ಆ.29ರಂದು ಬೆಳಗ್ಗೆ 11.15ಕ್ಕೆ ಕನ್ನಡ ಭವನದ ಕಲಾ ಸೌಧದಲ್ಲಿ ಹಿರಿಯ ಚಿತ್ರಕಲಾವಿದ ಡಾ.ಎ.ಎಸ್.ಪಾಟೀಲ್ ಸಾರಥ್ಯದ ಚೈತನ್ಯಮಯಿ ಆರ್ಟ್ ಟ್ರಸ್ಟ್ನಿಂದ ಬಸವಾದಿ ಶರಣರ ಸಂಬಂಧಿತ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಆ.30ರಂದು ಬೆಳಗ್ಗೆ 10.45ಕ್ಕೆ ನೆಲೋಗಿ ವಿರಕ್ತ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ವಚನ ಸಾಹಿತ್ಯ ಸಮ್ಮೇಳನವನ್ನು ಹಿರಿಯ ಲೇಖಕಿ ಡಾ.ಜಯದೇವಿ ಗಾಯಕವಾಡ ಉದ್ಘಾಟಿಸುವರು. ಸಾರಂಗಮಠದ ಜಗದ್ಗುರು ಶ್ರೀ ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಪದ್ಮಶ್ರೀ ಪುರಸತೆ ಡಾ.ವಿಜಯಲಕ್ಷ್ಮೀ ದೇಶಮಾನೆ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಮಲ್ಲಿಕಾರ್ಜುನ ವಡ್ಡನಕೇರಿ, ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಂ.ಪಾಟೀಲ್ ಕಲ್ಲೂರ, ಅಕಾಡೆಮಿ ಕಾರ್ಯಾಧ್ಯಕ್ಷ ಶಿವರಾಜ ಅಂಡಗಿ, ಉದ್ಯಮಿ ರವಿ ವಿಭೂತಿ, ಮಾಜಿ ಮಹಾಪೌರ ಶರಣು ಮೋದಿ, ಡಾ.ಗಣಪತಿ ಸಿಂಧೆ ಭಾಗವಹಿಸಲಿದ್ದಾರೆ. ಶರಣ ದಂಪತಿಗೆ ಬಸವ ಗೌರವ ಪುರಸ್ಕಾರ ಏರ್ಪಡಿಸಲಾಗಿದೆ ಎಂದು ಹೇಳಿದ್ದಾರೆ.