ಕೆರೆ ನೀರು ಅಕ್ರಮ ಬಳಕೆ ತಡೆಗೆ ಪಟ್ಟು lake water

ಕೆರೆ ನೀರು ಅಕ್ರಮ ಬಳಕೆ ತಡೆಗೆ ಪಟ್ಟು lake water
ಕೆರೆ ನೀರು ಅಕ್ರಮ ಬಳಕೆ ತಡೆಗೆ ಪಟ್ಟು lake water
Published on
ಕೆಜಿಎಫ್: ತಾಲೂಕಿನ ಅಲ್ಲಿಕಲ್ಲು ಗ್ರಾಮದ ಕೆಂಜಾಗುಂಟೆ ಕೆರೆಯಲ್ಲಿ ಆಂಧ್ರಪ್ರದೇಶದ ವ್ಯಕ್ತಿಯೊಬ್ಬರು ಮೋಟಾರ್ ಅಳವಡಿಸಿ ಅಕ್ರಮವಾಗಿ ನೀರು ತೆಗೆಯುತ್ತಿರುವುದನ್ನು ತಡೆಯುವಂತೆ ಒತ್ತಾಯಿಸಿ ನಗರದ ತಾಲೂಕು ಆಡಳಿತಸೌಧ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. lake water
ಗ್ರಾಮದ ಕೆಂಜಾಗುಂಟೆ ಕೆರೆಯ ನೀರನ್ನು ಗ್ರಾಮಸ್ಥರು ದೈನಂದಿನ ಅವಶ್ಯಕತೆಗಳಿಗಾಗಿ ಅವಲಂಬಿಸಿದ್ದಾರೆ. ಆದರೆ, ಅಕ್ರಮವಾಗಿ ಕೆರೆಯಲ್ಲಿ ಮೋಟಾರ್ ಅಳವಡಿಸಿಕೊಂಡು ನೀರನ್ನು ಜಮೀನಿಗೆ ಹರಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಲು ಹೋದರೆ ಅವಾಚ್ಯವಾಗಿ ನಿಂದಿಸಿ, ದೌರ್ಜನ್ಯವೆಸಗುತ್ತಿದ್ದಾರೆ. ಅಲ್ಲದೆ ಕೆರೆಯ ಕಾಲುವೆಯನ್ನು ಮುಚ್ಚಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
ಕೂಡಲೇ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net