

ಪ್ರಮುಖ ಮುಖ್ಯಾಂಶಗಳು
ಮಹಾತ್ಮಗಾಂಧೀಜಿಯವರು ದೇಶದ ನಿಜವಾದಸಂಪತ್ತು ಇಲ್ಲಿನ ಖನಿಜ,ಮತ್ತಿತರ ಬೆಲೆಬಾಳುವ ವಸ್ತುಗಳಲ್ಲಾ.ಯುವಕರೇ ಈ ದೇಶದನಿಜವಾದ ಸಂಪತ್ತು ಎಂದು ಹೇಳಿದ್ದರು.ಅಂತಹ ಯುವಕರುಸ್ವಾವಲಂಬಿಗಳಾಗಿ,ಸ್ವಾಭಿಮಾನಿಗಳಾದರೆಆ ಸಂಪತ್ತು ಅಕ್ಷರಶಃ ದೇಶದಅಭಿವೃದ್ಧಿಗೆ ನಾಂದಿಯಾಗುತ್ತದೆಎಂದು ಸಿದ್ದಗಂಗಾ ಮಠದ ಶ್ರೀಸಿದ್ಧಲಿಂಗಸ್ವಾಮೀಜಿ ಹೇಳಿದರು.
ಅರಮನೆಮೈದಾನದ ವೈಟ್ ಪೆಟಲ್ ಸಭಾಂಗಣದಲ್ಲಿಇಂಟರ್‌ನ್ಯಾಷನಲ್ ಲಿಂಗಾಯತ್ಯೂತ್ ಫೋರಂ (ಐಲೈಫ್)ವಿಜಯವಾಣಿ ಮಾಧ್ಯಮಸಹಯೋಗದಲ್ಲಿ ಆಯೋಜಿಸಿದ್ದ ವೀರಶೈವಲಿಂಗಾಯತ ಬಿಜಿನೆಸ್ ಕಾನ್‌ಕ್ಲೇವ್‌ನಲ್ಲಿಆಶೀರ್ವಚನ ನೀಡಿದರು.
ಸಮುದಾಯದಲ್ಲಿಯುವಕರು ಕೇವಲ ಹೈಲೈಫನ್ನುಬಯಸುತ್ತಾರೆ.ಆದರೆ ಐಲೈಫ್ಸಂಸ್ಥೆ ಸಮುದಾಯ ಯುವಕರಿಗೆ ಉತ್ತಮಉದ್ಯೋಗ, ಉದ್ಯಮಗಳಲ್ಲಿತೊಡಗಿಸಿಕೊಳ್ಳಲು ಬೇಕಾದವೇದಿಕೆಯನ್ನು ನಿರ್ಮಾಣ ಮಾಡಿಕೊಟ್ಟಿದೆ.ಬಸವಣ್ಣನವರುತಮ್ಮ ಒಂದು ವಚನದಲ್ಲಿ ‘ಕಾಗೆಯೊಂದಗುಳಕಂಡರೆ ಕರೆಯದೆ ತನ್ನ ಕುಲವನ್ನೆಲ್ಲಾ’ಎಂದಿದ್ದಾರೆ ಹಾಗೆ ಐಲೈಫ್ ಸಂಸ್ಥೆಭಕ್ತಿಪಕ್ಷದೊಂದಿಗೆ ಸಮುದಾಯದಎಲ್ಲರನ್ನು ಮೇಲೆತ್ತುವ ಕೆಲಸಮಾಡುತ್ತಿದೆ.ಈ ಸಮುದಾಯ ಬಹಳಹಿಂದಿನಿಂದ ಸಮಾಜಕ್ಕೆ ಸಾಕಷ್ಟುಕೊಡುಗೆ ನೀಡುತ್ತಾ ಬಂದಿದೆ.ನಮ್ಮ ಸಮಾಜದಹಿರಿಯರ ಆದರ್ಶಗಳನ್ನು ಮುಂದಿಟ್ಟುಕೊಂಡುಕೆಲಸ ಮಾಡಿದರೆ ಐಲ್ೈ ಸಂಸ್ಥೆಮತ್ತಷ್ಟು ಉನ್ನತ ಸ್ಥಾನಕ್ಕೆತಲುಪಲಿದೆ. ಒಂದೇವಿದ್ಯೆ ಒಳ್ಳೆಯವನ ಕೈಗೆ ಸಿಕ್ಕರೆಇತರರಿಗೆ ಹಂಚುತ್ತಾನೆ.ಕೆಟ್ಟವರ ಕೈಗೆಸಿಕ್ಕರೆ ಕೇವಲ ವಾದ ಮಾಡಿಕಳೆಯುತ್ತಾನೆ.ಅದೇ ರೀತಿ ಹಣಕೂಡಾ ಒಳ್ಳೆಯವರು ಸಮಾಜಕ್ಕೆಹಂಚುತ್ತಾರೆ. ಕಾಯಕದ ಮಹತ್ವವನ್ನುಸಾರಿದ ಶರಣರ ತತ್ವಚಿಂತನೆಗಳುಇಡೀ ಜಗತ್ತಿಗೆ ಮಾದರಿಯಾಗಿದೆ.ಯಾರೂ ಸೋಮಾರಿಗಳಾಗದೆಕಾಯಕ ತತ್ವವನ್ನು ಮೈಗೂಡಿಸಿಕೊಳ್ಳಬೇಕು.ಐಲೈಫ್ ಸಂಸ್ಥೆಯಕಾರ್ಯ ಇತರೆ ಸಮಾಜದವರಿಗೂಮಾದರಿಯಾಗಿದೆ ಎಂದು ಸ್ವಾಮೀಜಿವಿವರಿಸಿದರು.
