರೀಕಾಂತ್​ ರೆಡ್ಡಿ, ರೈತ ಸಂಘದ ರಾಜ್ಯಾಧ್ಯಕ್ಷ ನಾರಾಯಣರೆಡ್ಡಿ, ತಾಲೂಕು ಅಧ್ಯಕ್ಷ ವೆಂಕಟಶಿವಾರೆಡ್ಡಿ, ರೆಡ್ಡಿ ಜನಸಂಘ ನಿರ್ದೇಶಕ ಪ್ರಭಾಕರರೆಡ್ಡಿ, ಮುಖಂಡರಾದ ಪಿ.ಮಂಜುನಾಥರೆಡ್ಡಿ, ವಿ.ಪ್ರಭಾಕರರೆಡ್ಡಿ, ವೆಂಕಟರಂಗಾರೆಡ್ಡಿ, ಶಿವರಾಮರೆಡ್ಡಿ, ಆರ್​.ಹನುಮಂತರೆಡ್ಡಿ, ಎಸ್​.ನರಸಿಂಹಾರೆಡ್ಡಿ, ಸುಧಾಕರರೆಡ್ಡಿ, ವೈ.ಶ್ರೀನಿವಾಸರೆಡ್ಡಿ, ರಾಜಶೇಖರರೆಡ್ಡಿ, ವೆಂಕಟನರಸಪ್ಪ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net