ಬೆಂಗಳೂರು ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು

ಕರ್ನಾಟಕ ಮಹಾರಾಷ್ಟ್ರ ನಡುವಿನ ರೈಲು ಸೇವೆ ಮತ್ತಷ್ಟು ಬಲಿಷ್ಠ
Vande Bharat Sleeper Train between Bangalore Mumbai
ಬೆಂಗಳೂರು ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು
Published on: 

ಬೆಂಗಳೂರು : ಭಾರತೀಯ ರೈಲ್ವೆಯು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌ಎಂವಿಟಿ) ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ (ಸಿಎಸ್‌ಎಂಟಿ) ನಡುವೆ ವಂದೇ ಭಾರತ್ ಸ್ಲೀಪರ್ ಎಕ್ಸೃ್ಪ್ರೆಸ್ ರೈಲನ್ನು ಪರಿಚಯಿಸಲು ಸಜ್ಜಾಗಿದ್ದು, ಪ್ರಮುಖ ಮಹಾನಗರಗಳ ನಡುವಿನ ಸುದೀರ್ಘ ದೂರದ ರೈಲು ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿದೆ.

ರೈಲು ಸಂಖ್ಯೆ 06503 ಉದ್ಘಾಟನಾ ಏಕಮುಖ ವಿಶೇಷ ರೈಲು ಭಾನುವಾರ (ನ.1) ಸಂಚರಿಸಲಿದೆ. 16 ಬೋಗಿಗಳ ವಂದೇ ಭಾರತ್ ಸ್ಲೀಪರ್ ರೇಕ್ ಒಳಗೊಂಡಿರುವ ರೈಲು ಅಂದು 12.15ಕ್ಕೆ ಬೆಂಗಳೂರಿನಿಂದ ಹೊರಟು ಸೋಮವಾರ (ನ.2) 6.15ಕ್ಕೆ ಮುಂಬೈ ತಲುಪಲಿದೆ.

ಮಾರ್ಗಮಧ್ಯದಲ್ಲಿ ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ರಾಯಚೂರು, ಕೃಷ್ಣ, ಯಾದಗಿರಿ, ಕಲಬುರಗಿ, ಸೋಲಾಪುರ, ಪುಣೆ, ಲೋನಾವಾಲ ಮತ್ತು ಕಲ್ಯಾಣ್ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಉದ್ಘಾಟನೆಯ ನಂತರದ ದಿನಗಳಲ್ಲಿ ರೈಲು ಸಂಖ್ಯೆ 27652 ಸೋಮವಾರ ಹೊರತುಪಡಿಸಿ ಪ್ರತಿದಿನ ಮುಂಬೈನಿಂದ 19.45ಕ್ಕೆ ಹೊರಟು ಮರುದಿನ 11.55ಕ್ಕೆ ಬೆಂಗಳೂರು ತಲುಪಲಿದೆ. 27651 ರೈಲು ಬೆಂಗಳೂರಿನಿಂದ 19.45ಕ್ಕೆ ಹೊರಟು ಮರುದಿನ 11.55ಕ್ಕೆ ಮುಂಬೈ ತಲುಪಲಿದೆ. ಎರಡೂ ಕಡೆಗಳಿಂದ ಮಾರ್ಗ ಮಧ್ಯೆ ಅನಂತಪುರ, ಗುಂತಕಲ್, ರಾಯಚೂರು, ಯಾದಗಿರಿ, ಕಲಬುರಗಿ, ಸೋಲಾಪುರ, ಪುಣೆ ಮತ್ತು ಕಲ್ಯಾಣ್ ನಿಲ್ದಾಣಗಳಲ್ಲಿ ನಿಲ್ಲಲಿದೆ.