ಕಾರ್ಯಕ್ರಮದಲ್ಲಿವಿಧಾನ ಪರಿಷತ್ ಸಭಾಪತಿ ಬಸವರಾಜಹೊರಟ್ಟಿ, ಸಚಿವರಾದಎಂ.ಬಿ.ಪಾಟೀಲ್,ಈಶ್ವರ ಖಂಡ್ರೆ,ಶಾಸಕ ಗಣೇಶ್ಹುಕ್ಕೇರಿ ಮಾಜಿ ಎಂಎಲ್‌ಸಿರುದ್ರೇಗೌಡ್ರು,ಅಖಿಲ ಭಾರತವೀರಶೈವ ಮಹಾಸಭೆ ಮಹಿಳಾ ಘಟಕದಅಧ್ಯಕ್ಷೆ ವೀಣಾ ಕಾಶಪ್ಪನವರ್,ಉದ್ಯಮಿಗಳಾದಎಂ.ಬಿ.ಜಯಶಂಕರ್,ಡಾ.ಶರಣ್ಪಾಟೀಲ್, ಶಶಿಧರನಾಗರಾಜ್, ಫೋರಂಅಧ್ಯಕ್ಷ ಸಂತೋಷ ಕೆಂಚಾಂಬ,ಪ್ರತಾಪ್ ಆರಾಧ್ಯಮತ್ತಿತರರು ಇದ್ದರು.
ಬಸವಣ್ಣಪ್ರಜಾಪ್ರಭುತ್ವದ ಸ್ಥಾಪಕ
ಬಸವಣ್ಣಜಗತ್ತಿಗೆ ಮೊಟ್ಟ ಮೊದಲ ಪ್ರಜಾಪ್ರಭುತ್ವದಸ್ಥಾಪಕ. ಪ್ರಾಮಾಣಿಕಕೆಲಸವಿಲ್ಲದೆ ಯಾವುದೇ ಲವಿಲ್ಲಎಂಬುದನ್ನು ಶರಣರ ಕಾಯಕ ತತ್ವಸಾರಿದೆ. ಲಿಂಗಾಯತೆರಂ ಬಿಜಿನೆಸ್ ಕಾನ್‌ಕ್ಲೇವ್ಮೂಲಕ ಮುಂದಿನ ಪೀಳಿಗೆಗೆ ಮತ್ತಷ್ಟುಕೌಶಲವನ್ನು ಬೆಳೆಸುವುದಕ್ಕೆವೇದಿಕೆ ನಿರ್ಮಾಣ ಮಾಡಿದೆ ಎಂದುಕೇಂದ್ರ ಸಚಿವ ಪ್ರಲ್ಹಾದ್ ಜೋಶಿಹೇಳಿದರು.
