ಕೋಲಾರ ತಾಲೂಕು ವೇಮಗಲ್&ಕುರುಗಲ್ ಪಟ್ಟಣ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಬಹಿರಂಗ ಹರಾಜಿನಲ್ಲಿ ಸಂತೆ ಹರಾಜಿಗೆ 11 ಮಂದಿ 50,000 ಸಾವಿರ ರೂ. ಠೇವಣಿ ಕಟ್ಟಿದ್ದರು. ಇದರಲ್ಲಿ ಅಂತಿಮವಾಗಿ ಕುರುಗಲ್ ರಾಘವೇಂದ್ರ ಅವರು 2.91 ಲಕ್ಷ ರೂ.ಗೆ ಸಂತೆ ತಮ್ಮದಾಗಿಸಿಕೊಂಡರು. ದಿನವಹಿ ಸುಂಕ ವಸೂಲಿಗೂ 50,000 ಸಾವಿರ ರೂ. ಠೇವಣಿ ನಿಗದಿ ಮಾಡಲಾಗಿದ್ದು, ಇದರಲ್ಲೂ ರಾಘವೇಂದ್ರ ಹರಾಜು ಗಿಟ್ಟಿಸಿಕೊಂಡರು.