ಆಧುನಿಕ ಯುದ್ಧ ಸನ್ನಿವೇಶಕ್ಕೆ ರಕ್ಷಣಾ ಪಡೆಗಳ ಆರೋಗ್ಯ ಸೇವೆ ಆಧುನೀಕರಣ

ಭಾರತೀಯ ವಾಯುಪಡೆಯ ವೈದ್ಯಕೀಯ ತರಬೇತಿ ಕೇಂದ್ರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಸೇನೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಭಾರತೀಯ ವಾಯುಪಡೆಯ ವೈದ್ಯಕೀಯ ತರಬೇತಿ ಕೇಂದ್ರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಸೇನೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
Published on

ಬೆಂಗಳೂರು: ಆಧುನಿಕಯುದ್ಧ ಸನ್ನಿವೇಶದಲ್ಲಿ ಎದುರಾಗುವಸವಾಲುಗಳಿಗೆ ಪರಿಣಾಮಕಾರಿಯಾಗಿಸ್ಪಂದಿಸಲು ರಕ್ಷಣಾ ಪಡೆಗಳಮುಂಚೂಣಿ ವೈದ್ಯಕೀಯ ಸಿದ್ಧತೆಯನ್ನುಬಲಪಡಿಸುವ ಉದ್ದೇಶದಿಂದ ಭಾರತೀಯವಾಯುಪಡೆಯ ವೈದ್ಯಕೀಯ ತರಬೇತಿಕೇಂದ್ರ (ಎಂಟಿಸಿ)ದಲ್ಲಿ8ನೇಅಲೈಡ್ ಮತ್ತು ಹೆಲ್ತ್‌ಕೇರ್ವಿಚಾರ ಸಂಕಿರಣ ನಡೆಯಿತು.

ಆಧುನಿಕ ಯುದ್ಧಸನ್ನಿವೇಶಕ್ಕೆ ಅನುಗುಣವಾಗಿರಕ್ಷಣಾ ಪಡೆಗಳ ಪ್ರಾಥಮಿಕ ಆರೋಗ್ಯಸೇವೆಗಳ ಆಧುನೀಕರಣ ಎಂಬ ವಿಷಯದಕುರಿತು ಆ.17ಮತ್ತು18ರಂದುಹಮ್ಮಿಕೊಳ್ಳಲಾಗಿದ್ದ ಎರಡುದಿನಗಳ ವಿಚಾರ ಸಂಕಿರಣವನ್ನುಪ್ರಧಾನ ವೈದ್ಯಕೀಯ ಅಧಿಕಾರಿ,ತರಬೇತಿಕಮಾಂಡ್ ಪ್ರಧಾನ ಕಚೇರಿಯ ಏರ್ವೈಸ್ ಮಾರ್ಷಲ್ ಎಸ್‌ಜಿಎಸ್ ದತ್ತಉದ್ಘಾಟಿಸಿದರು.

ಭಾರತೀಯವಾಯುಪಡೆ,ಭೂಸೇನೆಹಾಗೂ ನೌಕಾಪಡೆಯ ಸುಮಾರು 200ಅಲೈಡ್ಮತ್ತು ಹೆಲ್ತ್‌ಕೇರ್ ವೃತ್ತಿಪರರು,ಕರ್ನಾಟಕರಾಜ್ಯ ಅಲೈಡ್ ಮತ್ತು ಹೆಲ್ತ್‌ಕೇರ್ಕೌನ್ಸಿಲ್‌ನ (ಕೆಎಎಚ್‌ಸಿ)ಪ್ರತಿನಿಧಿಗಳುಪಾಲ್ಗೊಂಡಿದ್ದರು.

ಎರಡು ದಿನಗಳಕಾರ್ಯಕ್ರಮದಲ್ಲಿ ಮೂರು ಸೇನೆಯಪ್ರಾಥಮಿಕ ಆರೋಗ್ಯ ಸೇವಾ ಮೂಲಸೌಕರ್ಯಬಲಪಡಿಸುವಿಕೆ,ರಕ್ಷಣಾಆರೋಗ್ಯ ಸೇವೆಯಲ್ಲಿ ಮಾನವ ಸಂಪನ್ಮೂಲಅಭಿವೃದ್ಧಿ ಮತ್ತು ತರಬೇತಿ,ಕಾರ್ಯಾಚರಣೆ,ಯುದ್ಧಹಾಗೂ ವಿಪತ್ತು ಸಂದರ್ಭಗಳ ಸಿದ್ಧತೆಸೇರಿದಂತೆ ಸಮಕಾಲೀನ ವಿಷಯಗಳಕುರಿತು ವೈಜ್ಞಾನಿಕ ಗೋಷ್ಠಿಗಳುಹಾಗೂ ಚರ್ಚೆಗಳು ನಡೆದವು.

ಆಧುನಿಕ ಯುದ್ಧದಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯಸೇವೆ ಎದುರಿಸುತ್ತಿರುವ ಸಂಕೀರ್ಣಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವನಿಟ್ಟಿನಲ್ಲಿ ತಜ್ಞರೊಂದಿಗೆಸಂವಾದ,ಉತ್ತಮಪದ್ಧತಿಗಳ ವಿನಿಮಯ ಹಾಗೂ ನವೀನಪರಿಹಾರಗಳ ಕುರಿತು ಚರ್ಚೆಗೆವಿಚಾರ ಸಂಕಿರಣ ವೇದಿಕೆಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net