ಭಾರತದಲ್ಲಿಅಪರಿಮಿತ ಅವಕಾಶಗಳಿವೆ.ಜಗತ್ತಿನ 4ನೇಅತಿದೊಡ್ಡ ಆರ್ಥಿಕ ಶಕ್ತಿಯಾಗಿಬೆಳೆದಿರುವ ಭಾರತ ಕೆಲವೇ ದಿನಗಳಲ್ಲಿ3ನೇಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ.ಆಗ ನಮ್ಮ ಯುವಕರುಅಮೆರಿಕಾ ಮತ್ತು ಚೀನಾದೊಂದಿಗೆಪೈಪೋಟಿ ಮಾಡಲು ಸಿದ್ಧರಾಗಬೇಕು.ಇಡೀ ಜಗತ್ತುಭಾರತದಲ್ಲಿ ಹೂಡಿಕೆಗೆ ತಯಾರಾಗಿದೆ.ಆದರೆ ಅವರಿಗೆಬೇಕಾದ ವಾತಾವರಣ,ಕೌಶಲತೆಯ ಮಾನವಸಂಪನ್ಮೂಲ ಬೇಕಾಗಿದೆ.ಇತ್ತೀಚೆಗೆಯೂರೋಪ್ ಒಕ್ಕೂಟದೊಂದಿಗೆ ಕೇಂದ್ರಸರ್ಕಾರ ಮಾಡಿಕೊಂಡಿರುವ ಒಪ್ಪಂದದಿಂದಬಹಳ ದೊಡ್ಡ ಉದ್ಯೋಗ ಸೃಷ್ಟಿಯಾಗಲಿದೆ.ವಸ್ತ್ರೋದ್ಯಮದಲ್ಲಿ10 ಲಕ್ಷಕೋಟಿ ರಪ್ತು ಮಾಡುತ್ತಿದ್ದಭಾರತವು ಮುಂದಿನ ನಾಲ್ಕೈದುವರ್ಷಗಳಲ್ಲಿ 40ಲಕ್ಷ ಕೋಟಿಮೌಲದ್ಯದ ರಫ್ತು ಮಾಡಲಿದೆ.ಕನೆಕ್ಟಿವಿಟಿಯಲ್ಲಿಭಾರತ ಬಹಳ ಮುಂದಿದೆ.ಜಗತ್ತಿನಲ್ಲೇಅತ್ಯಂತ ಹೆಚ್ಚು ವಿಮಾನಗಳಿಗೆಆರ್ಡರ್ ಕೊಟ್ಟಿರುವ ರಾಷ್ಟ್ರಭಾರತ ಎಂದು ಉದ್ಯಮದಲ್ಲಿರುವಅವಕಾಶಗಳ ಎಲ್ಲ ಆಯಾಮವನ್ನು ಜೋಶಿವಿವರಿಸಿದರು.
200ಕ್ಕೂಹೆಚ್ಚು ಸ್ಟಾಲ್,ತಜ್ಞರ ಉಪನ್ಯಾಸ
ಆಹಾರೋತ್ಪನ್ನ,ಬಟ್ಟೆ,ತಾಂತ್ರಿಕಉಪಕರಣಗಳು ಸೇರಿದಂತೆ ಒಟ್ಟು200ಕ್ಕುಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು,ಸಾರ್ವಜನಿಕರುತಮಗೆ ಬೇಕಾದ ವಸ್ತುಗಳನ್ನು ಖರೀದಿಮಾಡುವುದರಲ್ಲಿ ಮಗ್ನರಾಗಿದ್ದರು.ಗುರುವಾರಆರಂಭವಾಗಿರುವ ಮೇಳವು ಭಾನುವಾರದವರೆಗೆನಡೆಯಲಿದ್ದು,ವಾರಾಂತ್ಯದಲ್ಲಿಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿಜನರು ಆಗಮಿಸುವ ನಿರೀಕ್ಷೆ ಇದೆ.ಇದೇ ವೇಳೆ ಪ್ರಧಾನವೇದಿಕೆಯಲ್ಲಿ ವಿಷಯತಜ್ಞರುವಿವಿಧ ವಿಷಯಗಳ ಕುರಿತು ಉಪನ್ಯಾಸನೀಡಲಿದ್ದಾರೆ.
ನಮ್ಮ ಮಠಗಳು ಜಾತಿ ಭೇದವಿಲ್ಲದೆ ಎಲ್ಲರಿಗೂ ಅನ್ನ, ಅಕ್ಷರ, ಆಶ್ರಯ ನೀಡಿ ಸಮಾಜದ ಬೆಳವಣಿಗೆಗೆ ಸೇವೆ ಮಾಡಿವೆ. ಯುವಕರು ಮನಸ್ಸು ಮಾಡಿದರೆ ದೇಶದ ಪರಿವರ್ತನೆ ಸಾಧ್ಯ. ಆರ್ಥಿಕ ಸಬಲೀಕರಣವಾದರೆ ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿ ಮಾಡಬಹುದು. ಸಮುದಾಯದ ವಿವಿಧ ಸಂಘಟನೆಗಳು ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿವೆ. ಆದರೆ ಲಿಂಗಾಯತ ಫೋರಂ ಬಿಜಿನೆಸ್ ಕಾನ್‌ಕ್ಲೇವ್ ಮೂಲಕ ಎಲ್ಲರನ್ನು ಒಂದುಗೂಡಿಸಿದೆ. ನಮ್ಮ ಉದ್ಯಮಿಗಳು ಸಮುದಾಯದ ಅರ್ಹ ಯುವಕರಿಗೆ ಹೆಚ್ಚಿನ ಅವಕಾಶ ನೀಡಬೇಕು.