ಡಿ.3ರಂದು ಕೊಪ್ಪದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಮದ್ದೂರು ತಾಲೂಕಿನ ಕೌಡ್ಲೆ ಗ್ರಾಮದಲ್ಲಿ ಪಶು ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭೂಮಿ ಪೂಜೆ ಮಾಡಿದರು. ಮನು, ರತ್ನಮ್ಮ, ಕೆ.ಎನ್.ದಿವಾಕರ್, ಶ್ರೀನಿವಾಸ್, ಬೆಕ್ಕಳಲೆ ರಘು ಇದ್ದರು.
ಮದ್ದೂರು ತಾಲೂಕಿನ ಕೌಡ್ಲೆ ಗ್ರಾಮದಲ್ಲಿ ಪಶು ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭೂಮಿ ಪೂಜೆ ಮಾಡಿದರು. ಮನು, ರತ್ನಮ್ಮ, ಕೆ.ಎನ್.ದಿವಾಕರ್, ಶ್ರೀನಿವಾಸ್, ಬೆಕ್ಕಳಲೆ ರಘು ಇದ್ದರು.
Published on
ಮದ್ದೂರು: ತಾಲೂಕಿನ ಕೊಪ್ಪ ಗ್ರಾಮದಲ್ಲಿ ಡಿ.3 ರಂದು ಅಂದಾಜು 150 ಕೋಟಿ ರೂ.ಗೂ ಹೆಚ್ಚಿನ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಬೃಹತ್ ಜನಸಂಪರ್ಕ ಸಭೆ ಹಮ್ಮಿಕೊಳ್ಳಲಾಗಿದೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಕೌಡ್ಲೆ ಗ್ರಾಮದಲ್ಲಿ ಬುಧವಾರ ಪಶು ಆಸ್ಪತ್ರೆಯ ನೂತನ ಕಟ್ಟಡ ಹಾಗೂ ಕೌಡ್ಲೆ-ಗಟ್ಟಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕೊಪ್ಪ ಹೋಬಳಿಯ 8 ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಅಂದಾಜು 150 ಕೋಟಿ ರೂ.ಗೂ ಹೆಚ್ಚಿನ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗಿದೆ ಎಂದರು.
ಮುಖ್ಯಮಂತ್ರಿ ಸ್ಥಾನದ ಗೊಂದಲದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಪಕ್ಷದ ಹೈಕಮಾಂಡ್ ಈ ವಿಚಾರವಾಗಿ ಕೆಲ ದಿನಗಳಲ್ಲೇ ಈ ಸಮಸ್ಯೆಗೆ ಮುಕ್ತಿ ನೀಡಿ ಎಲ್ಲವನ್ನು ಸರಿಪಡಿಸುತ್ತೆ. ಆದರೆ, ವಿರೋಧ ಪಕ್ಷಗಳಿಗೆ ಬೇರೆ ಕೆಲಸವಿಲ್ಲದಿರುವುದರಿಂದ ಇಲ್ಲ ಸಲ್ಲದ ಗೊಂದಲ ಸೃಷ್ಟಿಸುತ್ತಿವೆ ಎಂದು ವಿಪಕ್ಷಗಳ ವಿರುದ್ಧ ಕಿಡಿಕಾರಿದರು.
ಕೆಎಂಎಫ್ ಮೂಲಕ ಮೆಕ್ಕೆಜೋಳ ಖರೀದಿ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಮಾಡುವ ಜವಾಬ್ದಾರಿಯನ್ನು ಮಾಡದೇ ಇದ್ದರೆ ಏನು ಮಾಡೋದು? ಈ ಬಗ್ಗೆ ರಾಜ್ಯದಿಂದ ಸಂಸದರಾಗಿ ಆಯ್ಕೆಯಾಗಿ ಮಂತ್ರಿಗಳಾಗಿರುವವರು ಸಹ ಬಾಯಿ ಬಿಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಾನು ಇತ್ತೀಚೆಗೆ ದೆಹಲಿಗೆ ಹೋಗಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ, ನನ್ನ ಇಲಾಖೆಗೆ ಸಂಬಂಧಪಟ್ಟಂತೆ ಕೆಲಸ ಇತು.್ತ ಅದಕ್ಕಾಗಿ ಹೋಗಿದ್ದೆ ಎಂದ ಅವರು, ಶಾಸಕರು ದೆಹಲಿಗೆ ಹೋಗಿದ್ದರ ಬಗ್ಗೆ ಹೇಳುವುದಾದರೆ ಪಕ್ಷದ ಹೈಕಮಾಂಡ್‌ನ್ನು ಭೇಟಿ ಮಾಡುವುದನ್ನು ಬೇಡವೆನ್ನುವುದಕ್ಕೆ ಆಗಲ್ಲ, ಮಂತ್ರಿಮಂಡಲ ಪುನರ್‌ರಚನೆಯ ವಿಷಯದಲ್ಲಿಯೂ ಆಕಾಂಕ್ಷಿಗಳಾಗಿಯೂ ಹೋಗಿರಬಹುದು ಅಷ್ಟೇ ಹೊರತು ನಮ್ಮಲ್ಲಿ ಯಾವುದೇ ಬಣ ಬಡಿದಾಟವು ಇಲ್ಲ ಎಂದರು.
ಗ್ರಾಪಂ ಅಧ್ಯಕ್ಷ ಮನು, ಉಪಾಧ್ಯಕ್ಷೆ ರತ್ನಮ್ಮ, ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್, ತಾ.ಪಂ.ಮಾಜಿ ಅಧ್ಯಕ್ಷ ಶ್ರೀನಿವಾಸ್,ಉಪಾಧ್ಯಕ್ಷ ಬೆಕ್ಕಳಲೆ ರಘು, ಮಾಜಿ ಸದಸ್ಯ ತೋಯಜಾಕ್ಷ, ಮುಖಂಡರಾದ ಸಿ.ಎಂ.ಕ್ರಾಂತಿ ಸಿಂಹ, ಪದ್ಮಾ ಶ್ರೀನಿವಾಸ್, ಶ್ರೀನಿವಾಸ್, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಶಿವಲಿಂಗಯ್ಯ, ಸಹಾಯಕ ನಿರ್ದೇಶಕ ಡಾ.ಗೋವಿಂದ್ ಸೇರಿದಂತೆ ಹಲವರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net