ಹಬ್ಬದ ದಿನ ಲಕ್ಷ್ಮೀಗೆ ಕಲಶ ಸ್ಥಾಪನೆ ಮಾಡಿ, ಕಣ್ಣು, ತಿಲಕ, ಕಿರೀಟ, ಮನೆಯಲ್ಲಿರುವ ಆಭರಣ ಹಾಗೂ ಹೂವಿನ ಹಾರಗಳಿಂದ ಅಲಂಕರಿಸಲಾಗುತ್ತದೆ.ದೇವಿಗೆ ಪ್ರಿಯವಾದ ಹಸಿರು ಅಥವಾ ಕೆಂಪು ಬಣ್ಣದ ಸೀರೆ ಉಡಿಸುವುದು. ಸೇವಂತಿಗೆ, ಮಲ್ಲಿಗೆ, ಗುಲಾಬಿ ಹೂವುಗಳಿಂದ ಅಲಂಕಾರ ಮಾಡಿ, ಬಾಳೆಕಂಬ ಹಾಗೂ ಮಾವಿನೆಲೆ ತೋರಣ ಹಾಕಿದರೆ ಮಂಟಪದ ಸೌಂದರ್ಯ ಹೆಚ್ಚುತ್ತೆ. ಪರಿಸರ ಸ್ನೇಹಿ ವಸ್ತುಗಳಿಂದ ಅಲಂಕಾರ ಮಾಡುವುದು ಉತ್ತಮ. ಮಾರುಕಟ್ಟೆಯಲ್ಲಿ ಸಿಗುವ ಲಕ್ಷ್ಮೀ ಮುಖವಾಡ, ರೆಡಿಮೇಡ್ ಕಲಶಗಳನ್ನೂ ಬಳಸಬಹುದು. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಸರ್ಚ್ ಮಾಡಿದರೆ ಸಾಕು ವರಮಹಾಲಕ್ಷ್ಮಿ ಅಲಂಕಾರದ ತರಹೆವಾರಿ ವಿಡಿಯೋಗಳು ಸಿಗುತ್ತವೆ