ರಾಜ್ಯದಲ್ಲಿ 'ಕಾವೇರಿ' ಕಿಚ್ಚು! ಆ.13ರಂದು ಕರ್ನಾಟಕ ಬಂದ್​ಗೆ ವಾಟಾಳ್​ ನಾಗರಾಜ್​ ಕರೆ | Karnataka Bandh

ಕರ್ನಾಟಕ ಬಂದ್​ಗೆ ವಾಟಾಳ್ ನಾಗರಾಜ್ ಕರೆ
ಕರ್ನಾಟಕ ಬಂದ್​ಗೆ ವಾಟಾಳ್ ನಾಗರಾಜ್ ಕರೆ
Published on

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡಿಗೆ 3500 ಕ್ಯೂಸೆಕ್​ ಕಾವೇರಿ ನೀರು ಹರಿಸಲು CWRC ಸೂಚನೆ
  • ಕಾವೇರಿ ನೀರು ಹರಿಸುವ ಆದೇಶಕ್ಕೆ ಕನ್ನಡ ಪರ ಸಂಘಟನೆಗಳಿಂದ ಖಂಡನೆ
  • ಇದೇ ಆಗಸ್ಟ್​ 13ರಂದು ಕರ್ನಾಟಕ ಬಂದ್​ಗೆ ವಾಟಾಳ್ ನಾಗರಾಜ್ ಕರೆ
ಬೆಂಗಳೂರು:

ಇಂದು ವಿವಿಧ ಸಂಘಟನೆಗಳ ಜತೆ ಸಭೆ ನಡೆಸಿದ ಕನ್ನಡ ಪರ ಹೋರಾಟಗಾರರ ವಾಟಾಳ್ ನಾಗರಾಜ್​, ಆ.13ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ ನೀಡಿದ್ದೇವೆ. ಇದಕ್ಕೆ ಹಲವು ಸಂಘಟನೆಗಳಿಂದ ಬೆಂಬಲ ಸಿಕ್ಕಿದೆ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಗುಡುಗಿದರು.
13ರ ಬೆಳಗ್ಗೆ 6ರಿಂದ ಸಂಜೆ 6 ರವರೆಗೆ ಕರ್ನಾಟಕ ಬಂದ್​ ನಡೆಯಲಿದೆ. ನಮ್ಮ ಹೋರಾಟಕ್ಕೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಲಾರಿ ಮಾಲೀಕರು ಮತ್ತು ಚಾಲಕರ ಸಂಘ, ಆಟೋ ಚಾಲಕರು ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘಗಳು ಬಂದ್​ಗೆ ಸಂಪೂರ್ಣ ಬೆಂಬಲ ಘೋಷಿಸಿವೆ. ಮುಖ್ಯವಾಗಿ, ಬಂದ್​ನ ಸಮಯದಲ್ಲಿ ತುರ್ತು ಸೇವೆಗಳಿಗೆ ತೊಂದರೆ ಮಾಡುವುದಿಲ್ಲ ಎಂದು ವಾಟಾಳ್ ನಾಗರಾಜ್​ ಸ್ಪಷ್ಟಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net