

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಉತ್ತರಹಳ್ಳಿಗ್ರಾಮದಲ್ಲಿರುವ ಐತಿಹಾಸಿಕಶ್ರೀವೀರಾಂಜನೇಯ ಸ್ವಾಮಿಬ್ರಹ್ಮರಥೋತ್ಸವ ಮಂಗಳವಾರ (ಡಿ.2)ನಡೆಯಲಿದೆ.
ಮೂರುದಿನಗಳ ಕಾಲ ನಡೆಯುವ ಪೂಜಾಕೈಂಕರ್ಯಗಳಲ್ಲಿ ಇಷ್ಟದೇವತಾಪ್ರಾರ್ಥನೆ,ಯಾಗಶಾಲಾ ಪ್ರವೇಶಗುರುಪ್ರಾರ್ಥನೆ,ಗುರು ಗಣಪತಿಹೋಮ,ಪುಣ್ಯಾಹ ದೇವನಾಂದಿಸೂತ್ರಾಭಿಷೇಕ ರಕ್ಷಾಬಂಧನ,ರಾಕ್ಷಘ್ನಹೋಮ,ಅಘೋರಾಸ್ತ್ರಹೋಮ,ಧ್ವಜಾರೋಹಣಬಲಿಪ್ರಧಾನ,ಗಜವಾಹನೋತ್ಸವ,ಮಂಗಳಾರತಿಸೇರಿದಂತೆ ಉತ್ಸವಾದಿಗಳು ವಸಂತಪುರದಶ್ರೀ ಭವಾನಿಶಂಕರ ಸ್ವಾಮಿ ಪ್ರಧಾನಅರ್ಚಕರಾದ ಶಿವಸ್ವಾಮಿಗಳ ಮಕ್ಕಳಿಂದವೈದಿಕಾಗಮ ಪ್ರಕಾರವಾಗಿ ಜರುಗಲಿವೆ.
ಹನುಮಜಯಂತಿಯಂದು ಉತ್ತರಹಳ್ಳಿಯ ನಾಗಮ್ಮಮತ್ತು ಮುನಿಸ್ವಾಮಪ್ಪರವರಸ್ಮರಣಾರ್ಥವಾಗಿ ಅವರ ಕುಟುಂಬಸ್ಥರುನಿರ್ಮಿಸಿ ಕೊಟ್ಟಿರುವ ಸ್ವರ್ಣಲೇಪಿತರಥದಲ್ಲಿ ಶ್ರೀವೀರಾಂಜನೇಯ ಸ್ವಾಮಿಉತ್ಸವ ಮೂರ್ತಿ ಇರಿಸಿ ಬ್ರಹ್ಮರಥೋತ್ಸವ ನಡೆಯಲಿದೆ.