ಹವಾಮಾನ ವೈಪರಿತ್ಯದಿಂದ ಟೊಮ್ಯಾಟೊ ಮಾತ್ರವಲ್ಲದೆ, ಇತರೆ ತರಕಾರಿ ದರವೂ ಏರುಮುಖವಾಗಿವೆ. ಸಗಟು ದರದಲ್ಲಿ 30-40 ರೂ. ಇದ್ದ ತರಕಾರಿಗಳು 50-60 ರೂ.ಗೆ ಏರಿಕೆಯಾಗಿವೆ. 150-180 ರೂ. ಇದ್ದ ನುಗ್ಗೆಕಾಯಿ ದರ ಕೆ.ಜಿ.ಗೆ 350-400 ರೂ. ತಲುಪಿದೆ. ಜಿಲ್ಲರೆ ಮಾರಾಟದಲ್ಲಿ ಒಂದು ನುಗ್ಗಿಕಾಯಿ 20 ರೂ. ಗೆ ಮಾರಾಟವಾಗುತ್ತಿದೆ. ಹಸಿಮೆಣಸಿನಕಾಯಿ 100-150 ರೂ., ಹುರಳಿಕಾಯಿ, ಕ್ಯಾರೆಟ್, ದಪ್ಪಮೆಣಸಿಕನಕಾಯಿ, ಬದನೆಕಾಯಿ 60 ರೂ., ಆಲೂಗಟ್ಟೆ , ಬೀಟ್‌ರೂಟ್ 50 ರೂ., ಬೂದಗುಂಬಳ ದರ 25-30 ರೂ. ಇದ್ದದ್ದು, 40-50 ರೂ. ಆಗಿದೆ. ಇವುಗಳ ಹೊರತುಪಡಿಸಿ ಮೂಲಂಗಿ, ಸೋರೆಕಾಯಿ, ಪಡವಲಕಾಯಿ ಹಾಗೂ ಸೊಪ್ಪುಗಳ ದರ ಕಡಿಮೆ ಇದೆ.