ಜಾಗತಿಕ ಸಮಸ್ಯೆಗೆ ವಚನಗಳು ಪರಿಹಾರ; ಗೊರುಚಗೆ ಶರಣ ಮುಕುಟ ಪ್ರಶಸ್ತಿ ಪ್ರದಾನ

ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರಿಗೆ ನಾಡೋಜ ಹಂಪ ನಾಗರಾಜಯ್ಯ ಶರಣ ಮುಕುಟ ಪ್ರಶಸ್ತಿ ಪ್ರದಾನ ಮಾಡಿದರು. ಡಾ.ಸಿ.ಸೋಮಶೇಖರ್, ಡಾ.ತ್ರಿನೇತ್ರ ಮಹಾಂತ ಸ್ವಾಮೀಜಿ ಇದ್ದರು.
ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರಿಗೆ ನಾಡೋಜ ಹಂಪ ನಾಗರಾಜಯ್ಯ ಶರಣ ಮುಕುಟ ಪ್ರಶಸ್ತಿ ಪ್ರದಾನ ಮಾಡಿದರು. ಡಾ.ಸಿ.ಸೋಮಶೇಖರ್, ಡಾ.ತ್ರಿನೇತ್ರ ಮಹಾಂತ ಸ್ವಾಮೀಜಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಾಗತಿಕ ಸಮಸ್ಯೆಗೆ ಬಸವಾದಿ ಶರಣರ ವಚನಗಳು ಪರಿಹಾರ
  • ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ್ ವ್ಯಾಖ್ಯಾನ
  • ಗೊ.ರು.ಚನ್ನಬಸಪ್ಪನವರಿಗೆ ಶರಣ ಮುಕುಟ ಪ್ರಶಸ್ತಿ ಪ್ರದಾನ

ಬೆಂಗಳೂರು:ಜಗತ್ತಿನಲ್ಲಿಉಲ್ಬಣಿಸುತ್ತಿರುವ ಅಶಾಂತಿ,ಯುದ್ಧ ಮತ್ತಿತರಸಮಸ್ಯೆಗಳಿಗೆ 12ನೇಶತಮಾನದ ಬಸವಾದಿ ಶರಣರ ವಚನಗಳಲ್ಲಿಪರಿಹಾರವಿದೆ ಎಂದು ಅಖಿಲ ಭಾರತಶರಣ ಸಾಹಿತ್ಯ ಪರಿಷತ್ ಅಧ್ಯಕ್ಷಡಾ.ಸಿ.ಸೋಮಶೇಖರ್ಹೇಳಿದರು.

ಜರಗನಹಳ್ಳಿವೀರಶೈವ ಸೇವಾ ಸಮಾಜ ಹಮ್ಮಿಕೊಂಡಿದ್ದಶ್ರೀ ಬಸವೇಶ್ವರ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.

ಬಸವಣ್ಣನವರುದಯವೇ ಧರ್ಮದ ಮೂಲವಯ್ಯ ಎಂದುಹೇಳಿದರು. ಶರಣರವಚನಗಳಲ್ಲಿ ದಯೆ,ಸಮಾನತೆ,ಮಾನವೀಯ ಮೌಲ್ಯಗಳುಪ್ರತಿಪಾದಿಸಲ್ಪಟ್ಟಿದ್ದು,ಇವುಗಳನ್ನುಸರಿಯಾಗಿ ಅರ್ಥೈಸಿಕೊಂಡು,ಅನುಷ್ಟಾನಕ್ಕೆತಂದರೆ ಜಗತ್ತಿನಲ್ಲಿ ನಡೆಯುತ್ತಿರುವಯುದ್ಧದಂತಹ ಸನ್ನಿವೇಶಗಳುಮುಂದುವರೆಯುವುದಿಲ್ಲ ಎಂದುಸೋಮಶೇಖರ್ ವಿವರಿಸಿದರು.

ಹಿರಿಯಸಾಹಿತಿ ಗೊ.ರು.ಚನ್ನಬಸಪ್ಪಅವರಿಗೆ ನಾಡೋಜ ಹಂಪ ನಾಗರಾಜಯ್ಯಶರಣ ಮುಕುಟ ಪ್ರಶಸ್ತಿ ಪ್ರದಾನಮಾಡಿದರು. ಮೈಸೂರುಚಂದ್ರವನ ಆಶ್ರಮ ಬೇಬಿ ಮಠದ ಶ್ರೀತ್ರಿನೇತ್ರ ಮಹಾಂತ ಸ್ವಾಮೀಜಿಸಾನ್ನಿಧ್ಯ ವಹಿಸಿದ್ದರು.ವೀರಶೈವ ಸೇವಾಸಮಾಜದ ಅಧ್ಯಕ್ಷ ಎಂ.ಎನ್.ದಿನೇಶ್,ಸ್ವರ್ಣಗೌರಿಮತ್ತಿತರರು ಉಪಸ್ಥಿತರಿದ್ದರು.

ಶರಣರ ಆದರ್ಶಗಳು ಸಮಾಜಕ್ಕೆ ಉತ್ತಮ ದಾರಿದೀವಿಗೆ. ಸಮಾಜದಲ್ಲಿ ನನಗಿಂತಲೂ ಕೆಲಸ ಮಾಡಿರುವ ಹಲವು ಗಣ್ಯರಿದ್ದಾರೆ. ಶರಣ ಚಿಂತನೆಯ ಪ್ರಭಾವ ಒಂದಿಷ್ಟು ಕೆಲಸ ಮಾಡಲು ನನಗೆ ಪ್ರೇರಣೆ ನೀಡಿದೆ.

— ಗೊ.ರು.ಚನ್ನಬಸಪ್ಪ, ಪ್ರಶಸ್ತಿ ಪುರಸ್ಕೃತರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net