ಹೋಟೆಲ್​ಗಳಲ್ಲಿ ಗೃಹ ಬಳಕೆ ಸಿಲಿಂಡರ್​ ಬಳಕೆ!

ಹೋಟೆಲ್​ಗಳಲ್ಲಿ ಗೃಹ ಬಳಕೆ ಸಿಲಿಂಡರ್​ ಬಳಕೆ!
ಹೋಟೆಲ್​ಗಳಲ್ಲಿ ಗೃಹ ಬಳಕೆ ಸಿಲಿಂಡರ್​ ಬಳಕೆ!
Published on
ಬಂಗಾರಪೇಟೆ: ನಗರದ ವಿವಿಧ ಹೋಟೆಲ್​ಗಳ ಮೇಲೆ ಭಾನುವಾರ ತಹಸೀಲ್ದಾರ್​ ಸುಜಾತಾ ದಾಳಿ ನಡೆಸಿ 6 ಗೃಹಬಳಕೆ ಸಿಲಿಂಡರ್​ಗಳನ್ನು ವಶಕ್ಕೆ ಪಡೆದುಕೊಂಡರು. hotels!
ಜಿಲ್ಲಾಧಿಕಾರಿಗಳ ಆದೇಶದಂತೆ ಹೋಟೆಲ್​ಗಳ ಮೇಲೆ ದಾಳಿ ನಡೆಸಿ ಸಿಲಿಂಡರ್​ ಪರಿಶೀಲಿಸಿದಾಗ ಅನಧಿಕೃತವಾಗಿ ಬಳಸುತ್ತಿದ್ದ 6 ಸಿಲಿಂಡರ್​ ವಶಕ್ಕೆ ಪಡೆದುಕೊಂಡಿದ್ದೇವೆ. ಹೋಟೇಲ್​ ಮಾಲೀಕರ ವಿರುದ್ಧ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತೇವೆ ಎಂದು ತಹಸೀಲ್ದಾರ್​ ತಿಳಿಸಿದರು.
ನಗರದ ಸುರುಬಿ ಹೋಟೆಲ್​ನಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಅಡುಗೆಗೆ ಬಳಸುತ್ತಿರುವ ನೀರು ಸಹ ಅಶುದ್ಧತೆಯಿಂದ ಕೂಡಿದ್ದು, ನೀರನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗುವುದು. ಪರೀಕ್ಷೆಯಲ್ಲಿ ಲೋಪದೋಷ ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹೋಟೆಲ್​ಗಳಲ್ಲಿ ಮನೆ ಸಿಲಿಂಡರ್​ ಬಳಸಿದ್ದು ಕಂಡು ಬಂದಲ್ಲಿ ಹಾಗೂ ಅಕ್ರಮವಾಗಿ ರೀಫಿಲ್ಲಿಂಗ್​ ಮಾಡುವುದು ಕಂಡುಬಂದಲ್ಲಿ ತಕ್ಷಣ ತಾಲೂಕು ಆಡಳಿತ ಹಾಗೂ ನಗರಸಭೆ ಕಚೇರಿಗೆ ತಿಳಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪುರಸಭೆ ಮುಖ್ಯಅಧಿಕಾರಿ ಸತ್ಯನಾರಾಯಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net