ರಾಷ್ಟ್ರದ ಏಕತೆ, ಅಖಂಡತೆ ಕಾಪಾಡಲು ಶಿಕ್ಷಣ ಬಳಸಿ / ANEKAL

ಆನೇಕಲ್​ ತಾಲೂಕಿನ ಅತ್ತಿಬೆಲೆಯಲ್ಲಿ ಶಾರದಾ ಇಂಟರ್​ ನ್ಯಾಷನಲ್​ ಶಾಲೆಯಲ್ಲಿ ಆಯೋಜಿಸಿದ್ದ ಕ್ರೀಡಾ ಸಂಕೀರ್ಣವನ್ನು ರಾಜ್ಯಪಾಲ ಥಾವರ್​ ಚಂದ್​ ಗೆಹಲೋತ್​ ಉದ್ಘಾಟಿಸಿದರು. ತಮಿಳುನಾಡು ಥಳಿ ವಿಧಾನಸಭಾ ಕ್ಷೇತ್ರದ ಶಾಸಕ ರಾಮಚಂದ್ರನ್​, ವಿಧಾನ ಪರಿಷತ್​ ಸದಸ್ಯ ಪುಟ್ಟಣ್ಣ, ಶಾರದಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಯೋಗೇಶ್​ ಕೃಷ್ಣಪ್ಪ ಇದ್ದರು.

Published on
ಆನೇಕಲ್​ : ವಿದ್ಯಾರ್ಥಿಗಳು ಜ್ಞಾನ, ಬೌದ್ಧಿಕ ಶಕ್ತಿಯನ್ನು ಬಲಿಷ್ಟ ಹಾಗೂ ಆತ್ಮನಿರ್ಭರ ಭಾರತ ನಿಮಾರ್ಣಕ್ಕೆ ಬಳಸಿಕೊಳ್ಳಬೇಕು ಎಂದು ರಾಜ್ಯಪಾಲ ಥಾವರ್​ ಚಂದ್​ ಗೆಹಲೋತ್​ ಹೇಳಿದರು.
ತಾಲೂಕಿನ ಅತ್ತಿಬೆಲೆಯಲ್ಲಿ ಸೋಮವಾರ ಶಾರದಾ ಇಂಟರ್​ ನ್ಯಾಷನಲ್​ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ರೀಡಾ ಸಂಕೀರ್ಣದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಯಶಸ್ಸು ಸಾಧಿಸಲು ಶಿಕ್ಷಣ ಅವಶ್ಯಕ. ವಿದ್ಯಾರ್ಥಿಗಳು ಶಿಕ್ಷಣವನ್ನು ರಾಷ್ಟ್ರದ ಏಕತೆ ಮತ್ತು ಅಖಂಡತೆ ಕಾಪಾಡಲು ಬಳಸಿಕೊಳ್ಳಬೇಕು. ಸಮಾಜದ ಸಬಲೀಕರಣಕ್ಕಾಗಿ ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆಯಬೇಕು. ಶಿಕ್ಷಣ ಸಂಸ್ಥೆಗಳು ವಿಕಸಿತ ಭಾರತದ ನಿಮಾರ್ಣಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಮತ್ತು ಸಮಾಜವನ್ನು ಸಬಲೀಕರಣಗೊಳಿಸಬೇಕು ಎಂದರು. 
ಭಾರತವು ಸಾಂಸತಿಕ ಪರಂಪರೆ ಹೊಂದಿರುವ ನೆಲ. ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆಯನ್ನು ವಿಶ್ವಕ್ಕೆ ನೀಡಿದ ಹೆಗ್ಗಳಿಕೆ ಭಾರತಕ್ಕೆ ಸಲ್ಲುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಸಮ ಸಮಾಜದ ನಿಮಾರ್ಣಕ್ಕೆ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು. ಶಾಸಕ ಬಿ.ಶಿವಣ್ಣ ಮಾತನಾಡಿ, ಶಿಕ್ಷಣ ಹೆಚ್ಚಾಗುತ್ತಿದ್ದಂತೆ ವೃದ್ಧಾಶ್ರಮಗಳೂ ಹೆಚ್ಚಾಗುತ್ತಿರುವುದು ಆತಂಕಕಾರಿ ಎಂದರು.
ತಮಿಳುನಾಡು ಥಳಿ ವಿಧಾನಸಭಾ ಕ್ಷೇತ್ರದ ಶಾಸಕ ರಾಮಚಂದ್ರನ್​, ವಿಧಾನ ಪರಿಷತ್​ ಸದಸ್ಯ ಪುಟ್ಟಣ್ಣ, ಶಾರದಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಯೋಗೇಶ್​ ಕೃಷ್ಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಮೂರ್ತಿ, ಬಿಗ್​ಬಾಸ್​ ವಿಜೇತ ಗಿಲ್ಲಿ ನಟ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net