ಸಾವಯವ ಗೊಬ್ಬರ ಬಳಸಿ ಮಣ್ಣು ರಕ್ಷಿಸಿ

ಸವದತ್ತಿ ತಾಲೂಕಿನ ಕಾರಿಮನಿ ಗ್ರಾಮದಲ್ಲಿ ತೆನಿಕೊಳ್ಳದ ಕೆಎಲ್‌ಇ ಕಷಿ ವಿಜ್ಞಾನ ಕಾಲೇಜಿನಿಂದ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ಶಿಬಿರದಲ್ಲಿ ಮಣ್ಣಿನ ಆರೋಗ್ಯ ನಿರ್ವಹಣೆ ಸಂವಾದ ಕಾರ್ಯಕ್ರಮ ಜರುಗಿತು. ಎಸ್.ಎಂ.ವಾರದ, ಡಾ.ಅರುಣ ಕಣಗಲಬಾವಿ, ಡಾ.ಮುತ್ತಪ್ಪ ಚಿಗಡೊಳ್ಳಿ, ಡಾ.ಮಧುರಿಮಾ, ಡಾ.ಪ್ರವೀಣಕುಮಾರ, ಡಾ.ಬಾಳೇಶ ಗೌಡಪ್ಪನವರ ಇತರರಿದ್ದರು.

Published on

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಅತಿಯಾದ ರಾಸಾಯನಿಕ ರಸಗೊಬ್ಬರ ಬಳಕೆಯಿಂದ ಮಣ್ಣಿನ ಲವತ್ತತೆ ಹಾಳಾಗುತ್ತಿದೆ. ಆದ್ದರಿಂದ ರೈತರ ಸಾವಯವ ಗೊಬ್ಬರ ಬಳಕೆ ಮಾಡುವ ಮೂಲಕ ಮಣ್ಣನ್ನು ಸಂರಕ್ಷಿಸಬೇಕು ಎಂದು ಕೆಎಲ್‌ಇ ಕಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಎಸ್.ಎಂ.ವಾರದ ಸಲಹೆ ನೀಡಿದರು.
ತೆನಿಕೊಳ್ಳದ ಕೆಎಲ್‌ಇ ಕಷಿ ವಿಜ್ಞಾನ ಕಾಲೇಜಿನ ಬಿ.ಎಸ್ಸಿ. (ಕಷಿ) ವಿದ್ಯಾರ್ಥಿಗಳಿಂದ ಸವದತ್ತಿ ತಾಲೂಕಿನ ಕಾರಿಮನಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಈಚೆಗೆ ಮಣ್ಣಿನ ಆರೋಗ್ಯ ನಿರ್ವಹಣೆ ಕುರಿತು ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಣ್ಣಿನ ಆರೋಗ್ಯ ನಿರ್ವಹಣೆ, ಸಮತೋಲಿತ ಪೋಷಕಾಂಶಗಳ ಬಳಕೆ ಮತ್ತು ಸುಸ್ಥಿರ ಕಷಿ ಪದ್ಧತಿಗಳು ಮಣ್ಣಿನ ಉತ್ಪಾದಕತೆ ಮತ್ತು ಬೆಳೆ ಇಳುವರಿ ಹೆಚ್ಚಲು ಕಾರಣವಾಗುತ್ತವೆ. ನ್ಯಾನೋ ಯೂರಿಯಾ, ಸಂಕೀರ್ಣ ರಸಗೊಬ್ಬರ, ಕಾಂಪೋಸ್ಟ್, ಹಸಿರು ಗೊಬ್ಬರ ಮತ್ತು ಜೈವಿಕ ಗೊಬ್ಬರಗಳನ್ನು ಬಳಸಿ, ಸಮಗ್ರ ಪೋಷಕಾಂಶ ನಿರ್ವಹಣಾ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಹಾಯಕ ಪ್ರಾಧ್ಯಾಪಕರಾದ ಡಾ.ಅರುಣ ಕಣಗಲಬಾವಿ, ಡಾ.ಮುತ್ತಪ್ಪ ಚಿಗಡೊಳ್ಳಿ, ಡಾ.ಮಧುರಿಮಾ, ಡಾ.ಬಾಳೇಶ ಗೌಡಪ್ಪನವರ, ಡಾ.ಪ್ರವೀಣಕುಮಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net